ETV Bharat / state

ಮಂಗಳೂರು ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು: ಜಿ.ಎ.ಬಾವ ಆಗ್ರಹ

ಮಂಗಳೂರಿನಲ್ಲಿ ಕಾನೂನಿಗೆ ವಿರುದ್ಧವಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಜಿ.ಎ.ಬಾವ ಒತ್ತಾಯಿಸಿದ್ದಾರೆ.

Former police officer G A Bawa
ಮಾಜಿ ಪೊಲೀಸ್ ಅಧಿಕಾರಿ ಜಿ ಎ ಬಾವ
author img

By

Published : Dec 22, 2019, 3:04 PM IST

ಮಂಗಳೂರು: ಮಂಗಳೂರಿನಲ್ಲಿ ಕಾನೂನಿಗೆ ವಿರುದ್ಧವಾಗಿ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಹಾಗಾಗಿ ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವ ಆಗ್ರಹಿಸಿದ್ರು.

ಮಾಜಿ ಪೊಲೀಸ್ ಅಧಿಕಾರಿ ಜಿ.ಎ. ಬಾವ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ಮಾಡಿದ ಫೈರಿಂಗ್ ಕಾನೂನು ವಿರೋಧಿಯಾಗಿದೆ. ಕಳೆದ ಕೆಲವು ದಿನಗಳಿಂದ ಎನ್ಆರ್​ಸಿ ಬಗ್ಗೆ ಪ್ರತಿಭಟನೆ ನಡೆಯುತ್ತಿದ್ದರೂ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಸಭೆ ನಡೆಸಿಲ್ಲ. ಫೈರಿಂಗ್ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನಿಯಮಾವಳಿಗಳಿದ್ದು, ಮೊದಲು ಮೈಕ್ ಮೂಲಕ ಎಚ್ಚರಿಕೆ ನೀಡಬೇಕು. ಎರಡು ಬಾರಿಯ ಫೈರಿಂಗ್ ನಡುವೆ ಸಮಯಾವಕಾಶ ಇರಬೇಕು. ಆದರೆ ಇದೆಲ್ಲವನ್ನೂ ಇಲ್ಲಿ ಪೊಲೀಸರು ಪಾಲಿಸಿಲ್ಲ ಎಂದರು.

ಎರಡು ಗುಂಡು ಹಾರಾಟ ನಡೆದ ಸ್ಥಳವನ್ನು ಪರಿಶೀಲಿಸಿದ್ದೇನೆ. ಒಂದು ಬಂದರು ಠಾಣೆಯಿಂದ ಸುಮಾರು 700 ಮೀಟರ್ ದೂರವಿದೆ. ಮತ್ತೊಂದು ಬಂದರು ಠಾಣೆಯಿಂದ 200 ಮೀಟರ್ ದೂರದಲ್ಲಿದೆ. ಫೈರಿಂಗ್ ಬಗ್ಗೆ ಕೂಲಂಕಷವಾಗಿ ತನಿಖೆಯಾಗಿ ಸತ್ಯಸಂಗತಿ ಹೊರಬರಬೇಕಾಗಿದೆ. ಪೊಲೀಸರು ಯಾರಿಗೋ ಸಂತೋಷಪಡಿಸುವ ಸಲುವಾಗಿ ಇಬ್ಬರನ್ನು ಗುಂಡಿಟ್ಟು ಸಾಯಿಸಿದ್ದಾರೆ ಎಂದು ಘಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ರು.

Intro:ಮಂಗಳೂರು: ಮಂಗಳೂರು ಗೋಲಿಬಾರ್ ನಲ್ಲಿ ಫೈರಿಂಗ್ ಮಾಡಿದ ವಿಧಾನವೆ ಸರಿಯಿರಲಿಲ್ಲ. ಗೋಲಿಬಾರ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಮಾಜಿ ಪೊಲೀಸ್ ಅಧಿಕಾರಿ, ಕೆಪಿಸಿಸಿ ಕಾರ್ಯದರ್ಶಿ ಜಿ ಎ ಬಾವ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಮಾತನಾಡಿದ ಅವರು ಪೊಲೀಸರು ಮಾಡಿದ ಫೈರಿಂಗ್ ಕಾನೂನು ವಿರೋಧಿಯಾಗಿದೆ. ಕಳೆದ ಕೆಲವು ದಿನಗಳಿಂದ ಎನ್ ಆರ್ ಸಿ ಬಗ್ಗೆ ಪ್ರತಿಭಟನೆ ನಡೆಯುತ್ತಿದ್ದರೂ ಠಾಣಾ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗಿಲ್ಲ. ಫೈರಿಂಗ್ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ನಿಯಮಾವಳಿದೆ. ಫೈರಿಂಗ್ ಬಗ್ಗೆ ಮೊದಲೇ ಮೈಕ್ ಮೂಲಕ ಎಚ್ಚರಿಕೆ ನೀಡಬೇಕು. ಎರಡು ಫೈರಿಂಗ್ ನಡುವೆ ಸಮಯಾವಕಶ ಇರಬೇಕು. ಆದರೆ ಇದೆಲ್ಲವನ್ನು ಇಲ್ಲಿ ಪಾಲಿಸಲಾಗಿಲ್ಲ ಎಂದರು.
ಎರಡು ಗುಂಡು ಹಾರಟಯ ನಡೆದ ಸ್ಥಳವನ್ನು ಪರಿಶೀಲಿಸಿದ್ದೇನೆ. ಒಂದು ಬಂದರು ಠಾಣೆಯಿಂದ ಸುಮಾರು 700 ಮೀಟರ್ ದೂರವಿದೆ. ಮತ್ತೊಂದು ಬಂದರು ಠಾಣೆಯಿಂದ 200 ಮೀಟರ್ ದೂರವಿದೆ. ಫೈರಿಂಗ್ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಿ ಸತ್ಯ ಸಂಗತಿ ಹೊರಬರಬೇಕಾಗಿದೆ. ಯಾರಿಗೋ ಸಂತೋಷಪಡಿಸುವ ಸಲುವಾಗಿ ಸಾಯಿಸಿದ್ದಾರೆ ಎಂದು ಹೇಳಿದರು.
ಬೈಟ್- ಜಿ ಎ ಬಾವ, ಮಾಜಿ ಪೊಲೀಸ್ ಅಧಿಕಾರಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.