ETV Bharat / state

ಸುರತ್ಕಲ್​ನ ಎನ್​ಐಟಿಕೆಯಲ್ಲಿದೆ ಉದ್ಯೋಗಾಕಾಶ; 107 ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

ಒಟ್ಟು 107 ಹುದ್ದೆಗಳ ಭರ್ತಿಗೆ ನೇಮಕಾತಿಗೆ ಮುಂದಾಗಲಾಗಿದೆ. ಈ ಹುದ್ದೆ ಕುರಿತ ವಿವರ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಗಿನಂತಿದೆ.

author img

By

Published : Jun 3, 2023, 5:19 PM IST

Job opportunity in NITK, Suratkal; 107 Invitation to apply for the post of Instructor

ಮಂಗಳೂರಿನ ಸುರತ್ಕಲ್​ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್​ಐಟಿಕೆ)ನಲ್ಲಿ ಖಾಲಿ ಇರುವ ವಿವಿಧ ಬೋಧಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೋಧಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಪದವೀಧರ ಅಭ್ಯರ್ಥಿಗಳು ಇದು ಉತ್ತಮ ಅವಕಾಶ ಆಗಿದೆ. ಒಟ್ಟು 107 ಹುದ್ದೆಗಳ ಭರ್ತಿಗೆ ನೇಮಕಾತಿಗೆ ಮುಂದಾಗಲಾಗಿದೆ. ಈ ಹುದ್ದೆ ಕುರಿತ ವಿವರ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿಗಳು ಕೆಳಗಿನಂತಿದೆ.

ಹುದ್ದೆ ವಿವರ: ಅಸಿಸ್ಟಂಟ್​ ಪ್ರಫೆಸರ್​​, ಪ್ರೊಫೆಸರ್​ ಹುದ್ದೆಗಳಿಗೆ ನೇಮಕಾತಿಗೆ ಕ್ರಮಕ್ಕೆ ಮುಂದಾಗಲಾಗಿದೆ. ಸಿಎಸ್​ಇ, ಐಟಿ, ಎಂಎಸಿಎಸ್​ ಮತ್ತು ಎಂಇ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅಧ್ಯಾಪಕರ ಹುದ್ದೆ ಭರ್ತಿ ಮಾಡಲಾಗುತ್ತಿದೆ.

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ಎಂಎಸ್ಸಿ, ಪಿಎಚ್​ಡಿ, ಬಿಇ, ಬಿಟೆಕ್​, ಎಂಇ ಮತ್ತು ಎಂಟೆಕ್​ ಪಿಎಚ್​ಡಿ ಪದವಿಗಳನ್ನು ಪೂರ್ಣಗೊಳಿಸಿರಬೇಕು. ಈ ಹುದ್ದೆಗಳಿಗೆ ಆರು ತಿಂಗಳ ಹುದ್ದೆ ಅನುಭವದೊಂದಿಗೆ 60ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದರಲ್ಲಿ ಗ್ರೇಡ್​ 2 ನ 54 ಹುದ್ದೆಗಳು ತಾತ್ಕಾಲಿಕವಾಗಿದ್ದು, ಐದು ವರ್ಷ ಹುದ್ದೆ ಅವಧಿ ಹೊಂದಿದೆ ಉಳಿದ 31 ಹುದ್ದೆಗಳನ್ನು ಸಾಮಾನ್ಯ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.

ಅಧಿಸೂಚನೆ
ಅಧಿಸೂಚನೆ

ಗ್ರೇಡ್​ 1 ಹುದ್ದೆಗೆ ಪೇ ವೆಲ್ತ್​​ 12ಪ್ರಕಾರ 7ನೇ ಸಿಪಿಸಿ ಆಧಾರದ ವೇತನ ಮತ್ತು ಗ್ರೇಡ್​ 2ಗೆ ಪೇ ಲೆವೆಲ್​ 10/11 ಆಧಾರದ ಮೇಲೆ 7ನೇ ಸಿಪಿಸಿ ಆಧಾರದ ಮೇಲೆ ವೇತನ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮತ್ತು ರಿಜಿಸ್ಟರ್​ ಪೋಸ್ಟ್​ ಮೂಲಕ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರಿಗೆ 1000 ರೂ. ಅರ್ಜಿ ಶುಲ್ಕ ಮತ್ತು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 2500 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಪರಿಶೀಲನೆ ಮಾಡುವುದು ಅಗತ್ಯ. ನೀಡಲಾಗಿರುವ ಅರ್ಜಿಯಲ್ಲಿ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಭರ್ತಿ ಮಾಡಬೇಕು. ಅರ್ಜಿ ಶುಲ್ಕ ಸೇರಿದಂತೆ ಇನ್ನಿತರ ವಿವರಗಳೊಂದಿಗೆ ಕೆಳಗೆ ನೀಡಿರುವ ವಿಳಾಸಕ್ಕೆ ಕಡೆಯ ದಿನಕ್ಕೆ ಮೊದಲು ಅರ್ಜಿ ಸಲ್ಲಿಕೆಯಾಗುವಂತೆ ಪೋಸ್ಟ್​ ಮಾಡುವುದು ಅವಶ್ಯವಾಗಿದೆ.

ಅರ್ಜಿ ಸಲ್ಲಿಕೆ ವಿಳಾಸ, ರಿಜಿಸ್ಟರ್​, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ಎನ್​ಐಟಿಕೆ) ಸುರತ್ಕಲ್​, ಮಂಗಳೂರು- 575025. ಈ ಹುದ್ದೆಗಳಿಗೆ ಈಗಾಗಲೇ ಜೂನ್​ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 23 ಆಗಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ nitk.ac.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿವೆ ಉದ್ಯೋಗಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.