ETV Bharat / state

ಸ್ಮಶಾನದೊಳಗೊಂದು ವನವ ಮಾಡಿದ 'ಜೀತ್ ಮಿಲನ್ ರೋಚ್'...! - ಜೀತ್ ಮಿಲನ್ ರೋಚ್

ಜನರಿಗಿರುವ ಸ್ಮಶಾನದ ಭಯವನ್ನೇ, ಲಾಭವಾಗಿ ಪಡೆದ 'ಜೀತ್ ಮಿಲನ್ ರೋಚ್' ಎಂಬುವರು ಸ್ಮಶಾನದಲ್ಲಿಯೇ ಸಾವಿರಾರು ಗಿಡಗಳನ್ನು ಬೆಳೆಸುತ್ತಿದ್ದಾರೆ. ಅವರ ಬದುಕು ಮತ್ತು ಪರಿಸರ ಪ್ರೀತಿಯ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ತಿಳಿಯೋಣ..

environmentalist story
ಸ್ಮಶಾನದೊಳಗೊಂದು ವನವ ಮಾಡಿ ಜೀತವಗೈದ 'ಜೀತ್ ಮಿಲನ್ ರೋಚ್'...!
author img

By

Published : Jun 7, 2020, 6:11 PM IST

Updated : Jun 7, 2020, 7:43 PM IST

ಮಂಗಳೂರು: ಜೂ.5ರ ಪರಿಸರ ದಿನದಂದು ಗಿಡ ನೆಡುವ ಒಂದು ದಿನದ ಪರಿಸರ ಪ್ರೇಮಿಗಳೇ ತುಂಬಿರುವ ಈ ಲೋಕದಲ್ಲಿ ವಿಶಿಷ್ಟ ಪರಿಸರ ಪ್ರೇಮಿಯೊಬ್ಬ ಮಂಗಳೂರಿನಲ್ಲಿದ್ದಾರೆ. ತಾನು ನೆಡುವ ಗಿಡ ಬೆಳೆದು ಹೆಮ್ಮರವಾಗಿ, ನೂರಾರು ವರ್ಷ ಇರಬೇಕೆಂದು ಇವರು ಗಿಡ ಬೆಳೆಸುವುದೇ ಸ್ಮಶಾನದಲ್ಲಿ. ಯಾರೀ ಸ್ಮಶಾನವನದ ವನ್ಯಪ್ರೇಮಿ ಎನ್ನುವುದಕ್ಕೆ ಈ ಸುದ್ದಿ ನೋಡಿ.

ಜನರಿಗಿರುವ ಸ್ಮಶಾನದ ಭಯವನ್ನೇ, ಲಾಭವಾಗಿ ಪಡೆದ 'ಜೀತ್ ಮಿಲನ್ ರೋಚ್' ಎಂಬುವರು ಸ್ಮಶಾನದಲ್ಲಿಯೇ ಸಾವಿರಾರು ಗಿಡಗಳನ್ನು ಬೆಳೆಸುತ್ತಿದ್ದಾರೆ. ಈ ವರ್ಷವೂ ಮಳೆಗಾಲ ಆರಂಭದಿಂದಲೇ ತಮ್ಮ ಗಿಡ ನೆಡುವ ಕಾರ್ಯಕ್ಕೆ ಚುರುಕು ನೀಡಿರುವ ಇವರು ಮಂಗಳೂರಿನ ನಂದಿಗುಡ್ಡೆ ಸ್ಮಶಾನದ ಹಿಂಬದಿಯ ಎಕರೆಗಟ್ಟಲೆ ಜಾಗದಲ್ಲಿ ಗಿಡ ನೆಡುವ ಕಾಯಕದಲ್ಲಿ ತೊಡಗಿದ್ದಾರೆ‌‌. ಈ ಬಾರಿ ಕದಂಬ, ಸಂಪಿಗೆ, ಮಾವು, ಹಲಸು, ಬೇವು ಸೇರಿದಂತೆ ಸುಮಾರು 2,400 ಗಿಡಗಳನ್ನು ನೆಡುತ್ತಿದ್ದಾರೆ.

ಈ ಬಾರಿ ತಮ್ಮ ಮಗನೂ ಸೇರಿ ನಗರದ ಅಲೋಶಿಯಸ್ ಕಾಲೇಜಿನ 12 ವಿದ್ಯಾರ್ಥಿಗಳು, ಇಬ್ಬರು ಪ್ರಾಧ್ಯಾಪಕರು ಸೇರಿ 18 ಮಂದಿ‌ ಕಾರ್ಯಕರ್ತರಾಗಿ ಇವರೊಂದಿಗೆ ಗಿಡ ನೆಡುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗಂಟೆಗೆ 800 ರೂಪಾಯಿನಂತೆ 90 ಸಾವಿರ ರೂ. ಖರ್ಚು ಮಾಡಿ ಜೆಸಿಬಿ ಮೂಲಕ ಐದಾರು ದಿನಗಳಿಂದ ಪರಿಸರವನ್ನು ಹಸನು ಮಾಡಿ ಗುಂಡಿ ತೆಗೆಸಿ ಇಟ್ಟಿರುವ ಇವರು ಜೂ‌ನ್ 5 ರಿಂದ ಗಿಡ ನೆಡುವ ಕಾರ್ಯ ಆರಂಭಿಸಿದ್ದಾರಂತೆ.

ಗಿಡ ನೆಟ್ಟು ಮತ್ತೆ ಅತ್ತ ಸುಳಿಯದಿರುವ ಪರಿಸರ ಪ್ರೇಮಿಗಳೇ ನಮ್ಮಲ್ಲಿ ಅಧಿಕ ಮಂದಿ ಇದ್ದಾರೆ. ಆದರೆ ಜೀತ್ ಮಿಲನ್ ಅವರು ಯಾವ ರೀತಿಯಲ್ಲಿ ಗಿಡಗಳ ಪೋಷಣೆ ಮಾಡುತ್ತಿದ್ದಾರೆ ಎಂಬುದಕ್ಕೆ ಸ್ಮಶಾನಗಳಲ್ಲಿ ನಳನಳಿಸಿ ನಿಂತಿರುವ ವೃಕ್ಷಗಳೇ ಸಾಕ್ಷಿಯಾಗಿವೆ. ಬೇಸಿಗೆ ಸಮಯದಲ್ಲಿ ದಿನವೊಂದಕ್ಕೆ 12.50 ಸಾವಿರ ಲೀ. ನೀರು ಗಿಡಗಳಿಗೆ ಹಾಕುತ್ತಿದ್ದಾರಂತೆ. ನೀರಿನ ಅಭಾವದ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರು ತರಿಸಿ ಹಾಕುವ ಮೂಲಕ ಗಿಡಗಳು ಸಾಯದಂತೆ ಪೋಷಿಸುತ್ತಿದ್ದಾರಂತೆ.

ಈ ಬಗ್ಗೆ ಜೀತ್ ಮಿಲನ್ ರೋಚ್ ಈಟಿವಿ ಭಾರತದೊಂದಿಗೆ ಮಾತನಾಡಿ, ನಾನು ಈ ಮೊದಲು ನಂದಿಗುಡ್ಡ ಹಿಂದೂ ರುದ್ರಭೂಮಿಯ ಮತ್ತೊಂದು ಮಗ್ಗುಲಲ್ಲಿ ಸಾಕಷ್ಟು ಗಿಡಗಳನ್ನು ನೆಟ್ಟಿದ್ದೇನೆ. ಇದೀಗ ಮತ್ತೊಂದು ಭಾಗದ 5-6 ಎಕರೆ ಜಾಗದಲ್ಲಿ ಇಂದು ಗಿಡಗಳನ್ನು ವಿದ್ಯಾರ್ಥಿಗಳು, ಕಾರ್ಯಕರ್ತರ ನೆರವಿನ ಮೂಲಕ ನೆಡುತ್ತಿದ್ದೇನೆ. ಸಾಕಷ್ಟು ಹೆಮ್ಮರವಾಗುವ ಪಶ್ಚಿಮ ಘಟ್ಟದ ಕಾಡುಮರಗಳನ್ನೇ ಆಯ್ಕೆ ಮಾಡಿ ನೆಡುತ್ತಿದ್ದೇವೆ. ಅಳಿಯುವ ಸ್ಥಿತಿಯಲ್ಲಿರುವ ಕಾಡು ವೃಕ್ಷಗಳನ್ನೂ ನೆಟ್ಟು ಬೆಳೆಸುತ್ತಿದ್ದೇವೆ. ಅರಣ್ಯ ಇಲಾಖೆಯಿಂದ ನನಗೆ ವರ್ಷವೂ ಸಾಕಷ್ಟು ಉತ್ತಮ ಸಹಕಾರ ದೊರೆಯುತ್ತಿದೆ. ಒಳ್ಳೆಯ ಬಲಿತ ಗಿಡಗಳನ್ನು ನೀಡುತ್ತಿದ್ದಾರೆ. ಅರಣ್ಯಾಧಿಕಾರಿ ಶ್ರೀಧರ್ ಅವರು ನನಗೆ ಬೇಕಿರುವ ಗಿಡಗಳನ್ನೇ ಒದಗಿಸುತ್ತಿದ್ದಾರೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಯಿಸಲೂ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

Last Updated : Jun 7, 2020, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.