ETV Bharat / state

ದಕ್ಷಿಣ ಕನ್ನಡ: ಜಪಾನ್ ದೇಶದ ಪ್ರಜೆ ಪುತ್ತೂರು ಪೊಲೀಸ್‌ ವಶಕ್ಕೆ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಜಪಾನ್ ಮೂಲದ ವ್ಯಕ್ತಿ ಓಡಾಡುತ್ತಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಪಾನ್ ಮೂಲದ ವ್ಯಕ್ತಿ
ಜಪಾನ್ ಮೂಲದ ವ್ಯಕ್ತಿ
author img

By

Published : Jul 23, 2023, 11:29 AM IST

Updated : Jul 23, 2023, 12:45 PM IST

ಪುತ್ತೂರು: ಜಪಾನ್ ದೇಶದ ವ್ಯಕ್ತಿಯೋರ್ವನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರಿನ ಗಡಿಯಾರ ಸಮೀಪ ತಿರುಗಾಡುತ್ತಿದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಕರೆದೊಯ್ದು ತನಿಖೆ ಕೈಗೊಂಡಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಜಪಾನ್‌ ದೇಶದ ಸುಯೋಷಿ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಈತ ಭಾರತದ ಸಂದರ್ಶನಕ್ಕಾಗಿ ವಿಸಿಟಿಂಗ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ನಂತರ ಮಂಗಳೂರಿಗೆ ಹೊರಟಿದ್ದ ಎಂದು ತಿಳಿದುಬಂದಿದೆ. ಪುತ್ತೂರು ಪೊಲೀಸರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರಿಯಕರನಿಗಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ: ಪಬ್​ಜಿ ಗೇಮ್​ನಲ್ಲಿ ಭಾರತದ 22 ವರ್ಷದ ಸಚಿನ್​ ಮೀನಾ ಎಂಬಾತನಿಗೆ ಪಾಕಿಸ್ತಾನ ಮೂಲದ ವಿವಾಹಿತ ಮಹಿಳೆ ಸೀಮಾ ಹೈದರ್‌ ಎಂಬಾಕೆಯ ಪರಿಚಯವಾಗಿತ್ತು. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಸೀಮಾ ಹೈದರ್‌ಗೆ ಮೊದಲೇ ವಿವಾಹವಾಗಿದ್ದು ತನ್ನ ಮೊದಲ ಪತಿಯಿಂದ 4 ಮಕ್ಕಳನ್ನು ಹೊಂದಿದ್ದಾಳೆ. ಆದರೆ ಭಾರತೀಯ ಯುವಕನೊಂದಿಗಿನ ಪ್ರೀತಿ ಆಕೆ ಭಾರತ ಗಡಿಯನ್ನು ಅಕ್ರಮವಾಗಿ ನುಸುಳಿ ಬರುವಂತೆ ಮಾಡಿದೆ. ಈಕೆಯ ಪೂರ್ಣ ಹೆಸರು ಸೀಮಾ ಗುಲಾಂ ಹೈದರ್​. ಮೇ 13ರಂದು ಪಾಕಿಸ್ತಾನದ ಕರಾಚಿ ಗಡಿ ನಿವಾಸಿಯಾಗಿರುವ ಈಕೆ ತನ್ನ ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ತಲುಪಿದ್ದಳು.

ಬಳಿಕ ಪ್ರಿಯಕರನ ಸಹಾಯದಿಂದ ಆತನ ಮನೆ ಅಲ್ಲಿಯೇ ವಾಸ ಮಾಡತೊಡಗಿದಳು. ಸುಮಾರು ಒಂದೂವರೆ ತಿಂಗಳ ಕಾಲ ರಬೂಪುರದ ಬಾಡಿಗೆ ಮನೆಯಲ್ಲಿ ಸೀಮಾ ಹಾಗೂ ಆಕೆಯ ನಾಲ್ವರು ಮಕ್ಕಳನ್ನು ಸಚಿನ್ ಇರಿಸಿಕೊಂಡಿದ್ದ. ಅಷ್ಟರಲ್ಲಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹುಡುಕಾಟ ಆರಂಭಿಸಿದಾಗ ಸೀಮಾ ತನ್ನ ಮಕ್ಕಳು ಮತ್ತು ಸಚಿನ್‌ ಸಮೇತ ಅಲ್ಲಿಂದ ಪರಾರಿಯಾಗಿದ್ದರು.

ನಂತರ ನೋಯ್ಡಾ ಪೊಲೀಸರು ಹರಿಯಾಣದ ಫರಿದಾಬಾದ್‌ನಿಂದ ಹೈದರ್​, ಆಕೆಯ ಪ್ರಿಯಕರ ಮತ್ತು ಪ್ರಿಯಕರನ ತಂದೆ ನೇತ್ರಪಾಲ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದೀಗ ಜಾಮೀನು ಪಡೆದು ರಬೂಪುರದಲ್ಲಿರುವ ಸಚಿನ್ ಮನೆಯಲ್ಲಿ ಹೈದರ್ ವಾಸವಾಗಿದ್ದಾಳೆ. ಅಕ್ರಮ ಆಗಮನದ ಕುರಿತು ವಿಚಾರಣೆ ನಡೆಯುತ್ತಿದ್ದು, ತನಿಖೆ ಪೂರ್ಣವಾಗುವ ತನಕ ಸೀಮಾ ಭಾರತದಲ್ಲಿಯೇ ಉಳಿಯುವ ಸಾಧ್ಯತೆ ಇದೆ.

ಭಾರತ ಯುವಕನ ಮೇಲೆ ಪೋಲೆಂಡ್​ ಮಹಿಳೆಗೆ ಲವ್​: 2021ರಲ್ಲಿ ಪೋಲೆಂಡ್​ನ ಮಹಿಳೆ ಪೋಲಾಕ್​ ಬಾರ್ಬರಾಗೆ ಮತ್ತು ಜಾರ್ಖಂಡ್​ನ ಮೊಹಮ್ಮದ್​ ಶದಾಬ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಚಾಟ್​ ಮಾಡಿದ್ದು, ಪ್ರೇಮಾಂಕುರವಾಗಿದೆ. ನಂತರ ಪ್ರಿಯಕರನನ್ನು ಭೇಟಿ ಮಾಡಲು ಪೋಲಾಕ್ ಇಚ್ಛಿಸಿದ್ದರು. ಹೀಗಾಗಿ ಭಾರತಕ್ಕೆ ಬರಲು ವೀಸಾಕ್ಕೆ ಅರ್ಜಿ ಹಾಕಿದ್ದಾರೆ. ಬಹಳ ದೀರ್ಘ ಪ್ರಕ್ರಿಯೆಯ ನಂತರ ಪೋಲಾಕ್​ ತನ್ನ ಪ್ರಿಯಕರ ಶದಾಬ್​ನಲ್ಲಿ ಭೇಟಿಯಾಗಲು ಜಾರ್ಖಂಡ್​​ನ ಹಜಾರಿಬಾಗ್​​ಗೆ ಬಂದಿದ್ದಳು. ನಂತರ ಇಬ್ಬರು ಭೇಟಿಯಾಗಿದ್ದು, ಪ್ರಿಯಕರ ಶದಾಬ್​ನ ವೀಸಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ವೀಸಾ ರೆಡಿಯಾದ ಕೂಡಲೇ ಪೋಲಾಕ್​ ಬಾರ್ಬರಾ ಶದಾಬ್​ನೊಂದಿಗೆ ಪೋಲೆಂಡ್‌ಗೆ ತೆರಳಲಿದ್ದಾಳೆ. ಅಚ್ಚರಿಯೆಂದರೆ ಈಕೆಗೆ ಈಗಾಗಲೇ ವಿವಾಹವಾಗಿದ್ದು 8 ವರ್ಷದ ಮಗಳು ಇದ್ದಾಳೆ. ಆದರೆ ತನ್ನ ಪತಿಯೊಂದಿಗೆ ವಿಚ್ಛೇದನವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ: ಪ್ರಮುಖ ಆರೋಪಿಗೆ ಶೋಧ, ಲುಕ್ ಔಟ್ ನೋಟಿಸ್‌ ಜಾರಿಗೆ ಸಿಸಿಬಿ ಶಿಫಾರಸು

Last Updated : Jul 23, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.