ETV Bharat / state

ಯಶೋಗಾಥೆಗೆ ಪಂಚವರುಷ.. ಪರಿಷತ್‌ ಸದಸ್ಯರಾಗಿ ಐವನ್ ಡಿಸೋಜ ಸಾಧನೆ ಅನಾವರಣ..

author img

By

Published : Dec 16, 2019, 5:39 PM IST

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಶಾಸಕರಾಗಿ ಐದು ವರ್ಷಗಳ ಕಾಲ ಮಾಡಿದ ಸಾಧನೆಯ ವಿವರಗಳಿರುವ'ಯಶೋಗಾಥೆಗೆ ಪಂಚವರುಷ' ಎಂಬ ಪುಸ್ತಕವನ್ನು ಲೇಖಕರಾದ ಪ್ರೊ. ನರಹರಿ ಅವರು ಬಿಡುಗಡೆ ಮಾಡಿದರು.

ಶಾಸಕರಾಗಿ ಐವನ್ ಡಿಸೋಜ ಸಾಧನೆಯ ಪುಸ್ತಕ ಬಿಡುಗಡೆ
Ivan D'Souza achievement book release

ಮಂಗಳೂರು: ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಶಾಸಕರಾಗಿ ಐದು ವರ್ಷಗಳ ಕಾಲ ಮಾಡಿದ ಸಾಧನೆಯ ವಿವರಗಳಿರುವ 'ಯಶೋಗಾಥೆಗೆ ಪಂಚವರುಷ' ಎಂಬ ಪುಸ್ತಕವನ್ನು ಲೇಖಕರಾದ ಪ್ರೊ. ನರಹರಿ ಅವರು ಬಿಡುಗಡೆ ಗೊಳಿಸಿದರು.

ಶಾಸಕರಾಗಿ ಐವನ್ ಡಿಸೋಜ.. ಸಾಧನೆಯ ಪುಸ್ತಕ ಬಿಡುಗಡೆ

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಕಚೇರಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಆಯ್ಕೆಯಾದ ಸದಸ್ಯರುಗಳು ಅಧಿವೇಶನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಅಪರೂಪ. ಆದರೆ, ಐವನ್ ಡಿಸೋಜ‌ ಅವರು ವಿಧಾನಪರಿಷತ್ ಸದಸ್ಯರಾಗಿ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಅಧಿವೇಶನವನ್ನು ತಪ್ಪಿಸಿಕೊಂಡಿಲ್ಲ. ಇದು ರಾಜಕಾರಣಿಯ ಬದ್ಧತೆ ಮತ್ತು ಜವಾಬ್ದಾರಿಯಾಗಿದೆ.

ಸಾಮಾನ್ಯವಾಗಿ ರಾಜಕಾರಣಿಗಳ ಜೀವನ ಕಷ್ಟ. ಸಿಎಂ ಪರಿಹಾರ ನಿಧಿಯನ್ನು ಅರ್ಹ ಜನರಿಗೆ ಅತ್ಯಧಿಕ ಸಂಖ್ಯೆಯಲ್ಲಿ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಜ.1 ಪ್ಲೈಓವರ್ ಕಾಮಗಾರಿ ಪೂರ್ಣವಾಗಬೇಕು: ಐವನ್ ಡಿಸೋಜ
ಇಂದು ನಗರದಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಐವನ್ ಡಿಸೋಜ ಅವರು, ನಗರದ ಪಂಪ್ ವೆಲ್ ಪ್ಲೈಓವರ್ ಕಾಮಗಾರಿ ಪೂರ್ಣಗೊಂಡು ಜ.1 ರಂದು ಉದ್ಘಾಟನೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜ.1 ರಂದು ಸಂಜೆ 4 ಗಂಟೆವರೆಗೆ ಅವರಿಗೆ ಸಮಯ ಕೊಡುತ್ತೇವೆ. ಒಂದು ವೇಳೆ ಉದ್ಘಾಟನೆ ಮಾಡದಿದ್ದರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪಂಪ್ ವೆಲ್ ಪ್ಲೈ ಓವರನ್ನು ಎಲ್ಲಾ ವಾಹನಗಳು ಓಡುವಂತೆ ವ್ಯವಸ್ಥೆ ಮಾಡಿ ಕೊಟ್ಟು ಉದ್ಘಾಟನೆ ಮಾಡಬೇಕು. ಮಾನವ ಸಂಚಾರಕ್ಕೆಅನುಕೂಲವಾಗುವಂತೆ ‌ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮಾಡಿ ಉದ್ಘಾಟಿಸಬೇಕು. ಅವರದ್ದೆ ಕೇಂದ್ರ ಸರ್ಕಾರ ಇದ್ದರೂ ಸಂಸದರಿಗೆ ಹತ್ತು ವರ್ಷವಾದರೂ ಪಂಪ್ ವೆಲ್ ಪ್ಲೈಓವರ್ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಲು ಆಗಲಿಲ್ಲ. ಅಲ್ಲಿ ನೋಡಿದರೆ ಇನ್ನೂ ಒಂದು ವರ್ಷ ಕೆಲಸ ಇದೆ. ಕಾಂಗ್ರೆಸ್ ಶೀಘ್ರದಲ್ಲೇ ಸತ್ಯ ಶೋಧನ ತಂಡ ಮಾಡಿ ಪಂಪ್ ವೆಲ್ ಕಾಮಗಾರಿಯ ಬಗ್ಗೆ ವರದಿ ನೀಡಲಿದೆ ಎಂದು ತಿಳಿಸಿದರು.

Intro:ಮಂಗಳೂರು: ಶಾಸಕರಾಗಿ ಐದು ವರ್ಷಗಳ ಸಾಧನೆಯ ವಿವರಗಳನ್ನು ಒಳಗೊಂಡ ಯಶೋಗಾಥೆಗೆ ಪಂಚವರುಷ ಎಂಬ ಪುಸ್ತಕವನ್ನು ಪುಸ್ತಕದ ಲೇಖಕರಾದ ಪ್ರೊ. ನರಹರಿ ಅವರು ಬಿಡುಗಡೆ ಗೊಳಿಸಿದರು.

Body:ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಅವರ ಕಚೇರಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ವಿಧಾನಪರಿಷತ್ ಮತ್ತು ವಿಧಾನಸಭೆಯಲ್ಲಿ ಆಯ್ಜೆಯಸದ ಸದಸ್ಯರುಗಳು ಅಧಿವೇಶನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಅಪರೂಪ. ಆದರೆ ಐವನ್ ಡಿಸೋಜ‌ ಅವರು ವಿಧಾನಪರಿಷತ್ ಸದಸ್ಯರಾಗಿ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಅಧಿವೇಶನವನ್ನು ತಪ್ಪಿಸಿಕೊಂಡಿಲ್ಲ. ಇದು ರಾಜಕಾರಣಿಯ ಬದ್ದತೆ ಮತ್ತು ಜವಾಬ್ದಾರಿ ಯಾಗಿದೆ. ಅದೇ ರೀತಿಯಲ್ಲಿ ತಮಗೆ ಸಿಕ್ಕ ಅವಕಾಶದ ನೂರು ಪ್ರತಿಶತದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಕ್ರಿಯಾಶೀಲತೆ ಯನ್ನು ಜನ ಗಮನಿಸಿದ್ದಾರೆ ಎಂದರು.
ಸಿಎಂ ಪರಿಹಾರ ನಿಧಿಯನ್ನು ಅರ್ಹ ಜನರಿಗೆ ಅತ್ಯಧಿಕ ಸಂಖ್ಯೆಯಲ್ಲಿ ತಲುಪಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು
ಬೈಟ್- ಪ್ರೊ. ನರಹರಿ, ಪುಸ್ತಕ ಲೇಖಕರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.