ETV Bharat / state

ಗಿಡಗಳು ಸೂರ್ಯನ ಬೆಳಕಿನೆಡೆ ತಂತಾನೆ ಚಲಿಸುವ ಸಾಧನ: ಜವಾಹರ್‌ ನವೋದಯ ವಿದ್ಯಾರ್ಥಿನಿಯರ ಅನ್ವೇಷಣೆ

ಸ್ಮಾರ್ಟ್ ಮೊಬೈಲ್ ಇಂಡೋರ್ ಪ್ಲಾಂಟ್ ಎಂಬ ಹೆಸರಿನ ಈ ಯಂತ್ರವನ್ನು ಪಾಟ್​​ನಲ್ಲಿ ತುಂಬಲಾದ ಮಣ್ಣಿನ ತೇವಾಂಶ ಮತ್ತು ಬೆಳಕಿನ ಆಧಾರದಲ್ಲಿ ಕೆಲಸ ಮಾಡುವ ಹಾಗೆ ರೂಪಿಸಲಾಗಿದೆ. ಇದು ಅಪಾರ್ಟ್​ಮೆಂಟ್​ ಹಾಗೂ ಮಹಡಿ ಮೇಲೆ ಗಿಡ ಬೆಳೆಸುವವರಿಗೆ ಬಹಳ ಅನುಕೂಲಕರ.

ಈ ಸಾಧನದಿಂದ ಗಿಡಗಳು ಸೂರ್ಯನ ಬೆಳಕಿನ ಕಡೆ ತಂತಾನೆ ಚಲಿಸುತ್ತವೆ

author img

By

Published : Mar 18, 2022, 4:42 PM IST

Updated : Mar 18, 2022, 6:29 PM IST

ಮಂಗಳೂರು: ನಗರಗಳಲ್ಲಿ ಹಲವು ಮಂದಿ ಪ್ರಕೃತಿ ಪ್ರಿಯರಿದ್ದರೂ ಅವರಿಗೆ ಗಿಡಮರಗಳನ್ನು ಬೆಳೆಯಲು ಅವಕಾಶವಿಲ್ಲ. ಆದರೂ ಅಪಾರ್ಟ್​ಮೆಂಟ್​ಗಳಲ್ಲಿ ವಾಸಿಸುವ ಕೆಲವರು ಗಿಡಗಳನ್ನು ಬೆಳೆಸುತ್ತಾರಾದರೂ ಸಣ್ಣ ಸಣ್ಣ ಪಾಟ್‌ಗಳಲ್ಲಿ ಬೆಳೆಸುವ ಗಿಡಗಳಿಗೆ ಅಗತ್ಯವಾಗಿ ಬೇಕಾದ ಸೂರ್ಯನ ಬೆಳಕು ಬೀಳದೆ ಗಿಡಗಳು ಸೊರಗುತ್ತದೆ. ಇದಕ್ಕಾಗಿ ಮಂಗಳೂರಿನ ಹೊರವಲಯದಲ್ಲಿ ಇರುವ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಬ್ಬರು ಹೊಸ ಸಾಧನ ಅನ್ವೇಷಣೆ ಮಾಡಿದ್ದಾರೆ.

ಜವಾಹರ್ ನವೋದಯ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿಯರಾದ ಹನಿ ಎಚ್.ಆರ್. ಮತ್ತು ಆರುಷಿ ಈ ಸಾಧನವನ್ನು ಕಂಡು ಹಿಡಿದವರು. ಈ ಶಾಲೆಯ ಶಿಕ್ಷಕರಾದ ಎಟಿಎಲ್ ಇನ್‌ಚಾರ್ಜ್ ಅಶೋಕ್ ಅವರ ಮಾರ್ಗದರ್ಶನದಲ್ಲಿ ಪರಿಸರ ಸ್ನೇಹಿ ಸಾಧನವನ್ನು ಸಂಶೋಧನೆ ಮಾಡಲಾಗಿದೆ.

ಕಾರ್ಯ ನಿರ್ವಹಣೆ ಹೇಗೆ? ಸ್ಮಾರ್ಟ್ ಮೊಬೈಲ್ ಇಂಡೋರ್ ಪ್ಲಾಂಟ್ ಎಂಬ ಹೆಸರಿನ ಈ ಯಂತ್ರವನ್ನು ಪಾಟ್​​ನಲ್ಲಿ ತುಂಬಲಾದ ಮಣ್ಣಿನ ತೇವಾಂಶ ಮತ್ತು ಬೆಳಕಿನ ಆಧಾರದಲ್ಲಿ ಕೆಲಸ ಮಾಡುವ ಹಾಗೆ ರೂಪಿಸಲಾಗಿದೆ.

ಜವಾಹರ್‌ ನವೋದಯ ವಿದ್ಯಾರ್ಥಿನಿಯರ ಅನ್ವೇಷಣೆ

ನಾವು ಗಿಡಗಳನ್ನು ತುಂಬಿದ ಪಾಟ್​​ಗಳನ್ನು ಸೂರ್ಯನ ಬೆಳಕಿನ ಕಡೆ ಎತ್ತಿ ಇಡಲು ಸಾಧ್ಯವಿಲ್ಲ. ಆದರೆ, ಈ ಸಾಧನದ ಮೇಲೆ ಪಾಟ್​ ಇರಿಸಿದರೆ ತಂತಾನೆ ಸೂರ್ಯನ ಬೆಳಕಿನೆಡೆ ಸಂಚರಿಸಿ ಗಿಡಗಳು ಕಿರಣಗಳನ್ನು ಹೀರಿಕೊಂಡು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಡಾ. ಪುನೀತ್ ರಾಜ್ ಕುಮಾರ್​​ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನ : ಎಸ್.ಟಿ. ಸೋಮಶೇಖರ್

ಪ್ರಮುಖ ವಿಷಯ ಎಂದರೆ ಪಾಟ್​ನಲ್ಲಿ ಅಗತ್ಯಕ್ಕಿಂತ ಕಡಿಮೆ ನೀರಿದ್ದರೆ, ಮಣ್ಣು ತುಂಬಾ ಒಳಗಿದ್ದರೆ ಇದು ಸೂರ್ಯನ ಬೆಳಕಿನ ಕಡೆ ಸಂಚರಿಸದೆ ಗಿಡ ಸೂರ್ಯನ ಶಾಖಕ್ಕೆ ಹಾಳಾಗದಂತೆ ತಡೆಯುತ್ತದೆ.

ಈ ಸಾಧನ ಅನ್ವೇಷಿಸಿದ ವಿದ್ಯಾರ್ಥಿಗಳು
ಈ ಸಾಧನ ಅನ್ವೇಷಿಸಿದ ವಿದ್ಯಾರ್ಥಿಗಳು

ಈ ಸಾಧನಕ್ಕೆ ಮೊದಲೇ ನಿರ್ಧರಿಸಿದ ಬೆಳಕಿನ ಮಾದರಿಯನ್ನು ಕೋಡಿಂಗ್ ಮೂಲಕ ಹಾಕಲಾಗುತ್ತದೆ. ಅದನ್ನು ಗ್ರಹಿಸಿ ಬೆಳಕಿನ ಕಡೆಗೆ ಇದು ಚಲಿಸುತ್ತದೆ. ಇದಕ್ಕಾಗಿ ಈ ಯಂತ್ರಕ್ಕೆ ಚಕ್ರವನ್ನು ಅಳವಡಿಸಲಾಗಿದೆ. ಪಾಟ್​ನಲ್ಲಿ ನೀರಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹ ಸಾಧನವನ್ನು ಅಳವಡಿಸಲಾಗಿದೆ. ಸದ್ಯ ಈ ಯಂತ್ರವನ್ನು ಪ್ರಯೋಗದ ಕಾರಣಕ್ಕಾಗಿ ತಯಾರಿಸಲಾಗಿದ್ದು, ಟಾರ್ಚ್ ಲೈಟ್ ಬೆಳಕಿಗೆ ಎರಡು ಸೆಕೆಂಡ್ ಮುಂದೆ ಹೋಗುವಂತೆ ತಯಾರಿಸಲಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತಯಾರಿಸಿದರೆ ಎಲ್ಲೆಡೆ ಉಪಯೋಗವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ಯಂತ್ರವು ಎಟಿಎಲ್ ನ ಪೀಪಲ್ ಚಾಯ್ಸ್ ನ್ಯಾಷನಲ್ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಈ ಶಾಲೆಯ ವಿದ್ಯಾರ್ಥಿಗಳು ಪರಿಸರಕ್ಕೆ ಪೂರಕವಾದ ಸಾಧನವನ್ನು ತಯಾರು ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿರುವುದು ಶಿಕ್ಷಕರಲ್ಲಿಯೂ ಸಂತಸ ಮೂಡಿಸಿದೆ.

Last Updated : Mar 18, 2022, 6:29 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.