ETV Bharat / state

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಜೊತೆಗೆ ಭಯ ಹುಟ್ಟಿಸುತ್ತಿದೆ ಡೆಂಗ್ಯೂ, ಮಲೇರಿಯಾ - ಡೆಂಗ್ಯೂ ಮಲೇರಿಯಾ

ಜಿಲ್ಲೆಯಲ್ಲಿ ಮಲೇರಿಯಾ ಜನವರಿಯಿಂದ ಮೇ ಅಂತ್ಯದವರೆಗೆ 276 ಪ್ರಕರಣಗಳು ಪತ್ತೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 400 ಪ್ರಕರಣಗಳು ಪತ್ತೆಯಾಗಿದ್ದವು. ಡೆಂಗ್ಯೂ ಪ್ರಕರಣ ಈ ವರ್ಷದ ಜನವರಿಯಿಂದ ಮೇ ಅಂತ್ಯದವರೆಗೆ 69 ಪತ್ತೆಯಾಗಿದ್ದರೆ, ಕಳೆದ ವರ್ಷ 90 ಪ್ರಕರಣಗಳು ಪತ್ತೆಯಾಗಿವೆ.

Increasing dengue and malaria cases in Dakshina Kannada district
ಕೊರೊನಾ ಜೊತೆಗೆ ಭಯ ಹುಟ್ಟಿಸುತ್ತಿದೆ ಡೆಂಗ್ಯೂ, ಮಲೇರಿಯಾ
author img

By

Published : Jun 8, 2021, 11:02 AM IST

ಮಂಗಳೂರು: ಕಳೆದ ವರ್ಷದಿಂದ ಕೊರೊನಾ ವೈರಸ್ ಹಾವಳಿಯಿಂದ ಜನರು ಭಯಭೀತರಾಗಿದ್ದಾರೆ. ಕೊರೊನಾಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಡೆಂಗ್ಯೂ, ಮಲೇರಿಯಾ ಬಗ್ಗೆ ಕೂಡ ಎಚ್ಚರದಿಂದಿರಬೇಕಾದ ಪರಿಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಕಾಡುತ್ತಿರುವ ಡೆಂಗ್ಯೂ, ಮಲೇರಿಯಾ ಅಲ್ಲಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸುತ್ತಿದೆ.

ಜಿಲ್ಲೆಯಲ್ಲಿ ಮತ್ತೆ ಡೆಂಗ್ಯೂ, ಮಲೇರಿಯಾ ಭೀತಿ ಶುರುವಾಗಿದೆ. ಪ್ರತಿ ವರ್ಷ ಜಿಲ್ಲೆಯ ಜನತೆ ಡೆಂಗ್ಯೂ, ಮಲೇರಿಯಾಕ್ಕೆ ಭಯ ಪಡುತ್ತಲೇ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಡೆಂಗ್ಯೂ ಮಂಗಳೂರು ನಗರದಲ್ಲಿ ಬಹಳಷ್ಟು ಆತಂಕಕ್ಕೆ ಕಾರಣವಾಗಿದ್ದು, ಹಲವರ ಸಾವು ಕೂಡ ಸಂಭವಿಸಿತ್ತು. ಆದರೆ ಕಳೆದ ಎರಡು ವರ್ಷದಿಂದ ಡೆಂಗ್ಯೂ, ಮಲೇರಿಯಾ ನಿಯಂತ್ರಣದಲ್ಲಿದ್ದರೂ ಅಲ್ಲಲ್ಲಿ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.

ಕೊರೊನಾ ಜೊತೆಗೆ ಭಯ ಹುಟ್ಟಿಸುತ್ತಿದೆ ಡೆಂಗ್ಯೂ, ಮಲೇರಿಯಾ

ಜಿಲ್ಲೆಯಲ್ಲಿ ಮಲೇರಿಯ ಜನವರಿಯಿಂದ ಮೇ ಅಂತ್ಯದವರೆಗೆ 276 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 400 ಪ್ರಕರಣಗಳು ಪತ್ತೆಯಾಗಿದ್ದವು. ಡೆಂಗ್ಯೂ ಪ್ರಕರಣ ಈ ವರ್ಷದ ಜನವರಿಯಿಂದ ಮೇ ಅಂತ್ಯದವರೆಗೆ 69 ಪತ್ತೆಯಾಗಿದ್ದರೆ, ಕಳೆದ ವರ್ಷ 90 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಮಂಗಳೂರಿನ ಬಂದರ್, ಕಸಬ ಬೆಂಗ್ರೆ, ದೇರೆಬೈಲ್​ನಲ್ಲಿ ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡರೆ, ಪುತ್ತೂರು ತಾಲೂಕಿನ ತಿಂಗಳಾಡಿ, ಕೆಯ್ಯೂರು, ಕಡಬ ತಾಲೂಕಿನ ಕೆಲವೆಡೆ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಹೇಳುತ್ತಾರೆ.

ಇನ್ನು ಜಿಲ್ಲೆಯಲ್ಲಿ ಕೊರೊನಾದ ಜತೆಗೆ ಡೆಂಗ್ಯೂ, ಮಲೇರಿಯಾ ಹಾವಳಿ ಇರುವುದರಿಂದ ಜನರು ಮುಂಜಾಗ್ರತೆ ವಹಿಸಬೇಕು. ಮಳೆಗಾಲ ಆರಂಭವಾಗಿರುವುದರಿಂದ ಮಲೇರಿಯಾ, ಡೆಂಗ್ಯೂ ಈ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸಂಜೆಯ ನಂತರ ಮನೆ ಕಿಟಕಿ ಬಾಗಿಲು ಮುಚ್ಚಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.