ಮಂಗಳೂರು: ಇಲ್ಲಿನ ಎಂಆರ್ಪಿಎಲ್ನಲ್ಲಿ ನಿರ್ಮಿಸಲಾದ 90 ಟನ್ ಸಾಮರ್ಥ್ಯದ ಎರೆಹುಳು ಗೊಬ್ಬರ ಘಟಕವನ್ನು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಂಸ್ಕರಣಾಗಾರ) ಸುನಿಲ್ ಕುಮಾರ್ ಉದ್ಘಾಟಿಸಿದರು.
1.40 ಕೋಟಿ ವೆಚ್ಚದಲ್ಲಿ ಎಂಆರ್ಪಿಎಲ್ ಎರೆಹುಳು ಗೊಬ್ಬರ ಘಟಕವನ್ನು ನಿರ್ಮಾಣ ಮಾಡಿದೆ. 2 ಸಾವಿರ ಎಕರೆ ವಿಸ್ತೀರ್ಣದಲ್ಲಿರುವ ಎಂಆರ್ಪಿಎಲ್ನಲ್ಲಿ ಮರದಿಂದ ಬಿದ್ದ ಎಲೆಗಳು, ತರಕಾರಿ ತ್ಯಾಜ್ಯ, ಕತ್ತರಿಸಿದ ಹುಲ್ಲು, ಕಾಗದದಂತಹ ತ್ಯಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಉಂಟಾಗುತ್ತದೆ. ಇದನ್ನು ಈ ಘಟಕದ ಮೂಲಕ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಈಗ ನಿರ್ಮಾಣವಾಗಿರುವ 90 ಟನ್ ತ್ಯಾಜ್ಯವನ್ನು ಇದು 12 ಲಕ್ಷ ರೂ. ಮೌಲ್ಯದ 24 ಟನ್ ಗೊಬ್ಬರವಾಗಿ ಪರಿವರ್ತಿಸಲಿದೆ. ಇಲ್ಲಿ ಉತ್ಪಾದನೆಯಾಗುವ ಗೊಬ್ಬರವು 500 ಎಕರೆಗೂ ಹೆಚ್ಚು ಇರುವ ಹಸಿರು ವಲಯಕ್ಕೆ ಉಪಯೋಗವಾಗಲಿದೆ.
ಓದಿ:ಮತ್ತೊಬ್ಬ ರೆಬೆಲ್ ಕಾಂಗ್ರೆಸ್ ನಾಯಕರಾಗುವ ಸೂಚನೆ ನೀಡಿದ ರಮೇಶ್ ಕುಮಾರ್
ಆಫ್ರಿಕನಗ ನೈಟ್ ಕ್ರಾಲರ್ ಎಂದು ಕರೆಯಲ್ಪಡುವ ವಿಶೇಷ ತಳಿ ಎಂಆರ್ಪಿಎಲ್ನ ಗೊಬ್ಬರ ಪ್ರಕ್ರಿಯೆಗೆ ಹುಳುಗಳಾಗಿ ಬಳಸಲಾಗುತ್ತದೆ. ಈ ಪ್ರತಿ ಎರೆಹುಳು ದಿನಕ್ಕೆ 4 ಕೆಜಿ ಘನತ್ಯಾಜ್ಯವನ್ನು ಗೊಬ್ಬರ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ವೆಂಕಟೇಶ್, ರಿಫೈನರಿ ನಿರ್ದೇಶಕ ಸಂಜಯ್ ವರ್ಮಾ, ಹಣಕಾಸು ನಿರ್ದೇಶಕ ಪೊಮಿಲಾ ಜಸ್ಪಾಲ್, ಮುಖ್ಯ ವಿಜಿಲೆನ್ಸ್ ಅಧಿಕಾರಿ ರಾಜೀವ್ ಕುಶ್ವಾ ಐಟಿಎಸ್, ಕಾರ್ಯ ನಿರ್ವಾಹಕ ನಿರ್ದೇಶಕ ( ಯೋಜನೆಗಳು) ಯು ವಿ ಐತಾಳ್, ಸಿಜಿಎಂ ಎಚ್ಎಸ್ಇಎಂಎಸ್ ಸುದರ್ಶನ್ ಉಪಸ್ಥಿತರಿದ್ದರು.