ಬಂಟ್ವಾಳ: ಬುಧವಾರ ಬರ್ಬರವಾಗಿ ಹತ್ಯೆಗೀಡಾಗಿದ್ದ ತುಳು ನಟ ಸುರೇಂದ್ರ ಬಂಟ್ವಾಳ್ ಅವರ ಸಂಪರ್ಕದಲ್ಲಿರುವವರನ್ನು ಪೊಲೀಸರು ಮೂರು ತಂಡಗಳಲ್ಲಿ ತೀವ್ರವಾಗಿ ವಿಚಾರಣೆ ನಡೆಸುತ್ತಿರುವಂತೆಯೇ ಆತನನ್ನು ತಾನೇ ಕೊಂದಿದ್ದೇನೆ ಎಂದು ಹೇಳುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಂಟ್ವಾಳದಲ್ಲಿ ಚಾಕುವಿನಿಂದ ಇರಿದು ತುಳು ನಟನ ಹತ್ಯೆ
ಈ ಕುರಿತು ಪ್ರತಿಕ್ರಿಯಿಸಿರುವ ಬಂಟ್ವಾಳ ಪೊಲೀಸರು, ತನಿಖೆ ಪ್ರಗತಿಯಲ್ಲಿದ್ದು ಆರೋಪಿಗಳ ಬಂಧನದ ಬಳಿಕವಷ್ಟೇ ಸತ್ಯಾನುಸತ್ಯತೆ ತಿಳಿಯಲಿದೆ ಎಂದಿದ್ದಾರೆ. ಮಂಗಳವಾರ ರಾತ್ರಿ ಮನೆಯ ಒಳಗೆ ಸ್ನೇಹಿತ ಬಂದಿದ್ದನೇ? ಎಂಬ ಕುರಿತು ಆತನನ್ನು ವಿಚಾರಣೆ ನಡೆಸಿದ ಬಳಿಕವಷ್ಟೇ ಗೊತ್ತಾಗಬೇಕಿದ್ದರೂ ಸದ್ಯ ಆತನ ಹೆಸರಿನಲ್ಲಿಯೇ ಆಡಿಯೋ ವೈರಲ್ ಆಗುತ್ತಿದೆ. ವೈಯಕ್ತಿಕ ದ್ವೇಷವೇ ಅಥವಾ ಬೇರೆ ಯಾವುದಾದರೂ ಕಾರಣ ಇದೆಯೇ ಎಂಬುದು ತನಿಖೆ ಬಳಿಕೆ ಸ್ಪಷ್ಟವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ತಂಡಗಳನ್ನು ರಚಿಸಿ ತನಿಖೆ ಚುರುಕೊಳಿಸಿದ ಪೊಲೀಸ್
ಆರೋಪಿಗಳ ಪತ್ತೆಗೆ ಎಸ್ಪಿ ಲಕ್ಮೀಪ್ರಸಾದ್ ಮೂರು ತಂಡಗಳನ್ನು ರಚನೆ ಮಾಡಿದ್ದು, ಸುರೇಂದ್ರ ಅವರ ಸಂಪರ್ಕದಲ್ಲಿರುವವರನ್ನು ವಿಚಾರಣೆ ನಡೆಸಲಾಗಿದೆ. ಇನ್ನೂ ಸುರೇಂದ್ರ ಮೃತದೇಹದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಬಂಟ್ವಾಳದ ಬಡ್ಡಕಟ್ಟೆ ಸ್ಮಶಾನದಲ್ಲಿ ನಡೆಯಿತು. ಅದಕ್ಕೂ ಮೊದಲು ಅವರ ಮನೆ ಕಲಾಯಿಯಲ್ಲಿ ವಿಧಿವಿಧಾನಗಳನ್ನು ನಡೆಸಲಾಯಿತು.