ETV Bharat / state

ರಮೇಶ್​ ಜಾರಕಿಹೊಳಿ ವೈಯಕ್ತಿಕವಾಗಿ ನನ್ನ ಬಳಿ ಚರ್ಚಿಸಿದ್ದು ನಿಜ: ಸುಧಾಕರ್​ ಸ್ಪಷ್ಟನೆ - ಮಂಗಳೂರು ಸುದ್ದಿ

ಕೇಂದ್ರ ಆರೋಗ್ಯ ಆಸ್ಪತ್ರೆಯಾದ ವೆನ್​ಲಾಕ್ ಅನ್ನು‌ ಮೇಲ್ದರ್ಜೆಗೆರಿಸಿ ಹಾಗೂ ಇಡೀ ಜಿಲ್ಲೆಯಲ್ಲೇ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಬಗ್ಗೆ ಉಸ್ತುವಾರಿ ಸಚಿವರು ಅನೇಕ ಬಾರಿ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಅವರ ಜೊತೆ ಮಾತುಕತೆ ನಡೆಸಿ ಎಲ್ಲಾ ವೈದ್ಯರ ನೇಮಕ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ. ಸುಧಾಕರ್ ತಿಳಿಸಿದರು.

belthangady
ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ. ಸುಧಾಕರ್
author img

By

Published : Jun 30, 2021, 8:27 PM IST

ಬೆಳ್ತಂಗಡಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ನಾವು 17 ಮಂದಿ ಜೊತೆಯಾಗಿ ಕುಳಿತು ಮಾತನಾಡಿಲ್ಲ. ಆದರೆ, ಜಾರಕಿಹೊಳಿಯವರು ವೈಯಕ್ತಿಕವಾಗಿ ನನ್ನಲ್ಲಿ ಮಾತನಾಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ. ಸುಧಾಕರ್ ಹೇಳಿದರು.

ಕೊಕ್ಕಡದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ‌ ಮಾಧ್ಯಮದ ಜೊತೆ ಮಾತನಾಡಿದ ಅವರು, ಜಿಲ್ಲೆಯ ಕೇಂದ್ರ ಆರೋಗ್ಯ ಆಸ್ಪತ್ರೆಯಾದ ವೆನ್​ಲಾಕ್ ಅನ್ನು‌ ಮೇಲ್ದರ್ಜೆಗೆರಿಸಿ ಹಾಗೂ ಇಡೀ ಜಿಲ್ಲೆಯಲ್ಲೇ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಬಗ್ಗೆ ಉಸ್ತುವಾರಿ ಸಚಿವರು ಅನೇಕ ಬಾರಿ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಅವರ ಜೊತೆ ಮಾತುಕತೆ ನಡೆಸಿ ಎಲ್ಲಾ ವೈದ್ಯರ ನೇಮಕ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಮೇಲ್ದರ್ಜೆಗೆರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ಈಗಾಗಲೇ ವಸುಧಾ ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ. ಸುಧಾಕರ್

ಎಂಡೋ ಪೀಡಿತರ ಸಮಸ್ಯೆಗೆ ಸ್ಪಂದನೆ:

ಆಸ್ಪತ್ರೆ ಕಟ್ಟಡದ ಉದ್ಘಾಟನೆ ನಂತರ ‌ಎಂಡೋಸಲ್ಫಾನ್ ಪೀಡಿತರ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಎಂಡೋಪೀಡಿತರ ಕ್ಷೇಮ ಸಮಾಚಾರ ವೀಕ್ಷಿಸಿದರು. ಹೋರಾಟಗಾರ ಶ್ರೀಧರ್ ಕೆಂಗುಡೇಲ್ ಅವರು ನೀಡಿದ ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು. ಮುಖ್ಯವಾಗಿ‌ ಕರ್ನಾಟಕ ಕೇರಳ ಗಡಿ ಭಾಗಗಳಲ್ಲಿ ಹೂತಿಟ್ಟಿರುವ ಎಂಡೋ ಬ್ಯಾರಲ್​ಗಳಿಂದ ಸಮಸ್ಯೆಯಾಗುತ್ತಿದ್ದು, ವಿಲೇವಾರಿಗೆ ಕ್ರಮ ಕೈಗೊಳ್ಳಲು ಕೇಳಿಕೊಂಡಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಸೌತಡ್ಕ, ಹೊರಾಂಗಣದಲ್ಲಿ ‌ಪ್ರಾರ್ಥನೆ: ಡಾ. ಸುಧಾಕರ್ ಅವರು ‌ಸೌತಡ್ಕ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಕೋವಿಡ್ ನಿಯಮದಂತೆ ದೇಗುಲ ಮುಚ್ಚಿದ್ದರಿಂದ ಹೊರಾಂಗಣದಿಂದಲೇ ಪ್ರಾರ್ಥನೆ ಸಲ್ಲಿಸಿದರು. ಬಳಿಕ‌ ತಾಲೂಕಿಗೆ ‌ಎರಡು‌ ಆ್ಯಂಬುಲೆನ್ಸ್​ಗಳನ್ನು ಲೋಕಾರ್ಪಣೆ ಮಾಡಿದರು. ಕೊಕ್ಕಡದಿಂದ ನೇರವಾಗಿ ಚಾರ್ಮಾಡಿಗೆ ತೆರಳಿ ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿ ತಮ್ಮ ಖಾಸಗಿ‌ ವಾಹನದಲ್ಲಿ ಬೆಂಗಳೂರಿಗೆ ಹಿಂತಿರುಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.