ಬಂಟ್ವಾಳ (ದಕ್ಷಿಣ ಕನ್ನಡ): ಕಿಯೋನಿಕ್ಸ್ ಅಧ್ಯಕ್ಷರಾಗಿ ನೇಮಕಗೊಂಡ ಬಿಜೆಪಿ ಮುಖಂಡ ಕೆ.ಹರಿಕೃಷ್ಣ ಬಂಟ್ವಾಳ್, ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಜನಾರ್ದನ ಪೂಜಾರಿಯವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.
ಸುದೀರ್ಘ ಕಾಲ ಪೂಜಾರಿಯವರ ಒಡನಾಡಿಯಾಗಿದ್ದ ಹರಿಕೃಷ್ಣ ಬಂಟ್ವಾಳ್, ಕಿಯೋನಿಕ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬಂಟ್ವಾಳದ ನಿವಾಸಕ್ಕೆ ಇಂದು ಆಗಮಿಸಿದರು.
ಪಾರದರ್ಶಕವಾದ ಆಡಳಿತ ನಡೆಸಿ, ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗುವಂತೆ ಬಂಟ್ವಾಳ್ ಅವರಿಗೆ ಪೂಜಾರಿ ಸಲಹೆ ನೀಡಿದರು.