ETV Bharat / state

ಇಂದಿನಿಂದ ಹಜ್​​ ಯಾತ್ರೆ ಆರಂಭ: ಕರ್ನಾಟಕದಿಂದ ಈ ಬಾರಿ 8739 ಯಾತ್ರಿಗಳು ಪ್ರಯಾಣ

ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದ್ದು, ಈ ಬಾರಿಯ ಹಜ್​​ಗೆ ಹೋಗುವ ಯಾತ್ರೆ ಇಂದು ಆರಂಭವಾಗಿದೆ. ಕರ್ನಾಟಕದಿಂದ‌ ಈ ಬಾರಿ 8739 ಮಂದಿ ಹಜ್​​ಗೆ ಪ್ರಯಾಣಿಸುತ್ತಿದ್ದು, ಕಳೆದ ಬಾರಿ 6300 ಮಂದಿ ಯಾತ್ರೆ ಮಾಡಿದ್ದರು.

ಇಂದಿನಿಂದ ಹಜ್ ಯಾತ್ರೆ ಆರಂಭ
author img

By

Published : Jul 17, 2019, 5:50 PM IST

ಮಂಗಳೂರು: ಮುಸ್ಲಿಂರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡಬೇಕೆಂದು ಬಯಸುತ್ತಾರೆ. ಈ ಬಾರಿಯ ಹಜ್ ಯಾತ್ರೆ ಈಗಾಗಲೇ ಆರಂಭವಾಗಿದ್ದು, ಮಂಗಳೂರಿನಿಂದ ಇಂದಿನಿಂದ ಹಜ್​​ಗೆ ಯಾತ್ರಿಗಳು ಪ್ರಯಾಣ ಬೆಳೆಸುತ್ತಿದ್ದಾರೆ.

ಕಳೆದ ಹನ್ನೊಂದು ವರ್ಷದಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದ್ದು, ಈ ಬಾರಿಯ ಹಜ್​​ಗೆ ಹೋಗುವ ಯಾತ್ರೆ ಇಂದು ಆರಂಭವಾಗಿದೆ. ಕರ್ನಾಟಕದಿಂದ‌ ಈ ಬಾರಿ 8739 ಮಂದಿ ಹಜ್​​ಗೆ ಪ್ರಯಾಣಿಸುತ್ತಿದ್ದು, ಕಳೆದ ಬಾರಿ 6300 ಮಂದಿ ಯಾತ್ರೆ ಮಾಡಿದ್ದರು. ಇದರಲ್ಲಿ ಮಂಗಳೂರು ಕೇಂದ್ರದಿಂದ 747 ಮಂದಿ ಹಜ್ ಯಾತ್ರಿಗಳು ಯಾತ್ರೆ ಮಾಡುತ್ತಿದ್ದಾರೆ. ಪವಿತ್ರ ಮೆಕ್ಕಾ, ಮದೀನಾದಲ್ಲಿ 40 ದಿನಗಳ ಯಾತ್ರೆಗೆ ಇವರು ಸಿದ್ಧಗೊಂಡಿದ್ದು, ಇಂದಿನಿಂದ ಶುಕ್ರವಾರದವರೆಗೆ 5 ವಿಮಾನಗಳಲ್ಲಿ ಈ ಎಲ್ಲ ಹಜ್ ಪ್ರಯಾಣಿಕರು ಮದೀನಾ ತಲುಪಲಿದ್ದಾರೆ.

ಇಂದಿನಿಂದ ಹಜ್ ಯಾತ್ರೆ ಆರಂಭ

ಬುಧವಾರ ಸಂಜೆ 6.40ರ ವಿಮಾನದಲ್ಲಿ 150, ಗುರುವಾರ ಬೆಳಿಗ್ಗೆ 11.30ಕ್ಕೆ 150, 12.30ಕ್ಕೆ‌149, ರಾತ್ರಿ 12.30ಕ್ಕೆ 139 ಮತ್ತು ಸಂಜೆ 5.30ಕ್ಕೆ 159 ಯಾತ್ರಿಗಳು ಮದೀನಾಗ ಪ್ರಯಾಣ ಬೆಳೆಸಲಿದ್ದಾರೆ. 40 ದಿನದ ಹಜ್ ಯಾತ್ರೆಯ ವಿಮಾನ ಮೊದಲಿಗೆ ಮದೀನಾ ತಲುಪಲಿದ್ದು, ಅಲ್ಲಿ 10 ದಿನದ ಯಾತ್ರೆ ಮುಗಿದ ಬಳಿಕ ಒಂದು ತಿಂಗಳು ಯಾತ್ರಿಗಳು ಮೆಕ್ಕಾದಲ್ಲಿ ಇರಲಿದ್ದಾರೆ. ಯಾತ್ರೆ ಮುಗಿದು ಸೆ. 1, 2, 3ಕ್ಕೆ ಹಜ್ ಯಾತ್ರಿಗಳು ಮರಳಿ‌ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Intro:ಮಂಗಳೂರು; ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡಬೇಕೆಂದು ಬಯಸುತ್ತಾರೆ. ಈ ಬಾರಿಯ ಹಜ್ ಯಾತ್ರೆ ಈಗಾಗಲೇ ಆರಂಭವಾಗಿದ್ದು ಮಂಗಳೂರಿನಿಂದ ಇಂದಿನಿಂದ ಹಜ್ ಗೆ ಹಜ್ ಯಾತ್ರಿಗಳು ಪ್ರಯಾಣ ಬೆಳೆಸುತ್ತಿದ್ದಾರೆ.

Body:ಕಳೆದ ಹನ್ನೊಂದು ವರುಷದಿಂದ ಮಂಗಳೂರಿನಿಂದ ಹಜ್ ಯಾತ್ರೆ ಆರಂಭವಾಗಿದ್ದು ಈ ಬಾರಿಯ ಹಜ್ ಗೆ ಹೋಗುವ ಯಾತ್ರೆ ಇಂದು ಆರಂಭವಾಗಿದೆ.
ಕರ್ನಾಟಕದಿಂದ‌ ಈ ಬಾರಿ 8739 ಮಂದಿ ಹಜ್ ಗೆ ಪ್ರಯಾಣಿಸುತ್ತಿದ್ದು ಕಳೆದ ಬಾರಿ 6300 ಮಂದಿ ಯಾತ್ರೆ ಮಾಡಿದ್ದರು.
ಇದರಲ್ಲಿ ಮಂಗಳೂರು ಕೇಂದ್ರದಿಂದ 747 ಮಂದಿ ಹಜ್ ಯಾತ್ರಿಗಳು ಹಜ್ ಯಾತ್ರೆ ಮಾಡುತ್ತಿದ್ದಾರೆ. ಪವಿತ್ರ ಮಕ್ಕ ಮದೀನದಲ್ಲಿ 40 ದಿನಗಳ ಯಾತ್ರೆಗೆ ಇವರು ಸಿದ್ದಗೊಂಡಿದ್ದು ಇಂದಿನಿಂದ ಶುಕ್ರವಾರ ದವರೆಗೆ 5 ವಿಮಾನದಲ್ಲಿ ಈ ಎಲ್ಲ ಹಜ್ ಪ್ರಯಾಣಿಕರು ಮದೀನ ತಲುಪಲಿದ್ದಾರೆ.
ಬುಧವಾರ ಸಂಜೆ 6.40 ರ ವಿಮಾನದಲ್ಲಿ 150, ಗುರುವಾರ ಬೆಳಿಗ್ಗೆ 11.30 ಕ್ಕೆ 150 , 12.30ಕ್ಕೆ‌149, ರಾತ್ರಿ 12.30 ಕ್ಕೆ 139 ಮತ್ತು ಸಂಜೆ 5.30 ಕ್ಕೆ 159 ಯಾತ್ರಿಗಳು ಮದೀನ ತಲುಪಲಿದ್ದಾರೆ.
40 ದಿನದ ಹಜ್ ಯಾತ್ರೆಯ ವಿಮಾನ ಮೊದಲಿಗೆ ಮದೀನ ತಲುಪಲಿದ್ದು ಅಲ್ಲಿ 10 ದಿನದ ಯಾತ್ರೆ ಮುಗಿದ ಬಳಿಕ ಒಂದು ತಿಂಗಳು ಹಜ್ಜಾಜಿಗಳು ಮಕ್ಕಾದಲ್ಲಿ ಇರಲಿದ್ದಾರೆ. ಯಾತ್ರೆ ಮುಗಿದು ಸೆ 1,2, 3 ಕ್ಕೆ ಹಜ್ ಯಾತ್ರಿಗಳು ಮರಳಿ‌ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮಂಗಳೂರು ಕೇಂದ್ರದಿಂದ ಪ್ರಯಾಣ ಬೆಳೆಸುವ 747 ಮಂದಿಯಲ್ಲಿ ದಕ್ಷಿಣ ಕನ್ನಡ ದಿಂದ 610 ಮಂದಿ, ಉಡುಪಿ ಯಿಂದ 72,ಕೊಡಗುನಿಂದ 39 , ಹಾಸನದಿಂದ 29, ಚಿಕ್ಕಮಗಳೂರಿನಿಂದ 6 ಮಂದಿ ಹಜ್ ಗೆ ತೆರಳುತ್ತಿದ್ದಾರೆ. ಇವರೆಲ್ಲರಿಗೂ ಇಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಖಾಜಿಗಳು, ಸಚಿವ ಯು ಟಿ ಖಾದರ್ , ಹಿರಿಯರು ಶುಭ ಹಾರೈಸಿದರು.
ಈ ಬಾರಿ ಕರ್ನಾಟಕದಿಂದ 13995 ಮಂದಿ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಕರ್ನಾಟಕದ ಕೋಟ‌ 8739 ಮಂದಿಯನ್ನು ಹಿಂದೆ ಅರ್ಜಿ ಹಾಕಿದವರು, 70 ವರ್ಷ ದಾಟಿದವರು ಮತ್ತು ಲಾಟರಿ ಆಯ್ಕೆ ಮೂಲಕ ಆಯ್ಕೆ ಮಾಡಲಾಗಿದೆ.

ಬೈಟ್- ಕೆ ಎಂ‌ ಅಬೂಬಕ್ಕರ್ ಸಿದ್ದೀಕ್, ಸದಸ್ಯರು, ಕರ್ನಾಟಕ ರಾಜ್ಯ ಹಜ್ ಸಮಿತಿ

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.