ETV Bharat / state

ಫುಟ್​ಬಾಲ್ ನಟ್​ಮೆಗ್​ನಲ್ಲಿ ಗಿನ್ನಿಸ್ ದಾಖಲೆ: ವಿದೇಶಿ ಆಟಗಾರರ ದಾಖಲೆ ಮುರಿದ ಮಂಗಳೂರು ಯುವಕ - 30 ಸೆಕೆಂಡ್​ಗಳಿಗೆ 9 ನಟ್​ಮೆಗ್

ಅಮೆರಿಕದ ಮಹಿಳಾ ಆಟಗಾರ್ತಿ ತಾಷಾ ನಿಕೋಲ್ ತೇರಾನಿ ಅವರ 30 ಸೆಕೆಂಡ್​ಗಳಿಗೆ 9 ನಟ್​ಮೆಗ್​ ಗಿನ್ನಿಸ್​ ದಾಖಲೆಯನ್ನು ಮಂಗಳೂರಿನ ಮುಹಮ್ಮದ್​ ಶಲೀಲ್​ ಬ್ರೇಕ್​ ಮಾಡಿದ್ದಾರೆ.

Mahammad Shaleel
ಗಿನ್ನೆಸ್​ ದಾಖಲೆ ನಿರ್ಮಿಸಿದ ಮಹಮ್ಮದ್​ ಶಲೀಲ್​
author img

By

Published : Feb 14, 2023, 1:49 PM IST

Updated : Feb 14, 2023, 3:17 PM IST

ಫುಟ್​ಬಾಲ್ ನಟ್​ಮೆಗ್​ನಲ್ಲಿ ಗಿನ್ನಿಸ್ ದಾಖಲೆ ಮಾಡಿದ ಮುಹಮ್ಮದ್ ಶಲೀಲ್

ಮಂಗಳೂರು: ಭಾರತದಲ್ಲಿ ಫುಟ್​ಬಾಲ್ ಕ್ರೀಡೆಗೆ ಕ್ರಿಕೆಟ್​ನಷ್ಟು ಮಹತ್ವವಿಲ್ಲ. ಕ್ರಿಕೆಟ್​ ಆಟದಲ್ಲಿ ಮಾಡುವ ಸಾಧನೆಗಳು ಭಾರೀ ಸದ್ದು ಮಾಡುತ್ತವೆ. ಅದೇ ರೀತಿ ಫುಟ್​ಬಾಲ್​ನಲ್ಲಿ ಮಂಗಳೂರಿನ ಯುವಕನೊಬ್ಬ ಸಾಧನೆ ಮಾಡಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಮಂಗಳೂರಿನ ಯುವಕನೊಬ್ಬ ಇದೇ ಫುಟ್​ಬಾಲ್​ನಲ್ಲಿ ನಟ್​ಮೆಗ್​ ಆಟವಾಡುತ್ತಾ ವಿದೇಶಿಯರ ದಾಖಲೆಯನ್ನೇ ಮುರಿದು ಗಿನ್ನಿಸ್ ವರ್ಲ್ಡ್ ರೆಕಾರ್ಡ್​ಗೆ ಸೇರಿ ಎಲ್ಲರನ್ನೂ ಬೆರಗಾಗಿಸಿದ್ದಾರೆ.

ಹೌದು, ಮಂಗಳೂರಿನ ದೇರಳಕಟ್ಟೆ ಬೆಳ್ಮ ನಿವಾಸಿ ಮುಹಮ್ಮದ್ ಶಲೀಲ್ ಈ ಸಾಧನೆ ಮಾಡಿದ ಯುವಕ. ಮಂಗಳೂರಿನ ಯೇನೆಪೋಯ ಕಾಲೇಜಿನಲ್ಲಿ ಏವಿಯೇಷನ್ & ಲಾಜಿಸ್ಟಿಕ್ಸ್ ಅಂತಿಮ ಪದವಿ ವಿದ್ಯಾರ್ಥಿಯಾಗಿರುವ ಈತನಿಗೆ ಫುಟ್​ಬಾಲ್ ಕ್ರೀಡೆಯೆಂದರೆ ಅಚ್ಚುಮೆಚ್ಚು. ಗೋಲ್ ನಟ್​ನತ್ತ ಗುರಿಯಿಟ್ಟು ಫುಟ್​ಬಾಲ್ ಆಡವುದೆಂದರೆ ಖುಷಿ. ತನ್ನ ಹತ್ತನೇ ವಯಸ್ಸಿನಲ್ಲಿಯೇ ಫುಟ್​ಬಾಲ್ ಬಗ್ಗೆ ಕ್ರೇಜ್ ಬೆಳೆಸಿಕೊಂಡಿದ್ದ ಶಲೀಲ್ ಇದೀಗ ಅದೇ ಆಟದಲ್ಲಿ ಸಾಧನೆ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಟದಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.

ಶಲೀಲ್ ಕೇವಲ 30 ಸೆಕೆಂಡುಗಳಲ್ಲಿ ಫುಟ್​ಬಾಲ್​ 10 ನಟ್​ಮೆಗ್​ಗಳನ್ನು ಮಾಡಿ ಜಗತ್ತಿನ ಅತೀ ವೇಗದ ನಟ್​ಮೆಗ್ ಅನ್ನು ದಾಖಲೆ ಮಾಡಿದ್ದಾರೆ. ಎದುರಾಳಿ ಆಟಗಾರನ ಕಾಲುಗಳ ಮಧ್ಯದಿಂದ ಚೆಂಡನ್ನು ಕರಾರುವಕ್ಕಾಗಿ ಹೊಡೆಯುವ ಸಾಧನೆಯನ್ನು ಫುಟ್​ಬಾಲ್ ಭಾಷೆಯಲ್ಲಿ ನಟ್​ಮೆಗ್ ಎಂದು ಕರೆಯಲಾಗುತ್ತದೆ. ಸದ್ಯ ವಿದೇಶಿಯರ ಹೆಸರಿನಲ್ಲಿದ್ದ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಶಲೀಲ್ ಇದೀಗ ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ.

ಫುಟ್​ಬಾಲ್​ನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಗೂಗಲ್​ನಲ್ಲಿ ಈ ಬಗ್ಗೆ ನೋಡಿದ್ದ ಶಲೀಲ್ ನಟ್​ಮೆಗ್ ದಾಖಲೆಯನ್ನು ತನ್ನದಾಗಿಸಬೇಕೆಂದು ಹಠತೊಟ್ಟಿದ್ದರು. ಮೂರು ತಿಂಗಳ ನಿರಂತರ ಅಭ್ಯಾಸದ ಮೂಲಕ ನಟ್​ಮೆಗ್​ ಅನ್ನು ಕರಗತ ಮಾಡಿಕೊಂಡಿದ್ದಾರೆ. ಸಪ್ಟೆಂಬರ್​ನಲ್ಲಿ ಗಿನ್ನಿಸ್ ರೆಕಾರ್ಡ್​ಗೆ ಆನ್​ಲೈನ್​ ಅರ್ಜಿ ಹಾಕಿದ್ದ ಶಲೀಲ್, ಬಳಿಕ ವಿಡಿಯೋ ಮಾಡಿ ಸಲ್ಲಿಸಿದ್ದರು. ಇದೀಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿರುವ ಅಧಿಕೃತ ಇಮೇಲ್ ಬಂದಿದ್ದು, ಅತೀ ಶೀಘ್ರದಲ್ಲೇ ಗಿನ್ನಿಸ್ ರೆಕಾರ್ಡ್ ಪದಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

11 ನಟ್​ಮೆಗ್​ ಸಾಧಿಸುವ ಕನಸು: ಈ ಹಿಂದೆ ಇಬ್ಬರು ವಿದೇಶಿ ಆಟಗಾರರು 30 ಸೆಕೆಂಡ್​ನಲ್ಲಿ 7 ಹಾಗೂ ಒಂಬತ್ತು ನಟ್​ಮೆಗ್​ಗಳನ್ನು ಮಾಡಿ, ದಾಖಲೆ ಮೆರೆದಿದ್ದರು. 2017ರಲ್ಲಿ ಇಂಗ್ಲೆಂಡ್​ನ ಡೆಲೆ ಎಂಬವರು 30 ಸೆಕೆಂಡ್​ನಲ್ಲಿ 7 ನಟ್​ಮೆಗ್​ಗಳನ್ನು ಮಾಡುವ ಮೂಲಕ ಮೊದಲ ಗಿನ್ನಿಸ್ ದಾಖಲೆ ಮಾಡಿದ್ದರು. 2021ರಲ್ಲಿ ಫೆಬ್ರವರಿಯಲ್ಲಿ ಮಹಿಳಾ ಫುಟ್​ಬಾಲ್​ ಆಟಗಾರ್ತಿ ಅಮೆರಿಕ ಕ್ಯಾಲಿಪೋರ್ನಿಯಾದ ವೆಸ್ಟ್ ಲೇಕ್​ನ ತಾಷಾ ನಿಕೋಲ್ ತೇರಾನಿ ಅವರು ಒಂದು ನಿಮಿಷದಲ್ಲಿ 18 ನಟ್​ಮೆಗ್ (30 ಸೆಕೆಂಡ್​ಗಳಲ್ಲಿ 9) ಮಾಡುವ ಮೂಲಕ ಗಿನ್ನಿಸ್ ದಾಖಲೆ ಸಾಧಿಸಿದ್ದರು. ಇದೀಗ ಶಲೀಲ್ 30 ಸೆಕೆಂಡ್​ನಲ್ಲಿ 10 ನಟ್​ಮೆಗ್​ಗಳನ್ನು ಮಾಡಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಮುಂದೆ 11 ನಟ್​ಮೆಗ್​ಗಳನ್ನು ಮಾಡುವ ಗುರಿಯನ್ನು ಹೊಂದಿರುವ ಶಲೀಲ್ ಭಾರತೀಯ ಫುಟ್​ಬಾಲ್ ತಂಡಕ್ಕೆ ಸೇರ್ಪಡೆಗೊಳ್ಳುವ ಆಸೆಯನ್ನು ಹೊಂದಿದ್ದಾರೆ. ಅದಕ್ಕಾಗಿ ಸತತ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಈ ಸಾಧನೆಯ ಬಗ್ಗೆ ಮಾತನಾಡಿರುವ ಮುಹಮ್ಮದ್ ಶಲೀಲ್ ಅವರು ಗಿನ್ನಿಸ್ ರೆಕಾರ್ಡ್ ಯಶಸ್ವಿಯಾಗಿದೆ. 2017ರಲ್ಲಿ ಈ ರೆಕಾರ್ಡ್ ಆರಂಭವಾಯಿತು. ಇಂಗ್ಲೆಂಡ್​ನವರು, ಕ್ಯಾಲಿಫೋರ್ನಿಯಾದವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದೇನೆ. ಸೆಪ್ಟೆಂಬರ್​ನಲ್ಲಿ ವಿಡಿಯೋ ಮಾಡಿ ಹಾಕಿದ್ದೆ. ಜನವರಿಯಲ್ಲಿ ರೆಕಾರ್ಡ್ ಆಗಿರುವ ಬಗ್ಗೆ ಮಾಹಿತಿ ಬಂತು. ಎರಡು ವರ್ಷದಿಂದ ಪ್ರಯತ್ನ ಪಡುತ್ತಿದ್ದೆ. ಇದರಿಂದ ಫುಟ್​ಬಾಲ್ ಆಟವಾಡುವಾಗ ಕಂಟ್ರೋಲ್ ಮಾಡಲು ಉಪಯೋಗವಾಗಲಿದೆ ಎನ್ನುತ್ತಾರೆ.

ನಟ್​ಮೆಗ್ ಅಂದರೆ ಏನು? ಫುಟ್ಬಾಲ್​​ನಲ್ಲಿ 'ನಟ್​ಮೆಗ್' ಮಾಡುವುದು ಅಂದರೆ ಎದುರಾಳಿ ಆಟಗಾರನ ಕಾಲುಗಳ ನಡುವೆಯೇ ಒಂದು ಕಡೆಯಿಂದ ಚೆಂಡನ್ನು ದಾಟಿಸಿ ಇನ್ನೊಂದು ಕಡೆಯಿಂದ ಅದರ ಮೇಲೆ ನಿಯಂತ್ರಣ ಸಾಧಿಸುವುದು. ಇದಕ್ಕೆ ತೀರಾ ವಿಶೇಷ ಕೌಶಲ ಬೇಕಾಗುತ್ತದೆ. ಇಂತಹದ್ದೊಂದು ಸಾಧನೆ ಈ ಮುಹಮ್ಮದ್ ಶಲೀಲ್ ಮಾಡಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ಲೋಕದ ನೂತನ ಪ್ರಯೋಗ: ಬೆಳಗಾವಿಯಲ್ಲಿ ನಡೆದ ಗಲ್ಲಿ ಕ್ರಿಕೆಟ್​ಗೆ ದಿಲ್ಲಿ ಆಟಗಾರರ ಫಿದಾ!

Last Updated : Feb 14, 2023, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.