ಕಡಬ(ದಕ್ಷಿಣ ಕನ್ನಡ): ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಪಂಚಾಯತ್ ಆಡಳಿತ ನಡೆಸಲು ಮೀಸಲಾತಿ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ನಿಗದಿ ಮಾಡಿರುವ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಪ್ರಸ್ತುತ ಕಡಬ ತಾಲೂಕು ಪಂಚಾಯತ್ ಕ್ಷೇತ್ರಗಳ ಸದಸ್ಯರ ವಿವರ:
ಫಝಲ್ ಕೋಡಿಂಬಾಳ- ಕಡಬ ಕ್ಷೇತ್ರ (ಕಡಬ-ಕೋಡಿಂಬಾಳ)
ಗಣೇಶ್ ಕೈಕುರೆ- ಕುಟ್ರುಪ್ಪಾಡಿ ಕ್ಷೇತ್ರ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ)
ಪಿ.ವೈ. ಕುಸುಮಾ- ಐತೂರು ಕ್ಷೇತ್ರ (ಐತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ
ಆಶಾ ಲಕ್ಷ್ಮಣ್ -ಬಿಳಿನೆಲೆ ಕ್ಷೇತ್ರ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು)
ತೇಜಶ್ವಿನಿ ಶೇಖರ ಗೌಡ- ಗೊಳಿತ್ತೊಟ್ಟು ಕ್ಷೇತ್ರ (ಗೊಳಿತ್ತೊಟ್ಟು, ಆಲಂತಾಯ, ಹಳೇನೆರೆಂಕಿ)
ಲಲಿತಾ ಈಶ್ವರ ಚಾರ್ವಾಕ- ಕ್ಷೇತ್ರ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಮಣ, ಕುದ್ಮಾರು),
ರಾಜೇಶ್ವರಿ ಕನ್ಯಮಂಗಲ -ಸವಣೂರು ಕ್ಷೇತ್ರ(ಸವಣೂರು-ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು),
ಉಷಾ ಅಂಚನ್ ನೆಲ್ಯಾಡಿ ಕ್ಷೇತ್ರ (ನೆಲ್ಯಾಡಿ, ಕೊಣಾಲು) ವಲ್ಸಮ್ಮ ಕೆ.ಟಿ. ಕೌಕ್ರಾಡಿ ಕ್ಷೇತ್ರ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ)
ತಾರಾ ಕೇಪುಳು- ಆಲಂಕಾರು ಕ್ಷೇತ್ರ (ಆಲಂಕಾರು, ಪೆರಾಬೆ, ಕುಂತೂರು)
ಜಯಂತಿ ಆರ್ ಗೌಡ- ರಾಮಕುಂಜ ಕ್ಷೇತ್ರ (ರಾಮಕುಂಜ, ಕೊಯಿಲ)
ಅಶೋಕ್ ನೆಕ್ರಾಜೆ- ಸುಬ್ರಹ್ಮಣ್ಯ ಕ್ಷೇತ್ರ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಳ್ಪ, ಕೇನ್ಯ)
ಶುಭದಾ ಎಸ್. ರೈ - ಎಣ್ಮೂರು ಕ್ಷೇತ್ರ (ಎಡಮಂಗಲ, ಎಣ್ಮೂರು)