ಮಂಗಳೂರು : ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಬಜ್ಪೆ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 20 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ವಿಮಾನ I X1384 ನಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡಲಾಗುತ್ತಿತ್ತು. ದುಬೈನಿಂದ ಬಂದ ಪ್ರಯಾಣಿಕ ಚಿನ್ನದ ಪೌಡರ್ ಅಡಗಿಸಿಟ್ಟು ಸಾಗಣೆ ಮಾಡುತ್ತಿದ್ದ.
ತಪಾಸಣೆ ವೇಳೆ ಚಿನ್ನ ಸಾಗಣೆ ಬೆಳಕಿಗೆ ಬಂದಿದೆ. ಈತನಿಂದ 27,36,659 ರೂಪಾಯಿ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 531.390 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ.