ಮಂಗಳೂರು: ಮಂಗಳೂರು ಮತ್ತು ಮುಂಬೈ ನಡುವೆ ಗೋ ಏರ್ ವಿಮಾನ ಇಂದಿನಿಂದ ಹಾರಾಟ ಆರಂಭಿಸಲಿದೆ.
ಮಂಗಳೂರಿನಲ್ಲಿ ನೂತನ ಸೇವೆಯನ್ನು ಆರಂಭಿಸಿರುವ ಗೋ ಏರ್ ಸಂಸ್ಥೆ ಇಂದಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರತಿದಿನ ನೇರ ವಿಮಾನ ಸೇವೆಯನ್ನು ನೀಡಲಿದೆ.
ಗೋ ಏರ್ ವಿಮಾನವು ಬೆಳಗ್ಗೆ 9.30 ಕ್ಕೆ ಮಂಗಳೂರಿನಿಂದ ಹೊರಟು ಬೆ. 11 ಗಂಟೆಗೆ ಮುಂಬೈ ತಲುಪಲಿದೆ. ಮುಂಬೈನಿಂದ ರಾತ್ರಿ 7.40 ಕ್ಕೆ ಹೊರಟು 9 ಗಂಟೆಗೆ ಮಂಗಳೂರು ತಲುಪಲಿದೆ. ಈಗಾಗಲೇ ಮಂಗಳೂರು - ಮುಂಬೈ ನಡುವೆ ಹಲವು ವಿಮಾನಯಾನ ಸಂಸ್ಥೆಗಳ ಸೇವೆಗಳು ಇದ್ದು, ಇದೀಗ ಗೋ ಏರ್ ನ ಸೇವೆಯು ಸೇರ್ಪಡೆಯಾಗಿದೆ.
ಮಂಗಳೂರಿನಿಂದ ಮಾಲ್ಡೀವ್ಸ್ ಗೂ ಗೋ ಏರ್:
ಮಂಗಳೂರು ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್ ಗೂ ವಿಮಾನ ಯಾನ ಸೇವೆ ನೀಡಲು ಗೋ ಏರ್ ನಿರ್ಧರಿಸಿದೆ. ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು- ಬೆಂಗಳೂರು- ಮಾಲ್ಡೀವ್ಸ್ ಮಧ್ಯೆ ವಿಮಾನಯಾನ ಆರಂಭಿಸಲು ಗೋ ಏರ್ ಸಂಸ್ಥೆ ಚಿಂತನೆ ನಡೆಸಿದೆ.