ETV Bharat / state

ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ: ಆರೋಪಿ ಬಂಧನ

ಉದ್ಯೊಗ ಕೊಡಿಸುವ ನೆಪದಲ್ಲಿ ಕೋಟಿಗಟ್ಟಲೆ ಹಣವನ್ನು ವಂಚನೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ಪೊಲೀಸ್​ ಠಾಣೆ ಮುಂದೆ ದಕ್ಷಿಣ ಕನ್ನಡದ 40ಕ್ಕೂ ಹೆಚ್ಚು ಜನ ಜಮಾಯಿಸಿದ್ದಾರೆ.

ಕೇರಳದ ಕಾಸರಗೋಡಿನ ಮುಟ್ಟತೋಡಿ ನಿವಾಸಿ ಶ್ರೀನಾಥ್

author img

By

Published : Nov 8, 2022, 3:37 PM IST

ಸುಳ್ಯ (ದಕ್ಷಿಣ ಕನ್ನಡ): ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವಾರು ಜನರಿಂದ ಲಕ್ಷಗಟ್ಟಲೇ ಹಣ ವಸೂಲಿ ಮಾಡಿ ವಂಚಿಸಿದ ಆರೋಪಿಯೊಬ್ಬರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಇವರು ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಹಲವರನ್ನು ವಂಚಿಸಿದ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 40ಕ್ಕೂ ಹೆಚ್ಚು ಮಂದಿ ಮಡಿಕೇರಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.

ಹಣ ಪಡೆದು ವಂಚನೆ: ಕೇರಳದ ಕಾಸರಗೋಡಿನ ಮುಟ್ಟತೋಡಿ ನಿವಾಸಿ ಶ್ರೀನಾಥ್ ಎಂಬುವರು ಬಂಧಿತ ಆರೋಪಿ. ಶ್ರೀನಾಥ್ ಮತ್ತು ವಿನೋದ್ ಎಂಬುವರು ಚೆಕ್ ರಿಪಬ್ಲಿಕ್ ಮತ್ತು ವಿದೇಶಗಳಲ್ಲಿ ಉದ್ಯೋಗ, ಕೊಡಿಸುವುದಾಗಿ ಜನರಿಗೆ ಹೇಳಿ ಲಕ್ಷಗಟ್ಟಲೆ ಹಣ ಪಡೆದು ವಂಚನೆ ಮಾಡಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ಕೊಡಗು ಜಿಲ್ಲೆಯ ಚೆಂಬೂ ನಿವಾಸಿ ಜೇಮ್ಸ್ ಜೋಸೆಫ್ ಎಂಬುವರು ನೀಡಿದ ದೂರು ಆಧರಿಸಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿದೇಶದಲ್ಲಿ ಉದ್ಯೋಗ ಪಡೆಯಲು ಸುಮಾರು 4ಲಕ್ಷ ರೂಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ಇದರ ಪ್ರೊಸೆಸಿಂಗ್ ಚಾರ್ಜ್ ಆಗಿ1.5 ಲಕ್ಷ ಮೊದಲು ಕಟ್ಟಬೇಕು. ಉಳಿದ 2.5 ಲಕ್ಷ ರೂ. ಗಳನ್ನು ಆರೋಪಿ ಹಂತ ಹಂತವಾಗಿ ಪಡೆಯುತ್ತಿದ್ದರಂತೆ. ಅದರಂತೆ ದಿನಾಂಕ 05-11-2021 ರಂದು ಜೇಮ್ಸ್ ಅವರಿಂದ ಆರೋಪಿ ಶ್ರೀನಾಥ್ ಕೇರಳದ ಕಾಸರಗೋಡಿನ ಐಡಿಬಿಐ ಖಾತೆ ಸಂಖ್ಯೆ : 0450102000006705 ಇದಕ್ಕೆ ಸಂಪಾಜೆ ಕೆನರಾ ಬ್ಯಾಂಕ್ ಖಾತೆಯಿಂದ ರೂಪಾಯಿ 1.5 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿದ್ದರು. ಆದರೆ ನಂತರದಲ್ಲಿ ವಿಸಾವನ್ನು ಕಳುಹಿಸದೇ ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈ ಬಗ್ಗೆ ಮಡಿಕೇರಿ ರೂರಲ್ ಪೊಲೀಸ್ ಠಾಣೆಯಲ್ಲಿ IPC 1860(U/S-417,420) ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ದೂರಿನ ಪ್ರತಿ
ದೂರಿನ ಪ್ರತಿ

ಠಾಣೆ ಮುಂದೆ ಜಮಾಯಿಸಿದ ಜನ: ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲೂ ಈತ ಕೋಟಿಗಟ್ಟಲೆ ಹಣ ಪಡೆದು ವಂಚಿಸಿರುವ ಬಗ್ಗೆ ಸಾಮಾಜಿಕ ಸಂಘಟನೆ ನೀತಿ ತಂಡಕ್ಕೆ ದೂರುಗಳು ಲಭ್ಯವಾಗಿರುವ ಮಾಹಿತಿ ಲಭಿಸಿದೆ. ಪೊಲೀಸರಿಗೆ ದೂರು ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಆರೋಪಿಯ ಬಂಧನವಾಗುತ್ತಿದ್ದಂತೆ ವಿವಿಧ ತಾಲೂಕುಗಳಲ್ಲಿ ವಂಚನೆಗೊಳಗಾದ ಸುಮಾರು 40ಕ್ಕೂ ಹೆಚ್ಚು ಜನರು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ವ್ಯಕ್ತಿಗೆ ಪಂಗನಾಮ ಹಾಕಿದ ಖದೀಮರು: 4 ನಿಮಿಷದಲ್ಲಿ 1.80 ಲಕ್ಷ ರೂ ಖೋತಾ

ಇವರಲ್ಲಿ ಹಲವರು ಆರೋಪಿಗೆಗೆ ತಮ್ಮ ವಾಹನ, ಜಾಗ, ಆಭರಣಗಳನ್ನು ಮಾರಿ ಲಕ್ಷಗಟ್ಟಲೆ ಹಣವನ್ನು ನೀಡಿದ್ದಾರೆ. ಆದರೆ ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೂ ಈ ಬಗ್ಗೆ ಸದ್ಯ ದೂರು ನೀಡದ ಹಿನ್ನೆಲೆ ಆರೋಪಿಯೂ ಪ್ರಸ್ತುತ ಮಡಿಕೇರಿಯಲ್ಲಿ ದಾಖಲಾಗಿರುವ ದೂರಿನ ಮೇರೆಗೆ ಸಂತ್ರಸ್ತನಿಗೆ ಹಣ ಸಂದಾಯ ಮಾಡಿ ಪರಾರಿಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಡಿಕೇರಿಗೆ ಹೋದ ಸುಮಾರು 40ಕ್ಕೂ ಹೆಚ್ಚು ಜನರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.