ETV Bharat / state

ಆನ್​ಲೈನ್​ ವಂಚನೆ ಜಾಲ: 15 ಸಾವಿರ ರೂ ಕಳೆದುಕೊಂಡ ಕೂಲಿ ಕಾರ್ಮಿಕ

ಆನ್​ಲೈನ್​ ವಂಚನೆಯ ಜಾಲಕ್ಕೆ ಸಿಲುಕಿದ ವ್ಯಕ್ತಿಯೋರ್ವ 15,000 ರೂಪಾಯಿ ಹಣ ಕಳೆದುಕೊಂಡಿದ್ದಾರೆ.

sss
ಆನ್​ಲೈನ್​ ಶಾಪಿಂಗ್ ಕಂಪೆನಿ ಹೆಸರಿನಲ್ಲಿ ದೋಖಾ,ಬಹುಮಾನದ ಆಸೆಗೆ 15 ಸಾವಿರ ಕಳೆದುಕೊಂಡ ಕೂಲಿ ಕಾರ್ಮಿಕ!
author img

By

Published : Feb 7, 2020, 9:09 PM IST

Updated : Feb 7, 2020, 9:24 PM IST

ಮಂಗಳೂರು: ಆನ್​ಲೈನ್ ಶಾಪಿಂಗ್ ಕಂಪೆನಿಯೊಂದರ ಹೆಸರಿನಲ್ಲಿ ಬಂದ ನಕಲಿ ಲಕ್ಷ ರೂಪಾಯಿ ಮೊತ್ತದ ನಗದು ಬಹುಮಾನದ ಘೋಷಣೆಯ ಪತ್ರವೊಂದನ್ನು ನಂಬಿದ ಕಾಣಿಯೂರಿನ ವ್ಯಕ್ತಿಯೊಬ್ಬರು 15 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಚಾರ್ವಕ ದೇವಿನಗರದ ಸುಂದರ್ ನಾಗಲೋಕ ಹಣ ಕಳೆದುಕೊಂಡವರು. ಕೂಲಿ ಕೆಲಸ ಮಾಡುವ ಇವರಿಗೆ ಆನ್​ಲೈನ್ ಶಾಪಿಂಗ್​ಗೆ ಹೆಸರುವಾಸಿಯಾದ ನಾಪ್ ಟಾಲ್ ಕಂಪೆನಿಯ ಹೆಸರಿನಲ್ಲಿ ನಕಲಿ ಪತ್ರವೊಂದು ಬಂದಿತ್ತು. ಅದರಲ್ಲಿನ ಕೂಪನ್​ನಲ್ಲಿ 14,90,000 ರೂಪಾಯಿ ಗೆದ್ದಿರುವುದಾಗಿ ನಮೂದಾಗಿತ್ತು. ಅಲ್ಲದೆ ಸಿದ್ದಾರ್ಥ್ ಎಂಬ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ 14 ಲಕ್ಷದ 90 ಸಾವಿರ ಇರುವ ಚೆಕ್ ಕಳುಹಿಸಿ ಈ ಹಣದ ಶೇ.1 ರಷ್ಟು ಹಣವನ್ನು ಬ್ಯಾಂಕ್ ಖಾತೆಯೊಂದಕ್ಕೆ ಜಮೆ ಮಾಡುವಂತೆ ತಿಳಿಸಿದ್ದ.

ಅದನ್ನು ನಂಬಿದ ಸುಂದರ್ ಅವರು ಹಣ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿ ಹಣವು ಈಗ ರಿಸರ್ವ್ ಬ್ಯಾಂಕ್​ಗೆ ಬಂದಿದೆ ಎಂದು ಪೋನ್ ಮಾಡಿದಲ್ಲದೆ, ಹಣ ಬಂದಿರುವ ನಕಲಿ ಪತ್ರವನ್ನೂ ಕಳುಹಿಸಿದ್ದಾನೆ. ಹಣವನ್ನು ರಿಸರ್ವ್ ಬ್ಯಾಂಕ್ ತಡೆಹಿಡಿದಿದ್ದು, 44,700 ಕೂಡಲೇ ಪಾವತಿಸುವಂತೆ ತಿಳಿಸಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ರಿಸರ್ವ್ ಬ್ಯಾಂಕಿನ ನಕಲಿ ಪತ್ರ ಪತ್ರವನ್ನೂ ಕಳುಹಿಸಿದ್ದಾನೆ.

ಆದರೆ ಕೆಲ ದಿನಗಳ ಹಿಂದೆ ಕಡಬದಲ್ಲಿ ಯುವಕನೊಬ್ಬನಿಗೆ ಕಾರು ಆಫರ್ ಕುರಿತಾಗಿ ಈಟಿವಿ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ ಸುಂದರ್​ ತನಗೂ ಮೋಸ ಆಗಿರುವುದನ್ನು ಅರಿತುಕೊಂಡಿದ್ದಾರೆ. ನಂತರ ಈ ಕುರಿತು ನಾಪ್ ಟಾಲ್ ಕಂಪೆನಿಗೆ ಕರೆ ಮಾಡಿದ್ದು, ಇದೊಂದು ಮೋಸದ ಜಾಲ ಎಂಬ ಮಾಹಿತಿ ಲಭ್ಯವಾಗಿದೆ.

Last Updated : Feb 7, 2020, 9:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.