ಮಂಗಳೂರು (ದಕ್ಷಿಣಕನ್ನಡ) : ಜನರು ಸಮಾಜದಲ್ಲಿ ಮಂಗಳಮುಖಿಯರನ್ನು ಜನರು ನಿರ್ಲಕ್ಷ್ಯ ಭಾವದಿಂದ ನೋಡುತ್ತಾರೆ. ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗದೆ ಪ್ರತ್ಯೇಕವಾಗಿರುವ ಮಂಗಳಮುಖಿಯರಿಗೆ ಸಮಾಜದೊಂದಿಗೆ ಬೆರೆಯುವ ಮಹತ್ವಾಕಾಂಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ನಾಲ್ವರು ಮಂಗಳಮುಖಿಯರು ಡ್ಯಾನ್ಸ್ ಕಲಿಯಲು ಮುಂದಾಗಿದ್ದಾರೆ.
ಬೆಂಗಳೂರಿನ ಪ್ರಿಯಾ, ಬಳ್ಳಾರಿಯ ಸಂಧ್ಯಾ ಮತ್ತು ರೇಖಾ, ರಾಯಚೂರಿನ ಹನಿ ದಶಕಗಳ ಹಿಂದೆ ಮಂಗಳೂರಿಗೆ ಬಂದಿದ್ದರು. ಸದ್ಯ ಮಂಗಳೂರಿನಲ್ಲಿ ನೆಲೆಸಿರುವ ಇವರಿಗೆ ಸಮಾಜದಲ್ಲಿ ಇತರರಂತೆ ಬದುಕುವ ಆಸೆ ಮೂಡಿದೆ. ಅಂತೆಯೇ ಈ ನಾಲ್ವರು ಮಂಗಳಮುಖಿಯರು ತಮಗೆ ಡ್ಯಾನ್ಸ್ ಕಲಿಯುವ ಇಚ್ಛೆ ಇರುವ ಬಗ್ಗೆ ಮೋಹನ್ ಎಂಬವರಲ್ಲಿ ಹೇಳಿಕೊಂಡಿದ್ದಾರೆ. ಮೋಹನ್ ಅವರು ಮಂಗಳಮುಖಿಯರಿಗೆ ಡ್ಯಾನ್ಸ್ ಟೀಚರ್ ಸುಸೆನ್ ಮಿಸ್ಕಿತ್ ಅವರನ್ನು ಪರಿಚಯಿಸಿ ಡ್ಯಾನ್ಸ್ ಕಲಿಯಲು ಸಹಕರಿಸಿದ್ದಾರೆ. ಸದ್ಯ ಕಳೆದ ಒಂದು ತಿಂಗಳಿನಿಂದ ಡ್ಯಾನ್ಸ್ ಟೀಚರ್ ಸುಸೆನ್ ಮಿಸ್ಕಿತ್ ಅವರಿಂದ ಈ ಮಂಗಳಮುಖಿಯರು ನೃತ್ಯ ಕಲಿಯುತ್ತಿದ್ದಾರೆ.
ಬಾಲಿವುಡ್ ಡ್ಯಾನ್ಸ್ ಕಲಿಯುತ್ತಿರುವ ಮಂಗಳಮುಖಿಯರು ಸಮಾಜದಲ್ಲಿ ಇತರರಂತೆ ಬದುಕುವ ಮಹದಾಸೆಯನ್ನು ಹೊಂದಿದ್ದಾರೆ. ಜೊತೆಗೆ ಡ್ಯಾನ್ಸ್ ಕಲಿತು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆಕಾಂಕ್ಷೆಯನ್ನು ಇವರು ಹೊಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಸೆನ್ ಮಿಸ್ಕಿತ್ ಅವರು, ನಾಲ್ವರು ಮಂಗಳಮುಖಿಯರು ಉತ್ತಮವಾಗಿ ಕಲಿಯುತ್ತಿದ್ದಾರೆ. ಜೊತೆಗೆ ನಮಗೆ ಈ ಡ್ಯಾನ್ಸ್ ಟೀಚರ್ ಉತ್ತಮ ತರಬೇತಿ ನೀಡುತ್ತಿದ್ದಾರೆ ಎಂದು ಮಂಗಳಮುಖಿಯರು ಹರ್ಷ ವ್ಯಕ್ತಪಡಿಸುತ್ತಾರೆ.
ಒಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಂಗಳಮುಖಿಯರು ಸಮಾಜದಲ್ಲಿ ಇತರರಂತೆ ಡ್ಯಾನ್ಸ್ ಕಲಿತು ತಮ್ಮ ಪ್ರತಿಭೆ ಪ್ರದರ್ಶಿಸುವ ಇಚ್ಛೆ ಹೊಂದಿರುವುದು ಶ್ಲಾಘನೀಯ ಸಂಗತಿ.
ಇದನ್ನೂ ಓದಿ : ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಳಿಂಗ ಸರ್ಪ.. ನಾಡಿನಿಂದ ಮತ್ತೆ ಕಾಡಿಗೆ