ETV Bharat / state

ಮಂಗಳೂರಲ್ಲಿ ಸಮೋಸ ತಿನ್ನಲು ಬಂದ ಗ್ರಾಹಕರಿಂದ ಶೂಟೌಟ್: ನಾಲ್ವರಿಗೆ ಗಾಯ! - ಮಂಗಳೂರು ಶೂಟೌಟ್​ ಸುದ್ದಿ,

ಕಡಲತಡಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಸಮೋಸ ತಿನ್ನಲು ಬಂದ ಗ್ರಾಹಕರು ಶೂಟೌಟ್​ ನಡೆಸಿರುವ ಘಟನೆ ಮಂಗಳೂರಲ್ಲಿ ಸಂಜೆ ನಡೆದಿದೆ. ಈ ಗುಂಡಿನ ದಾಳಿಯಿಂದ ನಗರದ ಜನರು ಬೆಚ್ಚಿಬಿದ್ದಿದ್ದಾರೆ.

Four injured in Mangalore Shootout, Shootout in Mangalore, Mangalore Shootout, Mangalore Shootout news, Mangalore Shootout breaking, ಮಂಗಳೂರು ಶೂಟೌಟ್​ನಲ್ಲಿ ನಾಲ್ವರಿಗೆ ಗಾಯ, ಮಂಗಳೂರಿನಲ್ಲಿ ಶೂಟೌಟ್​, ಮಂಗಳೂರು ಶೂಟೌಟ್​, ಮಂಗಳೂರು ಶೂಟೌಟ್​ ಸುದ್ದಿ, ಮಂಗಳೂರು ಶೂಟೌಟ್​ ಬ್ರೇಕಿಂಗ್​,
ಮಂಗಳೂರಿನಲ್ಲಿ ಸಮೋಸ ತಿನ್ನಲು ಬಂದ ಗ್ರಾಹಕರಿಂದ ಶೂಟೌಟ್
author img

By

Published : Oct 30, 2020, 8:01 PM IST

Updated : Oct 30, 2020, 9:38 PM IST

ಮಂಗಳೂರು: ಸಮೋಸ ತಿನ್ನಲು ಹೋಟೆಲ್​ಗೆ ಬಂದ ಗ್ರಾಹಕರು ದಿಢೀರ್​ ಶೂಟೌಟ್ ನಡೆಸಿರುವ ಘಟನೆ ನಗರದ ಫಳ್ನೀರ್​ನಲ್ಲಿ ನಡೆದಿದೆ.

ಶೂಟೌಟ್​ನಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರಿನಲ್ಲಿ ಸಮೋಸ ತಿನ್ನಲು ಬಂದ ಗ್ರಾಹಕರಿಂದ ಶೂಟೌಟ್

ಫಳ್ನೀರ್ ನಲ್ಲಿರುವ ಹೋಟೆಲ್​ವೊಂದಕ್ಕೆ ಗ್ರಾಹಕರಾಗಿ ಬಂದವರು ಸಮೋಸ ಕೇಳಿದ್ದರು. ಆಗ ಹೋಟೆಲ್ ಮತ್ತು ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಈ ವೇಳೆ ಹೋಟೆಲ್​ನಿಂದ ಹೊರಗೆ ಬಂದ ಗ್ರಾಹಕರು ತಮ್ಮಲ್ಲಿದ್ದ ಪಿಸ್ತೂಲ್​ನಿಂದ ಶೂಟ್ ಮಾಡಿದ್ದಾರೆ.

ಆರೋಪಿಗಳನ್ನು ಹೋಟೆಲ್​ನವರು ಓಡಿಸಿಕೊಂಡು ಹೋಗಿದ್ದು, ಈ ವೇಳೆ ಮತ್ತೆ ಶೂಟ್ ಮಾಡಿದ್ದಾರೆ. ಈ ವೇಳೆ ಇಬ್ಬರು ಗ್ರಾಹಕರು ಮತ್ತು ಹೋಟೆಲ್​ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ದೌಡಾಯಿಸಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.

Last Updated : Oct 30, 2020, 9:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.