ETV Bharat / state

ಪೊಲೀಸ್ ದಾಳಿ: ನಾಲ್ಕು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲು

author img

By

Published : Oct 29, 2020, 12:45 AM IST

ಕ್ರಿಕೆಟ್​ ಬೆಟ್ಟಿಂಗ್​ ಪ್ರಕರಣ ದಾಖಲು ಮಾಡಿಕೊಂಡಿರುವ ಮಂಗಳೂರು ಪೊಲೀಸರು 16 ಮಂದಿಯನ್ನ ದಸ್ತಗಿರಿ ಮಾಡಿದ್ದಾರೆ.

MNG CCB police
MNG CCB police

ಮಂಗಳೂರು: ನಗರದಲ್ಲಿ ವಿವಿಧ ಕಡೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ಕು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ ನಾಲ್ಕು ಪ್ರಕರಣಗಳಲ್ಲಿ 16 ಮಂದಿಯನ್ನು ದಸ್ತಗಿರಿ ಮಾಡಲಾಗಿದ್ದು, 28 ಮೊಬೈಲ್ ಫೋನ್​, 8 ಲಕ್ಷ ರೂ. ಮೌಲ್ಯದ ಒಂದು ಕಾರು ಹಾಗೂ 2,67,100 ರೂ. ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಯಾವುದಾದರೂ ಅನಧಿಕೃತ ಕ್ಲಬ್​ಗಳು ನಡೆಯುತ್ತಿರುವ ಅಥವಾ ಯಾವುದೇ ಕ್ರಿಕೆಟ್ ಬೆಟ್ಟಿಂಗ್​ಗಳು ಮಾಹಿತಿ ಸಾರ್ವಜನಿಕರಿಗೆ ಲಭ್ಯವಾದಲ್ಲಿ ಉಪ ಪೊಲೀಸ್ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ಅರುಣಾಂಗ್ಶು ಗಿರಿ(9480802304), ಉಪ ಪೊಲೀಸ್ ಆಯುಕ್ತ(ಅಪರಾಧ ಮತ್ತು ಸಂಚಾರ) ವಿನಯ್ ಎ.ಗಾಂವ್ಕರ್(9480802305), ನಗರ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ(9480802301, 0824-2220800) ಕರೆ ಮಾಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.