ಮಂಗಳೂರು: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಹಾನಾಯಕನ ಪಾತ್ರವಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಅಭಯಚಂದ್ರ ಜೈನ್, ಅವನ ಹಣೆಬರಹ ರೇಪ್ ಕೇಸ್ನಲ್ಲಿ ದೇಶದ ಜನತೆಗೆ ಗೊತ್ತಾಗಿದೆ, ಆತನ ಮಾತಿಗೆ ಬೆಲೆ ಇಲ್ಲ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಸಿಡಿ ತಯಾರಿಸಿದ ಮಹಾನಾಯಕನ ಪಾತ್ರವಿದೆ ಎಂದು ಕಾಂಗ್ರೆಸ್ ನಾಯಕ ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷ ಆರೋಪ ಮಾಡಿದ್ದರು. 'ಅವನಿಗೆ ಮಾಧ್ಯಮಕ್ಕೆ ಮುಖ ತೋರಿಸುವ ಯೋಗ್ಯತೆ ಇಲ್ಲ. ಈಗ ಮಂತ್ರಿಗಿರಿ ಕೇಳ್ತಿದ್ದಾನೆ. ಅದಕ್ಕಾಗಿ ಕ್ಯೂ ನಿಂತಿದ್ದಾನೆ' ಎಂದು ಅಭಯಚಂದ್ರ ಜೈನ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: 'ಸಂತೋಷ್ ಆತ್ಮಹತ್ಯೆ ಹಿಂದೆ ನನ್ನ ಸಿಡಿ ತಯಾರಿಸಿದ್ದ ಮಹಾನಾಯಕನ ಕೈವಾಡ'