ಮೂಡುಬಿದ್ರೆ: ಮೂಡುಬಿದ್ರೆ ತಾಲೂಕಿನ ವಾಲ್ಪಾಡಿ ಗ್ರಾ.ಪಂ ಕಟ್ಟಡದಲ್ಲಿ ಶುಕ್ರವಾರ ಸಾಯಂಕಾಲ ಶಾರ್ಟ್ ಸರ್ಕ್ಯೂಟ್ ನಿಂದ ಅಕಸ್ಮಾತ್ ಬೆಂಕಿ ಅವಘಡವುಂಟಾಗಿ ಅಪಾರ ನಷ್ಟವುಂಟಾಗಿದೆ.
ಸಾಯಂಕಾಲ ವಾಲ್ಪಾಡಿ ಗ್ರಾಮ ಪಂಚಾಯಿತಿ ಕಚೇರಿ ಮುಚ್ಚಿದ ಬಳಿಕ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆಗ್ನಿಶಾಮಕದಳವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.
ಬೆಂಕಿ ಅನಾಹುತಕ್ಕೆ ಕಚೇರಿಯಲ್ಲಿದ್ದ 125 ಪ್ಲಾಸ್ಟಿಕ್ ಕುರ್ಚಿ ಹಾಗೂ ಕಟ್ಟಡದ ಪೀಠೋಪಕರಣ ಬೆಂಕಿಗಾಹುತಿಯಾಗಿದೆ. ದಾಖಲೆಗಳು ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ.