ETV Bharat / state

ವೋಟಿಗಾಗಿ ನೋಟು ಹಂಚಿದ ಆರೋಪ.. ಕಾಂಗ್ರೆಸ್ ಜೆಡಿಎಸ್ ನಡುವೆ ಹೊಯ್ ಕೈ - ಬಜಪೆ ಪೊಲೀಸ್ ಠಾಣಾ

ಮಂಗಳೂರು ನಗರ ಉತ್ತರ ಕ್ಷೇತ್ರದ ಕಾಂಗ್ರೆಸ್​ ಜೆಡಿಎಸ್​ ಕಾರ್ಯಕರ್ತರ ನಡುವೆ ಜಗಳ ನಡೆದಿದೆ.

ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ
ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ
author img

By

Published : May 10, 2023, 8:58 PM IST

Updated : May 10, 2023, 10:31 PM IST

ಕಾಂಗ್ರೆಸ್ ಜೆಡಿಎಸ್ ನಡುವೆ ಹೊಯ್ ಕೈ

ಮಂಗಳೂರು: ಮತದಾನ ಮಾಡಲು ಹಣ ಹಂಚಿದ ಆರೋಪದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ಹೊಯ್ ಕೈ ಆದ ಘಟನೆ ನಡೆದಿದೆ. ಈ ಬಗ್ಗೆ ಎರಡು ಪಕ್ಷಗಳಿಂದಲೂ ಆರೋಪ - ಪ್ರತ್ಯಾರೋಪಗಳು ಕೇಳಿ ಬಂದಿದೆ. ಮಂಗಳೂರು ನಗರದ ಕಾವೂರು ಠಾಣಾ ವ್ಯಾಪ್ತಿಯ‌ ಕುಂಜತ್ತಬೈಲ್ ಪರಿಸರದ ಮರಕಡ, ಕುಳ ಎಂಬಲ್ಲಿ ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್ ಮೂರು ವಾಹನಗಳಲ್ಲಿ ಹಣ ಹಂಚುತ್ತಿದ್ದಾರೆ ಎಂದು‌ ಆರೋಪಿಸಲಾಗಿದೆ.

ಇದರ ವಿಡಿಯೋವನ್ನು ಜೆಡಿಎಸ್ ಕಾರ್ಯಕರ್ತರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಈ ವೇಳೆ ಕವಿತಾ ಸನಿಲ್ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರಾದ ಅಶ್ರಫ್, ರಶೀದ್, ಇಬ್ರಾಹಿಂ, ಹನೀಫ್, ಮಮ್ಮಾಕ ಮೊದಲಾದವರು ಜೆಡಿಎಸ್ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊಯ್ದಿನ್ ಬಾವಾ ಸಹಿತ ಹಲವರಿಗೆ ಗಾಯ: ಅದೇ ರೀತಿ ಮಂಗಳೂರು‌ ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬದಲ್ಲಿ ಬುಧವಾರ ಮುಂಜಾನೆ ಒಂದೂವರೆ ಗಂಟೆಯ ಸುಮಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಸಹಿತ ಹಲವರು ಗಾಯಗೊಂಡಿದ್ದಾರೆ. ಬಾವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪರಸ್ಪರ ದೂರು ದಾಖಲಾಗಿದ್ದು ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.

ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ

ಹಣವು ಅವ್ಯಾಹತವಾಗಿ ಹರಿಯುತ್ತಿದೆ: ಈ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಅವರು ಪ್ರತಿಕ್ರಿಯಿಸಿದ್ದು, ಒಂದು ಕಡೆ ಬೆವರಿಳಿದು ಸೇವೆಯನ್ನು ಮಾಡುವಂತಹ ಕೆಲಸ ಒಂದೆಡೆಯಾದರೆ, ಇನ್ನೊಂದೆಡೆ ದುಡ್ಡಿನ ದರ್ಪದಿಂದ ನನ್ನ ಪಿಎಯನ್ನೇ ಖರೀದಿ ಮಾಡಿದ್ದಾರೆ. ನನ್ನ ಮೇಲೆ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ. ಅಲ್ಲದೇ ಕ್ಷೇತ್ರದ ಮೂಲೆ ಮೂಲೆಯಲ್ಲಿ ಹಣವನ್ನು ಹಂಚುವ ಕೆಲಸವನ್ನು ಮಾಡಿದ್ದಾರೆ. ಒಂದೊಂದು ಬೂತ್​ನಲ್ಲಿಯೂ 50 ಜನರಿಗೆ ಹಣ ಕೊಟ್ಟು ಮತವನ್ನು ಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಡಿಸಿಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ಹಣವು ಅವ್ಯಾಹತವಾಗಿ ಹರಿಯುತ್ತಿದೆ. ಈ ಬಗ್ಗೆ ಕ್ರಮವನ್ನು ಕೈಗೊಳ್ಳುವುಬೇಕಾಗಿ ವಿನಂತಿಯನ್ನು ಮಾಡಿಕೊಂಡಿದ್ದೇನೆ ಎಂದರು.

ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ: ಇನ್ನೊಂದೆಡೆ ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ. ಧಾರವಾಡ ಜಿಲ್ಲೆಯಲ್ಲಿ 34 ವಿವಿ ಪ್ಯಾಟ್ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಧಾರವಾಡ ವನಿತಾ ಶಾಲೆಯ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಕಡೆ ಬೆಳಿಗ್ಗೆ ಮಷಿನ್​ಗೆ ತೊಂದರೆ ಆಗಿದೆ. ಇನ್ನುಳಿದ ಕಡೆ ವಿವಿ ಪ್ಯಾಟ್​ ಕೈ ಕೊಟ್ಟಿದೆ. ಸ್ಥಳೀಯ ಪಕ್ಷದ ಏಜೆಂಟರ್​ ಸಮ್ಮುಖದಲ್ಲಿಯೇ ಬದಲಾವಣೆ ಮಾಡಲಾಗಿದೆ. ಎರಡು ಕಂಟ್ರೋಲ್ ಯುನಿಟ್‌ ಮೋಕ್​ಫೋಲ್ ಬದಲಾವಣೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಿಸಿಲಿನ ತಾಪಮಾನಕ್ಕೆ ಅಲ್ಲಲ್ಲಿ ವಿವಿಪ್ಯಾಟ್ ಕೈಕೊಟ್ಟಿವೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Last Updated : May 10, 2023, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.