ಮಂಗಳೂರು : ಸಹೋದರರಿಬ್ಬರ ಮೇಲೆ ಯುವಕರ ತಂಡವೊಂದು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೂರು ಠಾಣಾ ವ್ಯಾಪ್ತಿಯ ರಾಘವೇಂದ್ರ ಮಠದ ಹತ್ತಿರ ಬರುವಂತೆ ಆರೋಪಿ ಗೌತಮ್ ಎಂಬಾತ ಅಜೀಮ್ ಎಂಬುವರಿಗೆ ಕರೆ ಮಾಡಿ ಕರೆದಿದ್ದಾನೆ. ಈ ಹಿನ್ನೆಲೆ ಅಜೀಮ್ ತಮ್ಮ ಸಹೋದರ ಆಶಿಕ್ ಜತೆ ಹೋದಾಗ ಗೌತಮ್, ಸುಭಾಷ್, ಪದ್ಮನಾಭ, ಚಿರಾಗ್, ಶಶಾಂಕ್ ಮತ್ತಿರರು ಸೇರಿ ಸುಮಾರು 10 ರಿಂದ 15 ಮಂದಿಯ ತಂಡವು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಅಜೀಮ್ ಹಾಗೂ ಆಶಿಕ್ ಹಲ್ಲೆಗೊಳಗಾಗಿದ್ದಾರೆ. ಕಬ್ಬಿಣದ ರಾಡ್, ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದೆ. ಪರಿಣಾಮ ಅಜೀಮ್ ತಲೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಆಶಿಕ್ ಸಹ ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ. ಆಶಿಕ್ ಹಾಗೂ ಅಜೀಮ್ ಸಹೋದರರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮೂವರು ಮಕ್ಕಳಿದ್ರು ಹೈಸ್ಕೂಲ್ ಬಾಲೆ ಹಿಂದೆ ಬಿದ್ದ.. ಅತ್ಯಾಚಾರ ಕೇಸ್ನಡಿ ಆರೋಪಿ ಲಾಕ್