ETV Bharat / state

ಮನೆಯವರೇ ಹೆಣ ಮುಟ್ಟಲಿಲ್ಲ; 'ಆಪದ್ಬಾಂಧವ' ಆಸಿಫ್​ರಿಂದ ಅಂತ್ಯಸಂಸ್ಕಾರ - ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಕೊರೊನಾಕ್ಕೆ ಹೆದರಿ ಶವಸಂಸ್ಕಾರಕ್ಕೆ ಕುಟುಂಬಸ್ಥರು ನಿರಾಕರಿಸಿದಾಗ ಆಪದ್ಬಾಂಧವನಂತೆ ಬಂದು ಅಂತ್ಯಸಂಸ್ಕಾರ ನಡೆಸಲು ಸಹಕರಿಸಿದವರು ಮೊಹಮ್ಮದ್ ಆಸಿಫ್. ಇವರು ಕಳೆದ ಎಂಟು ವರ್ಷಗಳಿಂದ ಆಪದ್ಬಾಂಧವ ಹೆಸರಿನ ಆ್ಯಂಬುಲೆನ್ಸ್ ಇಟ್ಟುಕೊಂಡಿದ್ದಾರೆ. ಈ ಮೂಲಕ ಸುಮಾರು 150 ರಷ್ಟು ಅನಾಥ ಮೃತದೇಹಗಳನ್ನು ಸಾಗಿಸಿ ಅಂತ್ಯಸಂಸ್ಕಾರ ನಡೆಸಲು ನೆರವಾಗಿದ್ದಾರೆ.

Mulki
ಅಂತ್ಯಸಂಸ್ಕಾರ
author img

By

Published : Jul 8, 2020, 1:51 PM IST

ಮಂಗಳೂರು: ವೃದ್ಧಾಪ್ಯದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಕೋವಿಡ್ ಸೋಂಕಿನ ಭಯದಿಂದ ಶವಸಂಸ್ಕಾರ ನಡೆಸಲು ಯಾರೂ ಮುಂದೆ ಬಂದಿಲ್ಲ. ಮೃತಪಟ್ಟು ನಾಲ್ಕು ದಿನಗಳಾದರೂ ಮೃತದೇಹ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿಯೇ ಇತ್ತು. ನಿನ್ನೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಮುಂದೆ ಬಂದು ಅಂತ್ಯಸಂಸ್ಕಾರ ನಡೆಸಲು ಹೆಗಲು ಕೊಟ್ಟ ಬಳಿಕ ಸುಸೂತ್ರವಾಗಿ ಅಂತ್ಯಸಂಸ್ಕಾರ ನಡೆದಿದೆ.

ಆಪದ್ಬಾಂಧವ' ಆಸಿಫ್​ರಿಂದ ಅಂತ್ಯಸಂಸ್ಕಾರ

ಆಪದ್ಬಾಂಧವನಂತೆ ಬಂದು ಅಂತ್ಯಸಂಸ್ಕಾರ ನಡೆಸಲು ಸಹಕರಿಸಿದವರು ಮೊಹಮ್ಮದ್ ಆಸಿಫ್. ಇವರು ಕಳೆದ ಎಂಟು ವರ್ಷಗಳಿಂದ ಆಪದ್ಬಾಂಧವ ಹೆಸರಿನ ಆ್ಯಂಬುಲೆನ್ಸ್ ಇಟ್ಟುಕೊಂಡಿದ್ದಾರೆ. ಈ ಮೂಲಕ ಸುಮಾರು 150ರಷ್ಟು ಅನಾಥ ಮೃತದೇಹಗಳನ್ನು ಸಾಗಿಸಿ ಅಂತ್ಯಸಂಸ್ಕಾರ ನಡೆಸಲು ನೆರವಾಗಿದ್ದಾರೆ. ಈ ಘಟನೆಯಲ್ಲೂ ಚಂದ್ರಹಾಸ ಕುಲಾಲ್ ಎಂಬವರು ಕಳೆದ 15 ವರ್ಷಗಳಿಂದ ಮನೆಯವರಿಂದ ದೂರವಾಗಿದ್ದರು. ಬೀದಿ ಬದಿ, ಬಸ್ ಸ್ಟ್ಯಾಂಡ್ ನಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು.

Apadbandhava Asif
ಆಪದ್ಬಾಂಧವ ಆಸಿಫ್

ಇತ್ತೀಚೆಗೆ ವಯೋಸಹಜ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದ ಅವರು ಮೃತಪಟ್ಟಿದ್ದಾರೆ. ಆದರೆ, ಅವರ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಅಂತ್ಯಸಂಸ್ಕಾರ ನಡೆಸಲು ಕೋವಿಡ್ ಸೋಂಕಿನ ಭಯದಿಂದ ಯಾರೂ ಮುಂದೆ ಬಂದಿರಲಿಲ್ಲ. ಕೊನೆಗೊಬ್ಬ ಅವರ ಸಹೋದರ ಮುಂದೆ ಬಂದರೂ ಅವರಿಗೆ ಅಂತ್ಯಸಂಸ್ಕಾರ ನಡೆಸಲು ನೆರವಾಗುವವರು ಯಾರೂ ಇರಲಿಲ್ಲ. ಈ ಸಂದರ್ಭ ಆಪದ್ಬಾಂಧವನಂತೆ ನೆರವಾದವರೇ 'ಆಪದ್ಬಾಂಧವ' ಮೊಹಮ್ಮದ್ ಆಸಿಫ್. ಇವರು ತಮ್ಮ ಮೈಮುನಾ ಫೌಂಡೇಷನ್ ಆಶ್ರಮದ ಕಾರ್ನಾಡ್ ವಿಶ್ವನಾಥ ಪೂಜಾರಿ, ಅಭಯ ಹಾಗೂ ದಿನೇಶ್​ರೊಂದಿಗೆ ಸೇರಿ ಮುಲ್ಕಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದಾರೆ.

ಈ ಸಂದರ್ಭ ಮುಲ್ಕಿ ಪುರಸಭೆಯ ನೀರು ಪೂರೈಕೆದಾರ ಕಿಶೋರ್ ಶೆಟ್ಟಿ, ಆಪದ್ಬಾಂಧವ ಸಂಸ್ಥೆಯ ಸಂಶೀರ್ ದಾಮಸ್ ಕಟ್ಟೆ ಹಾಗೂ ಪುತ್ತುಬಾವಾ ಇವರುಗಳ ಸಹಕಾರದಿಂದ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.