ETV Bharat / state

ಸುಳ್ಯ ಶಾಲೆಯ ಹಳೇ ಅಕ್ಕಿ ಪಡಿತರ ಅಂಗಡಿಯಲ್ಲಿ ಬದಲಾವಣೆ ಆರೋಪ - school rice

ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೂಟದ ಹಳೇ ಅಕ್ಕಿಯನ್ನು ಸ್ಥಳೀಯ ಅಡ್ಕಾರ್​ನಲ್ಲಿನ ಪಡಿತರ ಅಂಗಡಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.

exchange of school's old rice and ration shop rice
ಸುಳ್ಯ ಶಾಲೆಯ ಹಳೇ ಅಕ್ಕಿಯನ್ನು ಪಡಿತರ ಅಂಗಡಿಯಲ್ಲಿ ಬದಲಾವಣೆ ಆರೋಪ
author img

By

Published : Jun 8, 2022, 1:15 PM IST

ಸುಳ್ಯ (ದಕ್ಷಿಣ ಕನ್ನಡ): ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೂಟದ ಹಳೆಯ ಅಕ್ಕಿಯನ್ನು ಸ್ಥಳೀಯ ಅಡ್ಕಾರ್​ನಲ್ಲಿನ ಪಡಿತರ ಅಂಗಡಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಲೆಯಲ್ಲಿ ಹಳೆಯ ಅಕ್ಕಿ ಇದ್ದು ಇಲ್ಲಿನ ಸಿಬ್ಬಂದಿ ಅಕ್ಕಿ ವಾಸನೆ ಬರುವ ಬಗ್ಗೆ ದೂರಿತ್ತ ಹಿನ್ನೆಲೆ, ಬೇರೊಂದು ಅಕ್ಕಿಯೊಂದಿಗೆ ಬದಲಾವಣೆ ಮಾಡಲು ಶಾಲಾ ಮುಖ್ಯ ಶಿಕ್ಷಕರನ್ನೇ ಮುಂದೆ ನಿಲ್ಲಿಸಿ ಶಾಲಾ ಆಡಳಿತ ವ್ಯವಸ್ಥೆ ಈ ಕೆಲಸ ಮಾಡಿದೆ ಎನ್ನಲಾಗಿದೆ. ಮಾತ್ರವಲ್ಲದೇ 50 ಕೆ.ಜಿ ಬರುವ ಈ ಗೋಣಿ ಚೀಲ ಹೊರಲು ಸ್ವತಃ ಶಾಲಾ ಮಕ್ಕಳನ್ನೇ ಪಾಠದ ಸಮಯದಲ್ಲಿ ಬಾಲ ಕಾರ್ಮಿಕರ ರೀತಿ ದುಡಿಸಿದ ಆರೋಪವೂ ಕೇಳಿಬಂದಿದೆ.

ಅಕ್ಕಿ ಮೂಟೆ ಹೊರುತ್ತಿರುವ ಮಕ್ಕಳು

ಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ ಕಾರಿಂಜರು ಮಕ್ಕಳ ಬಿಸಿಯೂಟದ ಅಕ್ಕಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ, ಸರ್ಕಾರದ ಪಡಿತರ ವ್ಯವಸ್ಥೆಯಲ್ಲಿ ವಿತರಿಸಬೇಕಿದ್ದ ಅಕ್ಕಿಯೊಂದಿಗೆ ಸ್ಥಳೀಯ ಅಡ್ಕಾರ್ ಪಡಿತರ ಅಂಗಡಿಯಲ್ಲಿ ಬದಲಾವಣೆ ಮಾಡಲು ಮುತುವರ್ಜಿ ವಹಿಸಿದ್ದು, ಈ ಕೆಲಸಕ್ಕೆ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಂಘ ಇದರ ಅಡ್ಕಾರ್ ಶಾಖಾ ಮ್ಯಾನೇಜರ್ ಗಂಗಾಧರ್ ಅಡ್ಕರ್ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕಲುಷಿತ ನೀರು ಕುಡಿದು ಮತ್ತೊಬ್ಬ ವ್ಯಕ್ತಿ ಸಾವು? ರಾಯಚೂರಿನಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ!

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದ್ದು, ನಾನು ಈಗಾಗಲೇ ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ತಪ್ಪು ನಡೆದಿರುವುದು ತಿಳಿದು ಬಂದಿದೆ. ಇಲ್ಲಿನ ಮುಖ್ಯ ಶಿಕ್ಷಕರು ಹೇಳುವ ಪ್ರಕಾರ ಶಾಲೆಯಲ್ಲಿನ ಬಿಳಿ ಅಕ್ಕಿಯನ್ನು ಪಡಿತರ ಅಂಗಡಿಯಲ್ಲಿನ ಕುಚಲಕ್ಕಿಯೊಂದಿಗೆ ಬದಲಾವಣೆ ಮಾಡಲಾಗಿದೆಯಂತೆ.

ಆದರೆ, ಇಲಾಖೆಯ ನಿಯಮಗಳ ಪ್ರಕಾರ ಅದಕ್ಕೆ ಅವಕಾಶ ಇಲ್ಲ. ಮಾತ್ರವಲ್ಲದೇ ಈ ಕಾರ್ಯವನ್ನು ಮೇಲಧಿಕಾರಿಗಳ ಗಮನಕ್ಕೆ ತಾರದೇ ಸ್ವ ಇಚ್ಛೆಯಿಂದ ಮಾಡಿರೋದು ಸರಿಯಲ್ಲ. ಪಡಿತರ ಅಂಗಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.