ETV Bharat / state

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಅಕ್ರಮ: ವಸಂತ ಬಂಗೇರ ಆರೋಪ - ಬೆಳ್ತಂಗಡಿ ಸುದ್ದಿ

ಬಳೆಂಜ ಗ್ರಾಪಂ ಮತಪೆಟ್ಟಿಗೆಯಲ್ಲಿ ಬೇರೆ ಪಂಚಾಯತ್​ಗೆ ಸಂಬಂಧಪಟ್ಟ ಮತಪತ್ರ ಪತ್ತೆಯಾಗಿದೆ. ಕೆಲವು ಭಾಗದ ಮತ ಪೆಟ್ಟಿಗೆಯಲ್ಲಿ ಐದಾರು ಮತ ಪತ್ರಗಳನ್ನು ಒಟ್ಟಿಗೆ ಮಡಚಿ ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಅದೂ ಕೂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ ಮತ ಪತ್ರಗಳು ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ.

ex mla Vasantha Bangera
ವಸಂತ ಬಂಗೇರ
author img

By

Published : Jan 20, 2021, 7:29 PM IST

ಬೆಳ್ತಂಗಡಿ(ದ.ಕ): ತಾಲೂಕಿನಲ್ಲಿ ಶಾಸಕರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದು ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ತಾಲೂಕಿಗೆ ತಾವೇ ಹೈಕಮಾಂಡ್ ಎಂಬಂತೆ ಶಾಸಕರು ವರ್ತಿಸುತ್ತಿದ್ದು, ಅಧಿಕಾರಿಗಳ ಮೂಲಕ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮಾಜಿ‌ ಶಾಸಕ ಕೆ.ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ವಠಾರದಲ್ಲಿ ನಡೆದ ಪ್ರತಿಭಟನಾ ಸಭೆ

ಕಾಂಗ್ರೆಸ್ ಹಾಗೂ ತಾಲೂಕಿನ ವಿವಿಧ ಸಂಘಟನೆಗಳಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ವಠಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು,‌ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾಲೂಕಿನಲ್ಲಿ ‌ಅಕ್ರಮಗಳು ನಡೆದಿದೆ. ಮತ ಪೆಟ್ಟಿಗೆಗಳನ್ನು ಇಡುವ ಕೋಣೆಗಳಿಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಆದರೂ ಕೆಲವರು ಬಿಜೆಪಿಗರು ಆ ಕೋಣೆಯೊಳಗೆ ಹೋಗಿದ್ದಾರೆ. ಮತ ಎಣಿಕೆ ಸಂದರ್ಭ ಗೊಂದಲದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ಅವರು ಸರಿಯಾದ ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ ಎಂದರು.

ಬೆಳ್ತಂಗಡಿ ಸರ್ಕಲ್ ಇನ್ಸ್​ಪೆಕ್ಟರ್ ಹಾಗೂ ತಹಶೀಲ್ದಾರ್ ಮೊದಲಾದವರು ಶಾಸಕರ ಬಂಟರಂತೆ ವರ್ತಿಸುತಿದ್ದಾರೆ. ಇವರೇ ಈ ಅಕ್ರಮಕ್ಕೆ ಕಾರಣ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ, ಸತ್ಯ ಪ್ರಮಾಣಕ್ಕೆ ಹೆಸರುವಾಸಿಯಾದ ಕೇರಳದ ಕಾನತ್ತೂರಿಗೆ ಹೋಗಿ ಪ್ರಾರ್ಥಿಸುತ್ತೇವೆ. ಅಕ್ರಮ ಎಸಗಿದವರ ವಿರುದ್ಧ ದೈವದ ಮೊರೆ ಹೋಗಲಾಗುವುದು ಎಂದರು.

ಇದನ್ನೂ ಓದಿ: ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಪ್ರಕರಣ.. ಸ್ಥಳಕ್ಕೆ ಕಮಿಷನರ್​ ಭೇಟಿ, ಪರಿಶೀಲನೆ..

ಬಳೆಂಜ ಗ್ರಾಪಂ ಮತಪೆಟ್ಟಿಗೆಯಲ್ಲಿ ಬೇರೆ ಪಂಚಾಯತ್​ಗೆ ಸಂಬಂಧಪಟ್ಟ ಮತಪತ್ರ ಪತ್ತೆಯಾಗಿದೆ. ಕೆಲವು ಭಾಗದ ಮತ ಪೆಟ್ಟಿಗೆಯಲ್ಲಿ ಐದಾರು ಮತ ಪತ್ರಗಳನ್ನು ಒಟ್ಟಿಗೆ ಮಡಚಿ ಹಾಕಿದ ರೀತಿಯಲ್ಲಿ ಪತ್ತೆಯಾಗಿದೆ. ಅದೂ ಕೂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ ಮತ ಪತ್ರಗಳು. ಮತಪೆಟ್ಟಿಗೆಯನ್ನು ಕಟ್ಟಿದ ಹಗ್ಗವನ್ನೂ ಬದಲಾಯಿಸಲಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದು, ಶ್ರೀ ರಾಮನನ್ನು ಬೀದಿಗೆ ತಂದಿದೆ. ಈ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ‌. ಜನತೆ ಈ ಬಗ್ಗೆ ಯೋಚಿಸಬೇಕು ಎಂದರು.

ಪ್ರತಿಭಟನೆ ಬಳಿಕ ಮತಪತ್ರ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಗಂಗಾಧರ ಗೌಡ, ಮುಖಂಡರಾದ ಬಿ.ಎಂ.ಭಟ್, ರಂಜನ್ ಜಿ. ಗೌಡ, ಶೈಲೇಶ್ ಕುಮಾರ್ ಕುರ್ತೋಡಿ ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.