ETV Bharat / state

ಸುರತ್ಕಲ್: ದೇಶದಲ್ಲೇ ಮೊದಲ ಏಥರ್ ಕಂಪನಿಯ ಇವಿ ಚಾರ್ಜಿಂಗ್ ವ್ಯವಸ್ಥೆ ಆರಂಭ.. - Etv Bharat Kannada

ಸುರತ್ಕಲ್​ನ ವಿಜಯ ಫ್ಯೂಲ್ ಪಾರ್ಕ್​ನಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ.

Kn_Mng_
ಸುರತ್ಕಲ್​ನಲ್ಲಿ ಇವಿ ಚಾರ್ಜಿಂಗ್​ ಆರಂಭ
author img

By

Published : Nov 5, 2022, 7:38 PM IST

ಸುರತ್ಕಲ್: ರಾಷ್ಟ್ರದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್​ಪಿಸಿಎಲ್) ಏಥರ್ ಕಂಪನಿಯ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಸೂರತ್ಕಲ್​ನಲ್ಲಿ ಇಂದು ಪ್ರಾರಂಭಿಸಲಾಗಿದೆ.

ಏಥರ್ ಕಂಪನಿಯ ಪೆಟ್ರೋಲ್ ಪಂಪ್ ಆಗಿರುವ ಸುರತ್ಕಲ್​ನ ವಿಜಯ ಫ್ಯೂಲ್ ಪಾರ್ಕ್​ನಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಕನಸಿನಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ರಾಷ್ಟ್ರದಲ್ಲೇ ಮೊದಲ ಬಾರಿಗೆ ಏಥರ್ ಕಂಪನಿಯ ಸಹಭಾಗಿತ್ವದಲ್ಲಿ ದ್ವಿಚಕ್ರ ಚಾರ್ಜಿಂಗ್ ಸ್ಟೇಷನ್ ಅನ್ನು ಹೆಚ್​ಪಿಸಿಎಲ್ ಸುರತ್ಕಲ್​ನಲ್ಲಿ ಪ್ರಾರಂಭಿಸಿದ್ದು ಇದರಿಂದಾಗಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ಡಿಸೆಂಬರ್ ಅಂತ್ಯದವರೆಗೆ ಸಂಸ್ಥೆ ಫ್ರೀ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದರು. ಹೆಚ್​ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲೇ ಮೊದಲ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್​ನ ಆಯ್ದ ಪೆಟ್ರೋಲ್ ಪಂಪ್​ಗಳಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಒಂದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು ಉಳಿದಂತೆ ನಾರ್ಮಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್​ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಮಂಗಳೂರು ಟರ್ಮಿನಲ್ ಇನ್ಸ್ಟಾ ಲೇಷನ್ ವಿಭಾಗದ ಡಿಜಿಎಂ ಬೊಪ್ಪೆ ಸೂರ್ಯಲಿಂಗಂ, ಏರಿಯಾ ಸೇಲ್ಸ್ ಮೆನೇಜರ್ ಕೆ.ಉದಯ್ ಶಂಕರ್ ಶೆಟ್ಟಿ, ರಿಟೇಲ್ ವಿಭಾಗದ ಸೀನಿಯರ್ ಮೆನೇಜರ್ ಪ್ರದೀಪ್ ಕುಮಾರ್, ಮೆನೇಜರ್ ವಸಂತ ಬಿ.ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.