ETV Bharat / state

ಕಾಯಿಲೆಗಳ ಕಾರಣ ತಿಳಿದರೆ ಹತೋಟಿ ಸುಲಭ: ಸಸಿಕಾಂತ್ ಸೆಂಥಿಲ್ - Sasikanth Senthil

ಕಾಯಿಲೆಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕಾಯಿಲೆಗಳು ಹರಡುವ ಕಾರಣ ತಿಳಿದರೆ ಅದನ್ನು ಸಂಪೂರ್ಣ ಹತೋಟಿಗೆ ತರುವುದು ಸುಲಭ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಕಾಯಿಲೆಗಳ ಕಾರಣ ತಿಳಿದರೆ ಹತೋಟಿ ಸುಲಭ: ಸಸಿಕಾಂತ್ ಸೆಂಥಿಲ್
author img

By

Published : Aug 19, 2019, 2:54 AM IST

ಮಂಗಳೂರು: ಕಾಯಿಲೆಗಳ ಬಗ್ಗೆ ತಿಳುವಳಿಕೆಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕಾಯಿಲೆಗಳು ಹರಡುವ ಕಾರಣಗಳು ತಿಳಿದರೆ ಅದನ್ನು ಸಂಪೂರ್ಣ ಹತೋಟಿಗೆ ತರುವುದು ಸುಲಭ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಕಾಯಿಲೆಗಳ ಕಾರಣ ತಿಳಿದರೆ ಹತೋಟಿ ಸುಲಭ: ಸಸಿಕಾಂತ್ ಸೆಂಥಿಲ್

ನಗರದ ಕದ್ರಿ ದೇವಸ್ಥಾನದ ಅಭಿಷೇಕ್‍ ಹಾಲ್‍ನಲ್ಲಿ ನಡೆದ “ಅಂತರ್ ಕಾಲೇಜು ಲಾರ್ವ ಹಂಟ್ ಸ್ಪರ್ಧೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು, ಎಲ್ಲರಿಗೂ ಮಲೇರಿಯಾ, ಡೆಂಗ್ಯೂ ಮುಂತಾದ ಕಾಯಿಲೆಗಳು ಸೊಳ್ಳೆಗಳಿಂದ ಹರಡುವುದು ಎಂಬುದು ತಿಳಿದಿದೆ. ಆದರೆ ಅದು ಹರಡುವುದು ಹೇಗೆ ಎಂಬ ಮಾಹಿತಿಯ ಕೊರತೆ ಎಲ್ಲಾ ನಾಗರಿಕರಲ್ಲಿದೆ. ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವುದು ನೀರಿನಲ್ಲಿ ಮಾತ್ರ. ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ. ಮೊದಲು ಸೊಳ್ಳೆಗಳು ಉತ್ಪತ್ತಿಯಾಗುವುದನ್ನ ತಡೆದರೆ ರೋಗವು ತನ್ನಿಂದ ತಾನಾಗಿಯೇ ನಾಶವಾಗುತ್ತದೆ ಎಂದರು.

ಅಂತರ್ ಕಾಲೇಜು ಲಾರ್ವ ಹಂಟ್ ಸ್ಪರ್ಧೆಯಲ್ಲಿ ನಗರದ ಕಾಲೇಜು ವಿದ್ಯಾರ್ಥಿಗಳ 16 ಕ್ಕೂ ಅಧಿಕ ತಂಡವು ಭಾಗವಹಿಸಿತ್ತು. ಒಂದೊಂದು ತಂಡಗಳಲ್ಲಿ 5 ಸದಸ್ಯರು ಇರಲಿದ್ದು, ಸ್ಪರ್ಧೆಯ ನಿಯಮದ ಪ್ರಕಾರ ಈ ತಂಡವು ಬೇರೆ ಬೇರೆ ಜನ ವಸತಿ ಪ್ರದೇಶಗಳಿಗೆ ತೆರಳಿ ಅಲ್ಲಿರುವ ಸೊಳ್ಳೆಯ ಸಂತಾನಭಿವೃದ್ಧಿಯಾಗುವ ಲಾರ್ವಾ ಹುಡುಕಿ ತರಬೇಕು. ಅತೀ ಹೆಚ್ಚು ಲಾರ್ವ ಹುಡುಕಿ ತಂದ ತಂಡ ಸ್ಪರ್ಧೆಯಲ್ಲಿ ಜಯಗಳಿಸುತ್ತದೆ. ವಿಜೇತ ತಂಡಗಳಿಗೆ ಬಹುಮಾನವೂ ಇರಲಿದ್ದು, ಜಿಲ್ಲಾಡಳಿತ ಈ ಮೂಲಕ ಮಕ್ಕಳಲ್ಲಿಯೂ ಜಾಗೃತಿ ಮೂಡಿಸಲು ಲಾರ್ವಾ ಹಂಟ್ ಕಾರ್ಯಕ್ರಮ ಆಯೋಜಿಸಿದೆ.

Intro:ಮಂಗಳೂರು: ಕಾಯಿಲೆಗಳ ಬಗ್ಗೆ ತಿಳುವಳಿಕೆಗಳ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕಾಯಿಲೆಗಳು ಹರಡುವ ಕಾರಣಗಳು ತಿಳಿದರೆ ಅದನ್ನು ಸಂಪೂರ್ಣ ಹತೋಟಿಗೆ ತರುವುದು ಸುಲಭ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ನಗರದ ಕದ್ರಿ ದೇವಸ್ಥಾನದ ಅಭಿಷೇಕ್‍ ಹಾಲ್‍ನಲ್ಲಿ ಇಂದು ಬೆಳಗ್ಗೆ ನಡೆದ ‘ಡ್ರೈವ್ ಲಾರ್ವ ಡೇ-2019’ ಅಂಗವಾಗಿ “ಅಂತರ್ ಕಾಲೇಜು ಲಾರ್ವ ಹಂಟ್ ಸ್ಪರ್ಧೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಮಲೇರಿಯಾ, ಡೆಂಗ್ಯು ಮುಂತಾದ ಕಾಯಿಲೆಗಳು ಸೊಳ್ಳೆಗಳಿಂದ ಹರಡುವುದು ಎಂಬುದು ತಿಳಿದಿದೆ. ಆದರೆ ಅದು ಹರಡುವುದು ಹೇಗೆ ಎಂಬ ಮಾಹಿತಿಯ ಕೊರತೆ ಎಲ್ಲಾ ನಾಗರಿಕರಲ್ಲಿದೆ. ಡೆಂಗ್ಯು ಸೊಳ್ಳೆಗಳು ಉತ್ಪತ್ತಿಯಾಗುವುದು ಸ್ವಚ್ಛ ನೀರಿನಲ್ಲಿ ಮಾತ್ರ. ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿಲ್ಲ. ಮೊದಲಾಗಿ ಸೊಳ್ಳೆಗಳು ಉತ್ಪತ್ತಿಯಾಗುದನ್ನೇ ಸಮೂಲವಾಗಿ ನಾಶ ಮಾಡಿದರೆ ರೋಗವು ತನ್ನಿಂದ ತಾನಾಗಿಯೇ ನಾಶವಾಗುತ್ತದೆ ಎಂದು ಹೇಳಿದರು.

Body:ಈ ಅಂತರ್ ಕಾಲೇಜು ಲಾರ್ವ ಹಂಟ್ ಸ್ಪರ್ಧೆಯಲ್ಲಿ ನಗರದ ಕಾಲೇಜು ವಿದ್ಯಾರ್ಥಿಗಳ 16 ಕ್ಕೂ ಅಧಿಕ ತಂಡವು ಭಾಗವಹಿಸಿತ್ತು. ಒಂದೊಂದು ತಂಡಗಳಲ್ಲಿ 5 ಸದಸ್ಯರು ಇರಲಿದ್ದು, ಸ್ಪರ್ಧೆಯ ನಿಯಮದ ಪ್ರಕಾರ ಈ ತಂಡವು ಬೇರೆ ಬೇರೆ ಜನವಸತಿ ಪ್ರದೇಶಗಳಿಗೆ ತೆರಳಿ ಅಲ್ಲಿರುವ ಸೊಳ್ಳೆಯ ಸಂತಾನಭಿವೃದ್ಧಿಯಾಗುವ ಲಾರ್ವಾ ಹುಡುಕಿ ತರಬೇಕು. ಅತೀ ಹೆಚ್ಚು ಲಾರ್ವಾ ಹುಡುಕಿ ತಂದ ತಂಡ ಸ್ಪರ್ಧೆಯಲ್ಲಿ ಜಯಗಳಿಸುತ್ತದೆ. ವಿಜೇತ ತಂಡಗಳಿಗೆ ಬಹುಮಾನವೂ ಇರುತ್ತದೆ.

ಜಿಲ್ಲಾಡಳಿತ ಈ ಮೂಲಕ ಮಕ್ಕಳಲ್ಲಿಯೂ ಜಾಗೃತಿ ಮೂಡಿಸಲು ಲಾರ್ವಾ ಹಂಟ್ ಕಾರ್ಯಕ್ರಮ ಆಯೋಜಿಸಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.