ETV Bharat / state

ಉಪ್ಪಿನಂಗಡಿ: ಮೊಬೈಲ್‌ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ; ಓರ್ವ ಸೆರೆ - ನರಿಮೊಗರು ಮುಕ್ವೇ ನಿವಾಸಿ ಶೇಖ್ ಶಾಹಿದ್

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಅಂಗಡಿಯೊಂದರಲ್ಲಿ ಇ-ಸಿಗರೇಟ್​ ಪತ್ತೆಯಾಗಿತ್ತು.

e-cigarettes
ಇ-ಸಿಗರೇಟ್
author img

By

Published : Feb 26, 2023, 10:30 AM IST

Updated : Feb 26, 2023, 11:09 AM IST

ಉಪ್ಪಿನಂಗಡಿ: ಮೊಬೈಲ್ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಿ ನಿಷೇಧಿತ ಒಟ್ಟು 52 ಇ-ಸಿಗರೇಟ್‌ಗಳು ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕಸಬ ಗ್ರಾಮದ ಪೃಥ್ವಿ ಕಾಂಪ್ಲೆಕ್ಸ್‌ನಲ್ಲಿರುವ 4U BEST SERVICE ಎಂಬ ಅಂಗಡಿಯಲ್ಲಿ ಇ-ಸಿಗರೇಟ್ ಮಾರಾಟ ಮಾಡಲಾಗುತ್ತಿತ್ತು.

ನರಿಮೊಗರು ಮುಕ್ವೇ ನಿವಾಸಿ ಶೇಖ್ ಶಾಹಿದ್ (27) ಬಂಧಿತ. ಈತನಿಂದ ಅಂಗಡಿಯ ಡ್ರವರ್‌ನಲ್ಲಿದ್ದ DYBVAPOUR 350 PUFFS 5% CUCUMBER ICE ಎಂದು ಬರೆದ ಬಾಕ್ಸ್‌-1 ಇದರಲ್ಲಿ CUCUMBER ICE ಎಂದು ಬರೆದಿರುವ ಒಟ್ಟು 10 ಇ-ಸಿಗರೇಟ್‌ ಪೀಸ್‌ಗಳು, DYBVAPOUR 350 PUFFS 5% LYCHEE ICE ಎಂದು ಬರೆದ ಬಾಕ್ಸ್‌-2 ಇದರಲ್ಲಿ LYCHEE ICE ಎಂದು ಬರೆದಿರುವ ತಲಾ 10 ರಂತೆ ಒಟ್ಟು 20 ಇ-ಸಿಗರೇಟ್‌ ಪೀಸ್‌ಗಳು, DYBVAPOUR 350 PUFFS 5% BLUE MINT ಎಂದು ಬರೆದ ಬಾಕ್ಸ್‌-1 ಇದರಲ್ಲಿ BLUE MINT ಎಂದು ಬರೆದಿರುವ ಒಟ್ಟು 8 ಇ-ಸಿಗರೇಟ್‌ ಪೀಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಜೊತೆಗೆ, DYBVAPOUR 350 PUFFS 5% BLUE RAZZ ಎಂದು ಬರೆದ ಅರ್ಧ ತೆರೆದ ಬಾಕ್ಸ್‌-1 ಇದರಲ್ಲಿ BLUE RAZZ ಎಂದು ಬರೆದಿರುವ ಒಟ್ಟು 5 ,ಇ-ಸಿಗರೇಟ್‌ ಪೀಸ್ ಗಳು, ICED STRAWBERRY ಎಂದು ಬರೆದಿರುವ ಒಟ್ಟು 3 ಇ-ಸಿಗರೇಟ್‌ ಪೀಸ್ ಗಳು, LUSH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, PEACH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ , LYCHEE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ ಗಳು, TANGERINE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, CUCUMBER ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, SOUR APPLE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್‌ಗಳು ದೊರೆತಿವೆ.

ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ವಶಪಡಿಸಿಕೊಂಡ ಪೈಕಿ ವಿವಿಧ ಫ್ಲೇವರ್‌‌ನ ಒಟ್ಟು 52 ನಿಷೇಧಿತ ಇ-ಸಿಗರೇಟ್‌ಗಳಿದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು 26,000/ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ ಸಿಗರೇಟ್ ಸೇದುತ್ತಾ ಹೋಗುತ್ತಿದ್ದವನನ್ನು ಬೆದರಿಸಿ ಸುಲಿಗೆ..

Last Updated : Feb 26, 2023, 11:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.