ಸುಳ್ಯ: ಪ್ರತಿ ವರ್ಷವೂ 9 ದಿನ ನಡೆಯುತ್ತಿದ್ದ ಸುಳ್ಯ ದಸರಾ ಉತ್ಸವ ಈ ಬಾರಿ ಕೊರೊನಾ ಹಿನ್ನೆಲೆ ಒಂದು ದಿನಕ್ಕೆ ಸೀಮಿತಗೊಂಡಿದೆ.
ಶ್ರೀ ಶಾರದಾ ದೇವಿಯ ಮೂರ್ತಿಯನ್ನು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆಯ ಮೂಲಕ ತಂದು ಚೆನ್ನಕೇಶವ ದೇವಾಲಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಪುರೋಹಿತ ನಾಗರಾಜ್ ಭಟ್ ಪೌರೋಹಿತ್ಯದಲ್ಲಿ ಬೆಳಗ್ಗೆ ಮೆರವಣಿಗೆ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಂಜೆ ಶ್ರೀ ದೇವಿಯ ಶೋಭಾಯಾತ್ರೆ ನಡೆದು ಜಲಸ್ತಂಭನ ಕಾರ್ಯವು ಸುಳ್ಯದ ಪಯಸ್ವಿನಿ ನದಿಯಲ್ಲಿ ನಡೆಯಲಿದೆ.