ETV Bharat / state

ಡಂಪಿಂಗ್ ಯಾರ್ಡ್ ಸ್ವಚ್ಛತೆ ಉತ್ತಮ ನಿರ್ಧಾರ: ಶಾಸಕ ಸಂಜೀವ ಮಠಂದೂರು

ಆರೋಗ್ಯವಂತ ಭಾರತ ನಿರ್ಮಾಣ ಪ್ರಧಾನಿ ಕನಸಾಗಿದೆ. ಅವರ ಕನಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

MLA Sanjeeva Matandoor
ಸಲಕರಣೆ ಸುಧಾರಣಾ ಸೌಲಭ್ಯ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ
author img

By

Published : Feb 8, 2022, 9:17 AM IST

ಪುತ್ತೂರು: ನಗರ ಸಭೆಯಿಂದ ಘನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕಸ ವಿಂಗಡಣೆ ಹಾಗೂ ವಿಲೇವಾರಿ ಮೂಲಕ ಪುತ್ತೂರಿನ ಕಸಕ್ಕೆ ಮುಕ್ತಿ ನೀಡುವ ಕೆಲಸ ಹಾಗೂ ಡಂಪಿಂಗ್ ಯಾರ್ಡ್​ನ್ನು ಸುವಾಸನೆಗೊಳಿಸುವ ಕೆಲಸ ನಡೆಯುತ್ತಿರುವುದು ಉತ್ತಮ ವಿಚಾರ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸೋಮವಾರ ಪುತ್ತೂರು ನಗರಸಭೆ ಹಾಗೂ ರೋಟರಿ ಈಸ್ಟ್ ಸಂಸ್ಥೆಯ ಸಹಯೋಗದಲ್ಲಿ ನಗರಸಭಾ ವ್ಯಾಪ್ತಿಯ ಬನ್ನೂರು ಘನ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕದಲ್ಲಿ ನಡೆದ ಸಲಕರಣೆ ಸುಧಾರಣಾ ಸೌಲಭ್ಯ (ಮೆಟಿರಿಯಲ್ ರಿಕವರಿ ಫೆಸಿಲಿಟಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಂಪಿಂಗ್ ಯಾರ್ಡ್ ಸ್ವಚ್ಛತೆ: ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯೆ

ಕಸ ಹಾಕುವ ಸ್ಥಳ ಸುವಾಸನೆಯುಕ್ತ ಪ್ರದೇಶವಾಗಬೇಕು ಎಂಬ ನಿಟ್ಟಿನಲ್ಲಿ ನಗರ ಸಭೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛಮೇವ ಜಯತೇ ಎಂದು ಹೇಳಿದ್ದಾರೆ. ಆರೋಗ್ಯವಂತ ಭಾರತ ನಿರ್ಮಾಣ ಪ್ರಧಾನಿ ಕನಸಾಗಿದೆ. ಅವರ ಕನಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ಹೆಚ್ಚಳ: ಯುಎನ್​ ವರದಿ

ನಗರ ಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಸ್ವಚ್ಛ, ಸುಂದರ ಪುತ್ತೂರು ನಿರ್ಮಾಣಕ್ಕಾಗಿ ನಗರ ಸಭೆ ರೋಟರಿ ಈಸ್ಟ್ ಸಂಸ್ಥೆಯ ಸಹಯೋಗದಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಯೋಜನೆಯ ಮೊದಲ ಹಂತದ ಕೆಲಸ ಕಾರ್ಯಗಳು ಆರಂಭಗೊಂಡಿದೆ. 2ನೇ ಹಂತದ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿದೆ. ನಗರ ಸಭಾ ಡಂಪಿಂಗ್ ಯಾರ್ಡ್​ನ್ನು ರಾಜ್ಯದಲ್ಲಿಯೇ ಮಾದರಿ ಡಂಪಿಂಗ್ ಯಾರ್ಡ್ ಮಾಡುವ ಕನಸು ಶೀಘ್ರದಲ್ಲಿಯೇ ಈಡೇರಲಿದೆ ಎಂದರು.

ರೋಟರಿ ಈಸ್ಟ್ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಈ ಯೋಜನೆ ಕಸಮುಕ್ತ ಪುತ್ತೂರು ಮಾಡುವಲ್ಲಿ ಸಹಕಾರಿಯಾಗಲಿದೆ. ಇದು ರಾಷ್ಟ್ರದಲ್ಲಿಯೇ ಮಾದರಿ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಒಣ ಕಸವನ್ನು ಹಾಗೂ 2ನೇ ಹಂತದಲ್ಲಿ ಹಸಿ ಕಸವನ್ನು ಬೇರ್ಪಡಿಸುವ ಕೆಲಸ ನಡೆಯಲಿದೆ ಎಂದರು.

ಈ ವೇಳೆ ನಗರಸಭಾ ಪೌರಾಯುಕ್ತ ಮಧು.ಎಸ್ ಮನೋಹರ್, ರಾಜೇಶ್ ಬೇಜ್ಜಾoಗಳ, ರೋಟರಿ ಕ್ಲಬ್​​ನ ಎಲ್ಲಾ ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.