ETV Bharat / state

ಮಂಗಳೂರು ದಸರಾ ಮಹೋತ್ಸವಕ್ಕೆ ಡಾ.ಆರತಿ ಕೃಷ್ಣ ಚಾಲನೆ - ಮಂಗಳೂರು ಲೇಟೆಸ್ಟ್​ ಅಪ್​ಡೇಟ್​ ನ್ಯೂಸ್​

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಮಹೋತ್ಸವವು 'ನಮ್ಮ ದಸರಾ ನಮ್ಮ ಸುರಕ್ಷೆ' ಎಂಬ ಘೋಷ ವಾಕ್ಯದಡಿ ಆಚರಣೆಯಾಗಲಿದೆ.

Dr. Arathi Krishna inaugurates Mangalore Dasara
ಮಂಗಳೂರು ದಸರಾ ಮಹೋತ್ಸವಕ್ಕೆ ಡಾ.ಆರತಿ ಕೃಷ್ಣ ಚಾಲನೆ
author img

By

Published : Oct 17, 2020, 3:38 PM IST

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಎನ್ಆರ್​ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಇಂದು ಮಧ್ಯಾಹ್ನ ಚಾಲನೆ ನೀಡಿದರು.

ಮಂಗಳೂರು ದಸರಾ ಮಹೋತ್ಸವಕ್ಕೆ ಡಾ.ಆರತಿ ಕೃಷ್ಣ ಚಾಲನೆ

ನವದುರ್ಗಾ, ಗಣಪತಿ ಹಾಗೂ ಶಾರದಾ ಮಾತೆಯ ಮೂರ್ತಿಯ ಪ್ರತಿಷ್ಠಾಪನೆಯ ಬಳಿಕ ಡಾ‌.ಆರತಿ ಕೃಷ್ಣ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವು 'ನಮ್ಮ ದಸರಾ ನಮ್ಮ ಸುರಕ್ಷೆ' ಎಂಬ ಘೋಷ ವಾಕ್ಯದಡಿ ಆಚರಣೆಯಾಗಲಿದೆ.

ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಡಾ‌.ಆರತಿ ಕೃಷ್ಣ, ಅಮೆರಿಕಾದ ರಾಯಭಾರಿ ಕಚೇರಿಯಲ್ಲಿ ಇದ್ದಾಗಿನಿಂದಲೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹೋಗುತ್ತಿದ್ದೆ. ಇಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ಮಾಡಲು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ಈ ಅವಕಾಶ ನೀಡಿದ ದೇವಳದ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ, ದೇವಳದ ಅಧ್ಯಕ್ಷ ಸಾಯಿರಾಂ ಹಾಗೂ ಕೋಶಾಧಿಕಾರಿ ಪದ್ಮರಾಜ್ ಮತ್ತಿತರರಿಗೆ ಅಭಿನಂದನೆ ತಿಳಿಸುತ್ತಿದ್ದೇನೆ ಎಂದರು.

ಈ ಬಾರಿ ಇಲ್ಲಿನ ದಸರಾ ಮಹೋತ್ಸವವು 'ನಮ್ಮ ದಸರಾ ನಮ್ಮ ಸುರಕ್ಷೆ' ಎಂಬ ಘೋಷ ವಾಕ್ಯದಡಿ ಶಿಸ್ತುಬದ್ಧವಾಗಿ ಆಚರಣೆಯಾಗುತ್ತಿದೆ. ಮಹೋತ್ಸವವು ನಮ್ಮ ನಾಡಿಗೆ ಬಂದಿರುವ ಸಂಕಷ್ಟ ಹಾಗೂ ಜನರ ಕಷ್ಟಗಳನ್ನು ದೂರ ಮಾಡಲಿ. ಹಾಗೆಯೇ ಆರ್ಥಿಕ ಚೈತನ್ಯ ನೀಡಲಿ ಎಂದು ನವದುರ್ಗೆಯರ ಸಹಿತ ಶಾರದಾ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.