ಮಂಗಳೂರು: ಮಹಾನಗರ ಪಾಲಿಕೆಯ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಹಾಗೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ವತಿಯಿಂದ ಪಾಲಿಕೆಯ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಕಿಟ್ ವಿತರಣೆ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ 240 ಪೌರ ಕಾರ್ಮಿಕರಿಗೆ, ನೀರು ಸರಬರಾಜು ಇಲಾಖೆಯಲ್ಲಿರುವ 180 ತಾತ್ಕಾಲಿಕ ಕಾರ್ಮಿಕರಿಗೆ, ಒಳ ಚರಂಡಿ ವ್ಯವಸ್ಥೆಯ 150 ತಾತ್ಕಾಲಿಕ ಕಾರ್ಮಿಕರಿಗೆ, ಎಂ. ಪಿ. ಡಬ್ಲ್ಯೂ 85 ಕಾರ್ಮಿಕರಿಗೆ, 25 ವಾಹನ ಚಾಲಕರಿಗೆ, 100 ಆಶಾ ಕಾರ್ಯಕರ್ತರಿಗೆ, 110 ಅಂಗನವಾಡಿ ಕಾರ್ಯಕರ್ತೆಯರಿಗೆ, 35 ವೆನ್ಲಾಕ್ ಆಸ್ಪತ್ರೆಯಲ್ಲಿ ದಿನಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಲಾಯಿತು.
ಮಂಗಳೂರು ನಗರದಲ್ಲಿರುವ ಸಿವಿಲ್ ಎಂಜಿನಿಯರ್ ಅಸೋಸಿಯೇಷನ್ 1000 ಕಿಟ್ ಒದಗಿಸಿದ್ದು, ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು 200 ಕಿಟ್ ಒದಗಿಸಿದ್ದಾರೆ. ಮುಂದಿನ ಹಂತದಲ್ಲಿ 1 ಸಾವಿರ ಕಿಟ್ ಗಳನ್ನು ಆಂಟೋನಿ ವೆ ಸ್ಟ್ ಕಾರ್ಮಿಕರಿಗೆ ವಿತರಿಸುವ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಇನ್ನೂ, ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ದಿವಾಕರ ಪಾಂಡೇಶ್ವರ, ಕಿಟ್ ವಿತರಣೆ ಮಾಡಿದರು. ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಮತ್ತಿತರರು ಉಪಸ್ಥಿತರಿದ್ದರು.