ಮಂಗಳೂರು: ಕೋವಿಡ್-19 ಭೀತಿಯ ಪರಿಣಾಮ ಸಂಕಷ್ಟಕ್ಕೆ ಒಳಗಾದ ಪೌರಕಾರ್ಮಿಕರಿಗೆ ಮಂಗಳೂರಿನ ಬಿ ಹ್ಯೂಮನ್ (ಅಲೋಶಿಯಸ್ ಕಾಲೇಜು 1989 ಬ್ಯಾಚ್) ಸಂಸ್ಥೆ ನಗರದ ಬಾವುಟ ಗುಡ್ಡೆಯಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿತು.
ಆ್ಯಂಟನಿ ವೇಸ್ಟ್ನ ಮೂಲಕ ನಗರದ ತ್ಯಾಜ್ಯ ವಿಲೇವಾರಿ ಮಾಡುವ ಮಹಿಳೆಯರು, ಪುರುಷರು ಸೇರಿದಂತೆ ಸುಮಾರು 170 ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ಈ ಆಹಾರ ಪದಾರ್ಥಗಳ ಕಿಟ್ ಎರಡು ಮಂದಿಗೆ ಒಂದು ತಿಂಗಳಿಗಾಗುವ 2000 ಸಾವಿರ ರೂ. ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಒಳಗೊಂಡಿದೆ.
ಬಿ ಹ್ಯೂಮನ್ ಸಂಸ್ಥೆಯ ಅಶ್ರಫ್ ಡೀಲ್ಸ್, ಮನ್ಸೂರ್ ಅಜಾದ್ ನೇತೃತ್ವದ ತಂಡ ಕೋವಿಡ್-19 ಸೋಂಕಿನ ಪರಿಣಾಮ ಲಾಕ್ಡೌನ್ ಆದ ಬಳಿಕ ಮಾಡಲು ಕೆಲಸವಿಲ್ಲದೆ, ತಿನ್ನಲು ಕೂಳಿಲ್ಲದಿರುವ ಬಡವರಿಗೆ ಕಳೆದ 25 ದಿನಗಳಿಂದ ಆಹಾರ ಪದಾರ್ಥಗಳ ಕಿಟ್ ನೀಡುವ ಕಾರ್ಯದಲ್ಲಿ ತೊಡಗಿದೆ. ಈಗಾಗಲೇ ಸಾವಿರಾರು ಮಂದಿಗೆ ಈ ಸಂಸ್ಥೆ ಆಹಾರ ಪದಾರ್ಥಗಳ ಕಿಟ್ ಒದಗಿಸಿದೆ.