ETV Bharat / state

ಪುತ್ತೂರು; ನಿರ್ಮಾಣವಾಗಿ 3 ವರ್ಷ ಕಳೆದರೂ ಪಾಳು ಬಿದ್ದಿರುವ ಪೊಲೀಸ್ ವಸತಿ ಗೃಹ - ಪುತ್ತೂರಿನ ಪೊಲೀಸ್ ವಸತಿ ಗೃಹ

ಪುತ್ತೂರು ನಗರದ ಪಕ್ಕದ ಬನ್ನೂರು ಬಲಮುರಿ ಗಣಪತಿ ದೇವಳದ ಸಮೀಪ ಎಸ್​ಐಗಳಿಗಾಗಿ ನಿರ್ಮಿಸಲಾದ ವಸತಿ ಗೃಹವನ್ನು ನಿರ್ಮಾಣಗೊಂಡ ಒಂದು ವರ್ಷದ ನಂತರ ಪುತ್ತೂರು ಪೊಲೀಸ್ ಉಪವಿಭಾಗಕ್ಕೆ 2018ರ ಸೆಪ್ಟಂಬರ್ 20ರಂದು ಹಸ್ತಾಂತರಿಸಲಾಗಿದೆ. ಆದರೆ ಎಸ್​ಐಗಳಿಗಾಗಿಯೇ ಈ ವಸತಿ ಗೃಹ ನಿರ್ಮಾಣಗೊಂಡಿದ್ದರೂ ಯಾವ ಪೊಲೀಸ್ ಅಧಿಕಾರಿಗಳು ವಾಸ್ತವ್ಯಕ್ಕೆ ಮುಂದಾಗದೇ ಇರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.

dilapidated police quarters in Puttur
ಪಾಳು ಬಿದ್ದಿರುವ ಪುತ್ತೂರಿನ ಪೊಲೀಸ್ ವಸತಿ ಗೃಹ
author img

By

Published : Jun 15, 2020, 10:47 PM IST

ಪುತ್ತೂರು: ಕಳೆದ 3 ವರ್ಷಗಳಿಂದ ಪುತ್ತೂರು ನಗರ ಠಾಣೆಯ ಎಸ್​ಐಗಳಿಗಾಗಿ ನಿರ್ಮಿಸಲಾದ ವಸತಿ ಗೃಹವೊಂದು ಅನಾಥ ಸ್ಥಿತಿಯಲ್ಲಿದೆ.

ಪಾಳು ಬಿದ್ದಿರುವ ಪುತ್ತೂರಿನ ಪೊಲೀಸ್ ವಸತಿ ಗೃಹ

ನಗರದ ಹೊರವಲಯದಲ್ಲಿ ಕೋಟ್ಯಾಂತರ ಮೌಲ್ಯದಲ್ಲಿ ನಿರ್ಮಿಸಲಾದ ಈ ಕಟ್ಟಡದಲ್ಲಿ ಎರಡು ಕುಟುಂಬಗಳು ವಾಸ್ತವ್ಯ ಹೂಡಬಹುದಾಗಿದೆ. ಪುತ್ತೂರು ನಗರದ ಪಕ್ಕದ ಬನ್ನೂರು ಬಲಮುರಿ ಗಣಪತಿ ದೇವಳದ ಸಮೀಪದಲ್ಲಿ 25 ಸೆಂಟ್ಸ್ ನಿವೇಶನ ಪೊಲೀಸ್ ಇಲಾಖೆಯ ಹೆಸರಲ್ಲಿದೆ. ಇದರಲ್ಲಿ ಸ್ವಲ್ಪ ಭಾಗ ಅತಿಕ್ರಮಣವಾಗಿದೆ. ಉಳಿದ ಸ್ಥಳದಲ್ಲಿ ತಲಾ 850 ಚದರ ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ವಸತಿಗೃಹಕ್ಕೆ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ಕೊಳವೆಬಾವಿ ಮತ್ತಿತರ ಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ.

ಈ ಕಟ್ಟಡ ನಿರ್ಮಾಣಗೊಂಡ ಒಂದು ವರ್ಷದ ನಂತರ ಪುತ್ತೂರು ಪೊಲೀಸ್ ಉಪವಿಭಾಗಕ್ಕೆ 2018ರ ಸೆಪ್ಟಂಬರ್ 20ರಂದು ಹಸ್ತಾಂತರಿಸಲಾಗಿದೆ. ಪೊಲೀಸ್ ಹೌಸಿಂಗ್ ಬೋರ್ಡ್ ನಿರ್ಮಿಸಿದ ಈ ಕಟ್ಟಡದ ಸುತ್ತ ಆವರಣ ಗೋಡೆ ಹೊರತು ಪಡಿಸಿದರೆ ಉಳಿದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆ ಮತ್ತು ಮಹಿಳಾ ಠಾಣೆಗಳಲ್ಲಿ ಪ್ರಸ್ತುತ 4 ಮಂದಿ ಎಸ್​ಐಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್​ಐಗಳಿಗಾಗಿಯೇ ಈ ವಸತಿ ಗೃಹ ನಿರ್ಮಾಣಗೊಂಡಿದ್ದರೂ ಯಾವ ಪೊಲೀಸ್ ಅಧಿಕಾರಿಗಳು ವಾಸ್ತವ್ಯಕ್ಕೆ ಮುಂದಾಗದೇ ಇರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.

ಮೇಲ್ನೋಟಕ್ಕೆ ಕಟ್ಟಡದ ಸುತ್ತ ಆವರಣ ಗೋಡೆ ಇಲ್ಲದಿರುವುದೇ ಕಟ್ಟಡದ ಅನಾಥ ಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ರಕ್ಷಣೆಯ ದೃಷ್ಟಿಯಿಂದ ಎಸ್​ಐಗಳು ಇಲ್ಲಿ ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಪೊಲೀಸ್ ಕುಟುಂಬದ ಮಕ್ಕಳಿಗೆ ಆಟವಾಡಲು ಪಾರ್ಕ್, ಆಟದ ಮೈದಾನದ ವ್ಯವಸ್ಥೆಗಳಿಲ್ಲದಿರುವುದು ಕೂಡ ಕಾರಣ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.