ETV Bharat / state

ಈ ಕ್ಷೇತ್ರಕ್ಕೆ ಭಕ್ತಿಯ ಕಾಣಿಕೆಯೇ 11 ಟನ್ ಗಂಟೆಗಳು.. ಇಲ್ಲಿದೆ ಪ್ರಸಿದ್ಧ ದೇವಾಲಯದ ಮಾಹಿತಿ.. - soutadka ganesha temple

ಭಕ್ತರು ತಮ್ಮ ಅಭೀಷ್ಠೆ ನೆರವೇರಿದ ನಂತರ ಕ್ಷೇತ್ರಕ್ಕೆ ಬಂದು ಗಂಟೆ ಸಮರ್ಪಣೆ ಮಾಡಿ ಹೋಗುತ್ತಾರೆ. ಇಲ್ಲಿ ಕಟ್ಟಿರುವ ಗಂಟೆಗಳೇ ಭಕ್ತರ ಕಷ್ಟ ದೂರವಾಗಿರೋದಕ್ಕೆ ಸಾಕ್ಷಿ ನುಡಿಯುತ್ತವೆ..

southadka-ganesha-temple
ಸೌತಡ್ಕ ಮಹಾಗಣಪತಿ ದೇವಾಲಯ
author img

By

Published : Sep 10, 2021, 5:32 PM IST

ಮಂಗಳೂರು : ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯ. ಆದರೆ, ನಾಡಿನ ಪ್ರಸಿದ್ದ ಕ್ಷೇತ್ರ ಶ್ರೀ ಸೌತಡ್ಕ ಮಹಾಗಣಪತಿ ದೇವಾಲಯಕ್ಕೆ ಪ್ರತಿವರ್ಷ 11 ಟನ್ ಗಂಟೆಗಳು ಬರುತ್ತಿವೆ. ಇದು ಇಲ್ಲಿನ ವಿಶೇಷ.

ಸೌತಡ್ಕ ಮಹಾಗಣಪತಿ ಬಗ್ಗೆ ಪ್ರಧಾನ ಅರ್ಚಕರು ಮಾತನಾಡಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವ ಕೊಕ್ಕಡ ಸಮೀಪದಲ್ಲೇ ಈ ದೇವಸ್ಥಾನವಿದೆ. ಈ ಕ್ಷೇತ್ರ ಭಕ್ತರ ಪಾಲಿಗೆ ಭಕ್ತಿ ಕೇಂದ್ರವೂ ಹೌದು. ಅತ್ಯಂತ ಸರಳವಾಗಿರುವ ಈ ದೇವಸ್ಥಾನದಲ್ಲಿ ಹರಕೆಯೂ ಕೂಡ ಅತಿ ಸರಳವಾಗಿದೆ.

ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ. ತಾವು ಬೇಡಿಕೊಂಡ ಬೇಡಿಕೆ ಈಡೇರಿಸಿದ ನಂತರ ಇಲ್ಲಿಗೆ ಭಕ್ತಾದಿಗಳು ಗಂಟೆಯನ್ನು ಸಮರ್ಪಿಸುತ್ತಾರೆ. ದಿನವೊಂದಕ್ಕೆ ನೂರಕ್ಕೂ ಅಧಿಕ ಗಂಟೆಗಳು ಕ್ಷೇತ್ರದಲ್ಲಿ ಸಮರ್ಪಿತವಾಗುತ್ತವೆ ಎನ್ನುವುದು ವಿಶೇಷ.

ಭಕ್ತರು ತಮ್ಮ ಅಭೀಷ್ಠೆ ನೆರವೇರಿದ ನಂತರ ಕ್ಷೇತ್ರಕ್ಕೆ ಬಂದು ಗಂಟೆ ಸಮರ್ಪಣೆ ಮಾಡಿ ಹೋಗುತ್ತಾರೆ. ಇಲ್ಲಿ ಕಟ್ಟಿರುವ ಗಂಟೆಗಳೇ ಭಕ್ತರ ಕಷ್ಟ ದೂರವಾಗಿರೋದಕ್ಕೆ ಸಾಕ್ಷಿ ನುಡಿಯುತ್ತವೆ. ಬಯಲು ಆಲಯದಲ್ಲೇ ಇರುವ ಈ ಮಹಾಗಣಪತಿಯ ವಿಗ್ರಹ, ಗೋವುಗಳನ್ನು ಮೇಯಿಸುತ್ತಿದ್ದ ಮಕ್ಕಳಿಗೆ ಸಿಕ್ಕಿತಂತೆ.

ಆ ಮಕ್ಕಳು ಈ ಗಣಪತಿಗೆ ಸೌತೆಯಿಂದಲೇ ನೈವೇದ್ಯ ಸಲ್ಲಿಸುತ್ತಿದ್ರು. ಕ್ರಮೇಣ ಇದರಿಂದಲೇ ಸೌತಡ್ಕ ಎಂಬ ಹೆಸರು ಬಂದಿತೆಂಬ ಪ್ರತೀತಿ ಇದೆ. ಈ ಗಣಪನಿಗೆ ಆಲಯವನ್ನು ನಿರ್ಮಾಣ ಮಾಡುವುದಾದರೆ 24 ಗಂಟೆಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಕಾಣುವಷ್ಟು ಎತ್ತರದಲ್ಲಿ ನಿರ್ಮಾಣ ಮಾಡಬೇಕಂತೆ. ಈ ಕಾರಣಕ್ಕೆ ಬಯಲಲ್ಲೇ ಗಣಪ ನೆಲೆ ನಿಂತಿದ್ದಾನೆ.

ಚೌತಿ ಸಂದರ್ಭ ವಿಶೇಷ ಪೂಜೆ-ಪುನಸ್ಕಾರಗಳು ಗಣಪತಿಗೆ ಸಲ್ಲಿಕೆಯಾಗುತ್ತೆ. ಹೀಗಾಗಿ, ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ಗಣಪನ ದರ್ಶನ ಪಡೆಯುತ್ತಾರೆ. ಇಲ್ಲಿ ಅವಲಕ್ಕಿ ಪ್ರಸಾದ ವಿಶೇಷ ಸೇವೆಯಾಗಿದೆ. ಹೆಚ್ಚಿನ ಭಕ್ತರು ಇದನ್ನು ಮಾಡಿಸುತ್ತಾರೆ. ಇದರ ಜೊತೆ ರಂಗಪೂಜೆ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಬರುವ ವಾನರಗಳಿಗೆ ಇದೇ ಪ್ರಸಾದವನ್ನು ಆಹಾರ ರೂಪದಲ್ಲಿ ನೀಡಲಾಗುತ್ತೆ.

ಓದಿ: ಗಣಾಧಿಪತಿಗೂ ವಿಘ್ನವುಂಟಂತೆ.. ಬಲಮುರಿ ಗಣಪನ ಬಗೆಗಿನ ಪಾಪ-ಪುಣ್ಯದ ಪರೀಕ್ಷೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.