ETV Bharat / state

ದಂತ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ​: 6 ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಕೇಸ್​ - Medical students fight

ದಂತ ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ - ಸುಳ್ಯದ ಕೆವಿಜಿ ದಂತ ಕಾಲೇಜು ವಿದ್ಯಾರ್ಥಿನಿ - ಆರು ಸಹ ವಿದ್ಯಾರ್ಥಿಗಳ ಮೇಲೆ ಕೇಸ್​ ದಾಖಲು

Dental student assaulted in sulya
ದಂತ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ
author img

By

Published : Dec 29, 2022, 12:23 PM IST

Updated : Dec 29, 2022, 12:29 PM IST

ಸುಳ್ಯ: ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾ ಸೀಟು ಸಿಕ್ಕಿತು ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿಗೆ ಕಿರುಕುಳ, ಹಲ್ಲೆ ಮಾಡಿದ ಮಾಡಿದ ಆರೋಪದ ಮೇಲೆ 6 ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರಿನ ನಿವಾಸಿಯಾದ ವಿದ್ಯಾರ್ಥಿನಿ ಸುಳ್ಯದ ಕೆವಿಜಿ ದಂತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬುದ್ಧಿವಂತೆ ಆಗಿರುವ ವಿದ್ಯಾರ್ಥಿನಿ ಸರ್ಕಾರಿ ಕೋಟಾದಲ್ಲಿ ಕಾಲೇಜಿನಲ್ಲಿ ಸೀಟು ಸಂಪಾದಿಸಿದ್ದಾರೆ. ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯೆ ಕಿತ್ತಾಟ ನಡೆಯುತ್ತಿತ್ತು.

ಡಿಸೆಂಬರ್​ 21 ರಂದು ವಿದ್ಯಾರ್ಥಿನಿ ತನ್ನ ಅಣ್ಣ ಮತ್ತು ಸ್ನೇಹಿತನ ಜೊತೆ ರೆಸ್ಟೋರೆಂಟ್​ನಲ್ಲಿ ಊಟ ಮುಗಿಸಿಕೊಂಡು ಹೋಗುತ್ತಿದ್ದಾಗ, ಅಲ್ಲಿಗೆ ಬಂದ ಆರೋಪಿಗಳು ತಗಾದೆ ತೆಗೆದಿದ್ದಾರೆ. ಬಳಿಕ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಹೊಟ್ಟೆಗೂ ಒದ್ದಿದ್ದಾರೆ. ಇದನ್ನು ಬಿಡಿಸಲು ಬಂದ ಆಕೆಯ ಸಹೋದರನ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿನಿ ಸುಳ್ಯದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮೈಸೂರಿನಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಇದೀಗ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವಿದ್ಯಾರ್ಥಿನಿ ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಮೂರನೇ ಮದುವೆಯಾದರೂ ಎರಡನೇ ಗಂಡನ ಜೊತೆ ಸಂಬಂಧ; ಹೆಂಡತಿ ಕೊಂದು ಶವದ ಜೊತೆ ರಾತ್ರಿ ಕಳೆದ ಗಂಡ

Last Updated : Dec 29, 2022, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.