ETV Bharat / state

ಮಂಗಳೂರಿನಲ್ಲಿ ಭಾರಿ ಮಳೆ: ವಿಮಾನ ಸಂಚಾರದಲ್ಲಿ ವ್ಯತ್ಯಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆಯಾಗುತ್ತಿದ್ದು, ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

delay-of-the-aero-plane-due-to-heavy-rain-in-manglore
ಮಂಗಳೂರಿನಲ್ಲಿ ಭಾರಿ ಮಳೆ : ವಿಮಾನ ಸಂಚಾರದಲ್ಲಿ ವ್ಯತ್ಯಯ
author img

By

Published : Jun 30, 2022, 9:55 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಜಡಿಮಳೆಗೆ ಜಿಲ್ಲೆಯ ಜನತೆ ತತ್ತರಿಸಿದ್ದು, ವಿಮಾನ‌ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಾದ ಬೆಂಗಳೂರು ಮತ್ತು ಹೈದರಾಬಾದ್‌ನ ವಿಮಾನಗಳು ವಿಳಂಬವಾಗಿ ಮಂಗಳೂರು ತಲುಪಿದೆ.

ಬೆಂಗಳೂರಿನಿಂದ ಬಂದ ವಿಮಾನವು 16 ನಿಮಿಷ ತಡವಾಗಿದ್ದರೆ, ಹೈದರಾಬಾದ್‌ನಿಂದ ಬಂದ ವಿಮಾನ 7 ನಿಮಿಷ ತಡವಾಗಿ ಮಂಗಳೂರು ತಲುಪಿತು. ಮಂಗಳೂರು- ಬೆಂಗಳೂರು- ಕೊಲ್ಕತ್ತಾ ವಿಮಾನವು 16 ನಿಮಿಷ ತಡವಾಗಿ ಆಗಮಿಸಿ 50 ನಿಮಿಷ ತಡವಾಗಿ ಹೊರಟಿದೆ.

ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ ತೆರವು: ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುವ ರೈಲ್ವೆ ಮಾರ್ಗದಲ್ಲಿ ಇಂದು ಬೆಳಿಗ್ಗೆ ಗುಡ್ಡ ಕುಸಿತ ಸಂಭವಿಸಿದ್ದು, ಅದನ್ನು ತೆರವುಗೊಳಿಸಲಾಗಿದೆ. ಇಂದು ಬೆಳಿಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಪಡೀಲ್ ಮಧ್ಯೆ ರೈಲ್ವೆ ಹಳಿಯಲ್ಲಿ ಗುಡ್ಡ ಕುಸಿತವಾಗಿತ್ತು. ಇದರಿಂದ ಮಂಗಳೂರು ಮತ್ತು ಸುಬ್ರಹ್ಮಣ್ಯ ರಸ್ತೆಯಲ್ಲಿ ಸಂಚರಿಸುವ ಎರಡು ರೈಲನ್ನು ರದ್ದುಪಡಿಸಲಾಗಿತ್ತು. ರೈಲ್ವೆ ಹಳಿಗೆ ಬಿದ್ದ ಗುಡ್ಡ ಕುಸಿತದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ: ಎಲ್ಲೆಡೆ ರಾರಾಜಿಸುತ್ತಿರುವ ಬ್ಯಾನರ್, ಫ್ಲೆಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.