ETV Bharat / state

ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ದೀಕ್ಷಾ - ಬೆಳ್ತಂಗಡಿಯ ದೀಕ್ಷಾ

NCERT ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿಯ ದೀಕ್ಷಾ ಪ್ರಥಮ ಸ್ಥಾನ ಗಳಿಸಿದ್ದಾರೆ.

Deeksha first rank in national entrance examination

author img

By

Published : Sep 14, 2022, 3:35 PM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (National Council of Educational Research and Training) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ದೀಕ್ಷಾ ಬಿ.ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇಲ್ಲಿ ಆಯ್ಕೆಯಾದವರು ಪ್ರಾದೇಶಿಕ ಶಿಕ್ಷಣ ಸಂಸ್ಥೆ (Regional Institution of Education) ಗಳಲ್ಲಿ ಮೂಲವಿಜ್ಞಾನ ಓದಲು ಅರ್ಹತೆ ಪಡೆಯುತ್ತಾರೆ. ಆರ್​ಐಇ ಮೈಸೂರಿನಲ್ಲಿ ಉನ್ನತ ವ್ಯಾಸಂಗಕ್ಕೆ ದೀಕ್ಷಾ ಅವರು ಆಯ್ಕೆಯಾಗಿದ್ದಾರೆ. ಎಂಎಸ್ಸಿ ಇಡಿ ಮತ್ತು ಬಿಎಸ್ಸಿ ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೀಕ್ಷಾ ಎಂಎಸ್ಸಿ ಇಡಿ ಗಣಿತ ಮತ್ತು ಎಂಎಸ್ಸಿ ಇಡಿ ರಸಾಯನ ಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ, ಬಿಎಸ್ಸಿ ಇಡಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ದೀಕ್ಷಾ ಈ ಮೊದಲು ದ್ವಿತೀಯ ಪಿಯು ಪರೀಕ್ಷೆಯಲ್ಲಿ 593 (98.83) ಅಂಕವನ್ನು ಗಳಿಸಿ ರಾಜ್ಯಕ್ಕೆ 6ನೇ ಸ್ಥಾನವನ್ನು ಸಂಪಾದಿಸಿದ್ದರು. ಸಿಇಟಿಯಲ್ಲೂ ಉತ್ತಮ ರ‍್ಯಾಂಕ್ ಪಡೆದಿದ್ದರು. ದೀಕ್ಷಾ ಉಜಿರೆ ಎಸ್​ಡಿಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಧರ ಭಟ್ ಮತ್ತು ಹಳೇಪೇಟೆಯ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕಿ ವೀಣಾ ಶ್ಯಾನುಭಾಗ ದಂಪತಿಯ ಪುತ್ರಿ.

ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಮತ್ತು ಉಜಿರೆ ಎಸ್​ಡಿಎಂ ಆಂಗ್ಲಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುವ ದೀಕ್ಷಾ ಸಂಗೀತದಲ್ಲಿ ಜ್ಯೂನಿಯರ್ ಮತ್ತು ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆ ಸಹ ಮುಗಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ತಮ್ಮನ ಬಾಳು ಹಾಳಾಯ್ತೆಂದು ಮನನೊಂದು ಅಕ್ಕ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.