ETV Bharat / state

ಕ್ಯಾಟರಿಂಗ್​ ಮಾಡಲು ಬಂದ ವ್ಯಕ್ತಿ ಲಿಫ್ಟ್​ನಲ್ಲಿ ಸಿಲುಕಿ ಸಾವು... ಪ್ರತಿಭಟನೆ

ಮಂಗಳೂರು, ಮದುವೆ ಹಾಲ್‌ನಲ್ಲಿ ಕೆಟ್ಟುಹೋದ ಲಿಫ್ಟ್ ನಲ್ಲಿ ಸಿಲುಕಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದಿದೆ.

death-of-a-man-trapped-in-a-lift-in-mangalore
ಕ್ಯಾಟರಿಂಗ್​ ಮಾಡಲು ಬಂದ ವ್ಯಕ್ತಿ ಲಿಫ್ಟ್​ನಲ್ಲಿ ಸಿಲುಕಿ ಸಾವು
author img

By

Published : Mar 1, 2020, 10:47 PM IST

ಮಂಗಳೂರು: ಮದುವೆ ಹಾಲ್‌ನಲ್ಲಿ ಕೆಟ್ಟುಹೋದ ಲಿಫ್ಟ್ ನಲ್ಲಿ ಸಿಲುಕಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದಿದೆ.

ತುಂಬೆ ಸಮೀಪದ ವಳವೂರಿನ ಹಂಝ (30) ಮೃತಪಟ್ಟವರು. ಕುದ್ರೋಳಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಂಝ ಅವರು ರಾ.ಹೆ. 66ರ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ‌ ಕ್ಯಾಟರಿಂಗ್ ಕೆಲಸ ಮಾಡಲು ಬಂದಿದ್ದಾಗ ಈ ದುರಂತ ಸಂಭವಿಸಿದೆ.

death-of-a-man-trapped-in-a-lift-in-mangalore
ಕ್ಯಾಟರಿಂಗ್​ ಮಾಡಲು ಬಂದ ವ್ಯಕ್ತಿ ಲಿಫ್ಟ್​ನಲ್ಲಿ ಸಿಲುಕಿ ಸಾವು

ಮೂರನೇ ಮಹಡಿಯಿಂದ ಸಾಮಗ್ರಿಗಳನ್ನು ಕೆಳಗೆ ತರುತ್ತಿದ್ದ ಸಂದರ್ಭದಲ್ಲಿ ಲಿಫ್ಟ್‌ನ ರೋಪ್ ಸಡಿಲಗೊಂಡ ಪರಿಣಾಮ ಆಯತಪ್ಪಿ ಬಿದ್ದ ಹಂಝ ಲಿಫ್ಟ್‌ನೊಳಗೆ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಗಾಯಗೊಂಡ ಹಂಝ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇಂತಹ ದುರಂತ ಸಂಭವಿಸಿದ್ದರೂ ಹಾಲ್ ನ ಮಾಲಕರು ಸರಿಯಾಗಿ ಸ್ಪಂದನೆ ನೀಡಿಲ್ಲ ಎಂದು ಹಾಲ್ ಎದುರುಗಡೆ ಪ್ರತಿಭಟನೆಯೂ ನಡೆಯಿತು. ಕೆಲಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.