ETV Bharat / state

ಉಳ್ಳಾಲ: ಚರಂಡಿಯಲ್ಲಿ ಸೆಕ್ಯುರಿಟಿ ಗಾರ್ಡ್ ಶವ ಪತ್ತೆ - ETv Bharat kannada news

ಉಳ್ಳಾಲದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದು ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

Dead body of security found
ಸೆಕ್ಯುರಿಟಿ ಗಾಡ್೯ ಶವಪತ್ತೆ
author img

By

Published : Dec 30, 2022, 10:05 PM IST

ಉಳ್ಳಾಲ (ಮಂಗಳೂರು) : ಉಳ್ಳಾಲದ ಕುತ್ತಾರ್ ಜಂಕ್ಷನ್​ ಬಳಿ ಮಳೆ ನೀರು ಹರಿಯುವ ಚರಂಡಿಯಲ್ಲಿ ಇಂದು ಬೆಳಿಗ್ಗೆ ಸೆಕ್ಯುರಿಟಿ ಗಾರ್ಡ್‌ವೊಬ್ಬರ ಮೃತದೇಹ ದೊರೆತಿದೆ. ಮೃತ ವ್ಯಕ್ತಿಯನ್ನು ಕುಂಬಳೆ ನಿವಾಸಿ ಗಣೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಇವರು ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮೂಲಕ ನೇಮಕಗೊಂಡಿದ್ದರು. ಡಿ.27 ರಿಂದ ಇವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಇಂದು ನಸುಕಿನ ಜಾವ ಕುತ್ತಾರು ಜಂಕ್ಷನ್ನಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ‌. ಗಣೇಶ್ ಕುಡಿತದ ಚಟ ಅಂಟಿಸಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದು ಎಂದು ಸಾರ್ವಜನಿಕರು ಶಂಕಿಸಿದ್ದಾರೆ. ತಲೆಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚರಂಡಿಯಲ್ಲಿದ್ದ ಸೂಟ್‌ಕೇಸ್​ ತೆರೆದಾಗ ಕಾದಿತ್ತು ಶಾಕ್​.. ಅದರಲ್ಲಿತ್ತು ಅಪರಿಚಿತ ಮಹಿಳೆಯ ಶವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.