ETV Bharat / state

ಜೈಲಿಂದ ಬಿಡುಗಡೆಗೊಂಡ ಮರುದಿನವೇ ರೈಲ್ವೆ ಹಳಿ ಪಕ್ಕ ವ್ಯಕ್ತಿಯ ಮೃತದೇಹ ಪತ್ತೆ

ಕಳ್ಳತನ ಪ್ರಕರಣದಲ್ಲಿ 2 ವರ್ಷದಿಂದ ಜೈಲಿನಲ್ಲಿದ್ದು, ನಿನ್ನೆ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯ ಮೃತ ದೇಹ ತೊಕ್ಕೊಟ್ಟು ರೈಲ್ವೆ ಹಳಿ ಪಕ್ಕ ಪತ್ತೆಯಾಗಿದೆ.

Dead body found
ಮೃತದೇಹ ಪತ್ತೆ
author img

By

Published : Sep 29, 2020, 10:24 PM IST

ಉಳ್ಳಾಲ: ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದು, ಸೋಮವಾರವಷ್ಟೇ ಜೈಲಿನಿಂದ ಬಿಡುಗಡೆಗೊಂಡ ವ್ಯಕ್ತಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ರೈಲ್ವೆ ಹಳಿ ಹತ್ತಿರ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಬಜಾಲು ನಿವಾಸಿ ರಾಜೇಶ್ (48) ಮೃತಪಟ್ಟವರು. ಕಾವೂರು ಹಾಗೂ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ರಾಜೇಶ್ ಎರಡು ವರ್ಷಗಳಿಂದ ಮಂಗಳೂರು ಜೈಲಿನಲ್ಲಿದ್ದರು. ಮನೆ ಮಂದಿಯೂ ಜಾಮೀನಿಗೆ ಅರ್ಜಿ ಹಾಕುವ ಪ್ರಯತ್ನ ಮಾಡದೇ ಇದ್ದುದರಿಂದ ಜೈಲಿನಲ್ಲೇ ಉಳಿದುಕೊಂಡಿದ್ದರು.

ನಿನ್ನೆಯಷ್ಟೇ ಬಿಡುಗಡೆಗೊಂಡು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸ್ ಠಾಣಾ ಎಸ್.ಐ ತಾರಾನಾಥ್ , ಹೆಚ್.ಸಿ ಮಧುಚಂದ್ರ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.