ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸೇತುವೆ ಬಳಿ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು, ಈಜುಗಾರರು ದಡಕ್ಕೆ ತಂದಿದ್ದಾರೆ.
ಮೃತದೇಹದ ಜೊತೆಗಿದ್ದ ಪರ್ಸ್ನಲ್ಲಿ ಸಿಕ್ಕಿರುವ ದಾಖಲೆಗಳ ಪ್ರಕಾರ ಬೆಂಗಳೂರು ಪೀಣ್ಯ ಎಂಇಸಿ ಲೇಔಟ್ನ ದುಗ್ಗಲಮ್ಮ ದೇವಸ್ಥಾನ ಬಳಿ ನಿವಾಸಿ ಮುನಿಯಪ್ಪ ಎಂಬವರ ಪುತ್ರ ಶ್ರೀನಿವಾಸ (32) ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಗುರುತು ಪತ್ತೆ ಹಚ್ಚುವ ಕಾರ್ಯ ಸಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.