ETV Bharat / state

ಸಂಸದರ ಆದರ್ಶ ಗ್ರಾಮದ ಮನೆಯೊಳಗಿಲ್ಲ ವಿದ್ಯುತ್.. ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು.. - Dakshina Kannada MP's ideal village a home didnot have Electricity

ಇಲಾಖೆಗಳು ಯಾಕೆ ವಿದ್ಯುತ್ ಸಂಪರ್ಕ ನೀಡಲು ಮುಂದಾಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದಾಗ, ಇಲ್ಲಿ ಕುಶಾಲಪ್ಪ ಗೌಡರ 75 ಸೆಂಟ್ಸ್ ಜಾಗದ ಪಕ್ಕದಲ್ಲಿ ಮನೆಯ ನಾಲ್ಕು ಬದಿಗಳಲ್ಲಿ ಇವರ ಭೂಮಿಯ ಅಕ್ಕಪಕ್ಕ ಇತರ ವ್ಯಕ್ತಿಗಳ ಭೂಮಿ ಇದೆ. ಇದರಲ್ಲಿ ಅಡಿಕೆ ತೋಟ ಇದೆ. ಇವರು ತಮ್ಮ ಜಾಗದಲ್ಲಿ ವಿದ್ಯುತ್ ವೈಯರ್ ಎಳೆಯಲು ಅವಕಾಶ ನೀಡ್ತಿಲ್ಲ..

ಆದರ್ಶ ಗ್ರಾಮದ ಮನೆಯೊಂದರಲಿಲ್ಲ ವಿದ್ಯುತ್
ಆದರ್ಶ ಗ್ರಾಮದ ಮನೆಯೊಂದರಲಿಲ್ಲ ವಿದ್ಯುತ್
author img

By

Published : Feb 15, 2021, 10:29 PM IST

Updated : Feb 15, 2021, 10:55 PM IST

ಸುಳ್ಯ : ಸಂಸದರ ಆದರ್ಶ ಗ್ರಾಮ ಎಂಬ ಖ್ಯಾತಿ ಹೊಂದಿರುವ ಬಳ್ಪ ಗ್ರಾಮದ ಅರ್ಗುಡಿ ಕುಶಾಲಪ್ಪ ಗೌಡ ಎಂಬುವರ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಇಂದಿಗೂ ಈ ಮನೆಯ ಮಕ್ಕಳು ಡೀಸೆಲ್​ನ ಚಿಮಣಿ ದೀಪದಲ್ಲೇ ವಿದ್ಯಾಭ್ಯಾಸ ಮಾಡುವಂತಹ ಸ್ಥಿತಿ ಇದೆ.

ತಮ್ಮ ಮನೆಯಲ್ಲಿ ಕುಶಾಲಪ್ಪಗೌಡ ಹಾಗೂ ಪತ್ನಿ ಕಮಲ ಎಂಬುವರು ತಮ್ಮ ಇಬ್ಬರು ಗಂಡು ಮಕ್ಕಳ ಜತೆಗೆ ವಾಸವಾಗಿದ್ದಾರೆ. ಇವರಲ್ಲಿ ಮೊದಲನೆಯ ಮಗ 10ನೇ ತರಗತಿಯಲ್ಲಿ ಓದುತ್ತಿದ್ದರೆ, ಎರಡನೇ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ಮಕ್ಕಳು ರಾತ್ರಿ ವೇಳೆ ಡೀಸೆಲ್​ ಬಳಸಿ ಓದಬೇಕಾದ ಪರಿಸ್ಥಿತಿ ಎದುರಾಗಿದೆ.

ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು..

ಇವರಿಗೆ ತಿಂಗಳಿಗೆ ಆರು ಲೀಟರ್ ಡೀಸೆಲ್​ ದೀಪ ಉರಿಸಲು ಬೇಕಾಗುತ್ತದೆ. ಇದು ಈ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡೀಸೆಲ್​ ದೀಪದಿಂದ ಬರುವ ಹೊಗೆಯಿಂದಾಗಿ ಮಕ್ಕಳ ಆಗೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ. ಈ ಮಧ್ಯೆ ಕೊರೊನಾ ಸಂದರ್ಭದಲ್ಲಿ ಮೊಬೈಲ್​ನಲ್ಲಿ ತರಗತಿ ನಡೆಯುತ್ತಿರುವಾಗ ಅದರ ಯಾವುದೇ ಸೌಲಭ್ಯಗಳು ಈ ವಿದ್ಯಾರ್ಥಿಗಳಿಗೆ ದೊರೆತ್ತಿಲ್ಲ.

ಇದಕ್ಕೆಲ್ಲ ಮೂಲ ಕಾರಣ ಸಂಸದರ ಆದರ್ಶ ಗ್ರಾಮವಾದರೂ ಇವರ ಮನೆಗೆ ಒಂದು ವಿದ್ಯುತ್ ಸಂಪರ್ಕವನ್ನು ಕಲ್ಪಿಸದೇ ಇರುವುದು. ಈ ಮಕ್ಕಳ ತಂದೆ ಕುಶಾಲಪ್ಪ ಗೌಡರು ತನ್ನ ಮಕ್ಕಳು ತನ್ನ ಹಾಗೆ ಕೂಲಿ ಕೆಲಸ ಮಾಡಿ ಜೀವನ ಮಾಡಬಾರದು ಎಂಬ ಉದ್ದೇಶದಿಂದ ಇಲಾಖೆಯಿಂದ ಇಲಾಖೆಗಳಿಗೆ ತನ್ನ ಮನೆಯ ವಿದ್ಯುತ್ ಸಮಸ್ಯೆ ಹೇಳಿಕೊಂಡು ಸುಮಾರು 15 ಸಲ ಮನವಿ ಮಾಡಿದ್ದಾರೆ.

ಆದರೂ ಫಲ ಮಾತ್ರ ಇನ್ನೂ ಶೂನ್ಯ. ಈ ನಡುವೆ ವಿದ್ಯುತ್ ಮೀಟರ್ ಬಂದಿದೆಯೆಂದು ಹೇಳಿ ಯಾರೋ ಒಬ್ಬ ಖತರ್ನಾಕ್ ವ್ಯಕ್ತಿ ಕುಶಾಲಪ್ಪ ಗೌಡರ ಕೈಯಿಂದ ವಿದ್ಯುತ್ ಮೀಟರ್​ಗೋಸ್ಕರ ರೂಪಾಯಿ 1,200 ಲಪಟಾಯಿಸಿದ್ದಾನೆ ಎನ್ನಲಾಗಿದೆ.

ಓದಿ: ನಗದು, ಚಿನ್ನಾಭರಣದ ಬ್ಯಾಗ್ ಮರಳಿಸಿದ ರೈಲ್ವೆ ಟಿಟಿ: ಪ್ರಶಸ್ತಿ, ಪ್ರಮಾಣಪತ್ರ ನೀಡಿ ಗೌರವ

ಇಲಾಖೆಗಳು ಯಾಕೆ ವಿದ್ಯುತ್ ಸಂಪರ್ಕ ನೀಡಲು ಮುಂದಾಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದಾಗ, ಇಲ್ಲಿ ಕುಶಾಲಪ್ಪ ಗೌಡರ 75 ಸೆಂಟ್ಸ್ ಜಾಗದ ಪಕ್ಕದಲ್ಲಿ ಮನೆಯ ನಾಲ್ಕು ಬದಿಗಳಲ್ಲಿ ಇವರ ಭೂಮಿಯ ಅಕ್ಕಪಕ್ಕ ಇತರ ವ್ಯಕ್ತಿಗಳ ಭೂಮಿ ಇದೆ. ಇದರಲ್ಲಿ ಅಡಿಕೆ ತೋಟ ಇದೆ. ಇವರು ತಮ್ಮ ಜಾಗದಲ್ಲಿ ವಿದ್ಯುತ್ ವೈಯರ್ ಎಳೆಯಲು ಅವಕಾಶ ನೀಡದೇ ಇರುವುದೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

Last Updated : Feb 15, 2021, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.