ETV Bharat / state

ಒಟಿಪಿ ಪಡೆದು ಬ್ಯಾಂಕ್ ನಿಂದ 8 ಲಕ್ಷ ರೂಪಾಯಿ ಲೋನ್ :  7.47ಲಕ್ಷ ಪಂಗನಾಮ !

ನೆಲ್ಯಾಡಿಯ ಮಾದೇರಿಯಲ್ಲಿ ಆನ್​ಲೈನ್​ ವಂಚಕರು, ಪ್ರೌಢಶಾಲಾ ಶಿಕ್ಷಕಿಯ ಬ್ಯಾಂಕ್​ ಖಾತೆಯಿಂದ 8ಲಕ್ಷ ಲೋನ್​ ಪಡೆದು ಅದರಲ್ಲಿ 7.47ಲಕ್ಷ ರೂ ಕದ್ದಿದ್ದಾರೆ. ಎಟಿಎಂ ಬ್ಲಾಕ್​ ಆಗಿದೆ ಅದನ್ನು ಸರಿಪಡಿಸಬೇಕಿದೆ ಇದಕ್ಕಾಗಿ ಮೊಬೈಲ್​ಗೆ ಬರುವ ಒಟಿಪಿಯನ್ನು ಕಳುಹಿಸುವಂತೆ ಹೇಳಿ ನಂಬಿಸಿ ವಂಚನೆ ಮಾಡಿರುವುದಾಗಿ ಶಿಕ್ಷಕಿ ಆರೋಪಿಸಿದ್ದಾರೆ.

author img

By

Published : Jun 25, 2022, 12:00 PM IST

cyber crime in nelyadi
ಒಟಿಪಿ ಪಡೆದು ಬ್ಯಾಂಕ್ ನಿಂದ 8ಲಕ್ಷ ರೂಪಾಯಿ ಲೋನ್ ಅದರಲ್ಲಿ 7.47ಲಕ್ಷ ಪಂಗನಾಮ !

ದಕ್ಷಿಣ ಕನ್ನಡ: ನೆಲ್ಯಾಡಿ ಸಮೀಪದ ಮಾದೇರಿ ಎಂಬಲ್ಲಿ ವಾಸವಿರುವ ಪ್ರೌಢಶಾಲಾ ಶಿಕ್ಷಕಿಯ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 7.47 ಲಕ್ಷ ರೂ. ಖನ್ನ ಹಾಕಿರುವ ಘಟನೆ ಮಾದೇರಿಯಲ್ಲಿ ನಡೆದಿದೆ.

ವಂಚಕರು ಎಟಿಎಂ ಕಾರ್ಡ್​ ಬ್ಲಾಕ್ ಆಗಿರುವುದಾಗಿ ಮೊದಲಿಗೆ ಮೆಸೇಜ್​ ಕಳುಹಿಸಿದ್ದಾರೆ. ನಂತರ ಕೆವೈಸಿ ಅಪ್ಡೇಟ್​ ಮಾಡುಲು ನಂಬರ್​ ಒಂದನ್ನು ನೀಡಿ ಅದಕ್ಕೆ ಕರೆ ಮಾಡುವಂತೆ ಮೆಸೇಜ್​ ರವಾನಿಸಿದ್ದಾರೆ. ಕೊಟ್ಟಿರುವ ನಂಬರಿಗೆ ಶಿಕ್ಷಕಿಯ ಮಗ ಕರೆ ಮಾಡಿ ಮಾತನಾಡಿದಾಗ, ನಿಮ್ಮ ಖಾತೆಯ ಪಿನ್ ಜನರೇಟ್ ಮಾಡಲು ನಿಮ್ಮ ಮನೆಯಲ್ಲಿರುವ ಇನ್ನೊಬ್ಬರ ಎಸ್​​​ಬಿಐ ಖಾತೆ ನಂಬರ್ ಹಾಗೂ ಮೊಬೈಲ್ ನಂಬರ್ ನೀಡುವಂತೆ ವಂಚಕರು ತಿಳಿಸಿದ್ದಾರೆ.

ನಂತರ ಕರೆ ಮಾಡಿ ಮೊಬೈಲ್​ಗೆ ಬಂದಿದ್ದ ಒಟಿಪಿ ಸಂಖ್ಯೆಯನ್ನು ಪಡೆದಿದ್ದಾರೆ. ಬಳಿಕ ಹತ್ತಿರದ ಎಟಿಎಂಗೆ ಹೋಗಲು ತಿಳಿಸಿ ತಾವು ಹೇಳುವ ಎಲ್ಲ ಕೆಲಸವನ್ನು ಮಾಡುವಂತೆ ಹೇಳುತ್ತಾರೆ. ಇದಾದ ಬಳಿಕ ಅವ ಖಾತೆಗೆ ಆನ್​ಲೈನ್​ ಮೂಲಕ 8 ಲಕ್ಷ ರೂ. ಲೋನ್​ ಪಡೆದು ಅದರಲ್ಲಿ 7.47 ಲಕ್ಷ ರೂ ಕದ್ದಿದ್ದಾರೆ. ಬಳಿಕ ಶಿಕ್ಷಕಿ ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ತಮ್ಮ ಖಾತೆಯಿಂದ ದುಡ್ಡು ಕದ್ದಿರುವುದ ತಿಳಿದು ಬಂದಿದೆ. ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಕನಿಷ್ಠ 10 ಸಾವಿರ ಲೋನ್ ಪಡೆಯಲು ಹಲವು ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕಾದ ಈ ಕಾಲದಲ್ಲಿ ಬ್ಯಾಂಕ್ ಗಳ ಸುರಕ್ಷತೆ ಬಗ್ಗೆ ಜನ ಪ್ರಶ್ನೆ ಮಾಡುವಂತಾಗಿದೆ.

ಇದನ್ನೂ ಓದಿ:ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ.. ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.