ಮಂಗಳೂರು: ನಗರದಲ್ಲಿ ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ಸಡಿಲಗೊಂಡಿದ್ದ ಕರ್ಫ್ಯೂ ನಾಳೆ ಬೆಳಗ್ಗೆವರೆಗೆ ಮುಂದುವರೆಯಲಿದ್ದು ನಗರ ಮತ್ತೆ ಸ್ತಬ್ಧಗೊಂಡಿದೆ.
ನಗರದಲ್ಲಿ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಕರ್ಫ್ಯೂವನ್ನು ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ಸಡಿಲಗೊಳಿಸಲಾಗಿತ್ತು. ಈ ವೇಳೆ, ದಿನಬಳಕೆಯ ಅಗತ್ಯ ವಸ್ತುಗಳ ಖರೀದಿಗೆ ಬಂದಿದ್ದ ಜನರು ವಸ್ತುಗಳನ್ನು ಖರೀದಿಸಿ ಮತ್ತೆ ಮನೆ ಕಡೆಗೆ ಹೊರಟರು.
ನಗರದ ಪ್ರಮುಖ ಸ್ಥಳಗಳಾದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಮಾರುಕಟ್ಟೆ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ, ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಗರದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.