ಮಂಗಳೂರು: ಐಜಿಪಿಐ ಕಾರಿಗೆ ಬೆಂಕಿ, ಪೊಲೀಸ್ ಠಾಣೆಯಲ್ಲಿಯೇ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆಗೆ ಯತ್ನ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಕುರಿತಂತೆ ದಾಖಲಾದ ಸುಮಾರು 46 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಬಿಜೆಪಿ ಸರ್ಕಾರ ಹಿಂಪಡೆಯಲು ನಿರ್ಧರಿಸಿರುವುದನ್ನು ಖಂಡಿಸಿ ಕಾನೂನು ಹೋರಾಟ ನಡೆಸುವುದಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಕೆ ರವಾನಿಸಿದ್ದಾರೆ.
ದಾಖಲಾದ 46 ಪ್ರಕರಣಗಳಲ್ಲಿ ಸಂಘ ಪರಿವಾರದ 35 ಪ್ರಕರಣಗಳು ಸೇರಿವೆ. 2006ರಿಂದ 2020ರವರೆಗೆ 500 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದರಲ್ಲಿ 390ಕ್ಕೂ ಅಧಿಕ ಪ್ರಕರಣಗಳು ಸಂಘ ಪರಿವಾರಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. ಹಾಗಾದ್ರೆ ಇಂತಹ ಕೃತ್ಯ ಎಸಗಿದವರ ಪ್ರಕರಣ ಹಿಂಪಡೆದರೆ ನ್ಯಾಯಾಲಯ ಯಾಕೆ? ಕಾನೂನು ಕ್ರಮದಿಂದ ನ್ಯಾಯ ಸಿಗದಿದ್ದರೆ ಹೇಗೆ ಎಂದು ಮಾಧ್ಯಮಗೋಷ್ಟಿಯಲ್ಲಿ ಅವರು ಪ್ರಶ್ನಿಸಿದರು.
ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ಹಾಗೂ ಬಿಜೆಪಿ ನಾಯಕರ ಕೇಸ್ಗಳನ್ನು ಹಿಂಪಡೆಯುತ್ತಿರುವುದು ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದು ಇಲ್ಯಾಸ್ ದೂರಿದರು.