ETV Bharat / state

ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸಕಾಲದಲ್ಲಿ ಪೌಷ್ಟಿಕ ಆಹಾರ : ಸೋಂಕಿತರು ಹ್ಯಾಪಿ - ಸೋಂಕಿತರಿಗೆ ಉತ್ತಮ ವ್ಯವಸ್ಥೆ

ಕೋವಿಡ್ ಸೋಂಕಿತರು ಇಲ್ಲಿ ದಾಖಲಾಗಿ ಸಂಪೂರ್ಣ ಆರೈಕೆಯೊಂದಿಗೆ ಕೋವಿಡ್ ಮುಕ್ತರಾಗುವುದರ ಜೊತೆಗೆ ತಮ್ಮ ಕುಟುಂಬಗಳಿಗೂ ಈ ರೋಗ ಹರಡದಂತೆ ಸುರಕ್ಷಿತತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ರಮೇಶ್ ಬಾಬು ವಿನಂತಿಸಿದ್ದಾರೆ..

ccc
ccc
author img

By

Published : May 24, 2021, 5:27 PM IST

Updated : May 24, 2021, 8:28 PM IST

ಪುತ್ತೂರು : ಪುತ್ತೂರಿನ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸಮಯಕ್ಕೆ ಸರಿಯಾಗಿ ಬಿಸಿ ನೀರು ಸಹಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ನಾವಿಲ್ಲಿ ಹ್ಯಾಪಿಯಾಗಿದ್ದೇವೆ, ಯಾವುದೇ ಸಮಸ್ಯೆಗಳಿಲ್ಲದೆ ಗುಣಮುಖರಾಗುತ್ತಿದ್ದೇವೆ ಎಂದು ಸೋಂಕಿತರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸೋಮವಾರ ತಹಶೀಲ್ದಾರ್ ರಮೇಶ್ ಬಾಬು ಅವರ ಜೊತೆಯಲ್ಲಿ ಪುತ್ತೂರಿನ ಪತ್ರಕರ್ತರು ಬಲ್ನಾಡು ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದಾಗ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ತಿಳಿಸಿದ ಮಾಹಿತಿಯಿದು.

ಪುತ್ತೂರಿನಲ್ಲಿ ಬಲ್ನಾಡು ಕೋವಿಡ್ ಕೇರ್ ಸೆಂಟರ್, ಪುತ್ತೂರು ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಹಾಗೂ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ಕೊವಿಡ್ ಕೇರ್ ಸೆಂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದೆ.

ಈ ಪೈಕಿ ಪ್ರಸ್ತುತ ಬಲ್ನಾಡುವಿನಲ್ಲಿ 28 ಮಂದಿ, ಪುತ್ತೂರಿನಲ್ಲಿ 12 ಮಂದಿ ಮತ್ತು ಉಪ್ಪಿನಂಗಡಿಯಲ್ಲಿ 3 ಮಂದಿ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸಕಾಲದಲ್ಲಿ ಪೌಷ್ಟಿಕ ಆಹಾರ

ಬಲ್ನಾಡುವಿನಲ್ಲಿ 43 ಮಂದಿ ಕೋವಿಡ್ ಸೋಂಕಿತರಾಗಿ ದಾಖಲಾತಿಗೊಂಡಿದ್ದು, 15 ಮಂದಿ ಗುಣಮುಖರಾಗಿ ಹಿಂದಿರುಗಿದ್ದಾರೆ. 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರಿನಲ್ಲಿ 24 ಮಂದಿ ದಾಖಲಾಗಿದ್ದಾರೆ.

4 ಮಂದಿ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. 30 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಉಪ್ಪಿನಂಗಡಿಯಲ್ಲಿ 3 ಮಂದಿ ದಾಖಲಾಗಿದ್ದು, ಮೂವರೂ ಚಿಕಿತ್ಸೆಯಲ್ಲಿದ್ದಾರೆ.

ಸಕಾಲದಲ್ಲಿ ಪೌಷ್ಠಿಕ ಆಹಾರ : ಕೋವಿಡ್ ಪೀಡಿತರಿಗೆ ಔಷಧಿಗಿಂತಲೂ ಪೌಷ್ಟಿಕ ಆಹಾರ ಒದಗಿಸುವುದು ಮುಖ್ಯವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವವರಿಗೆ ಬೆಳಗ್ಗೆ ತಿಂಡಿ-ಚಹಾ, ಮಧ್ಯಾಹ್ನದ ಊಟದ ಜೊತೆಗೆ ಮೊಟ್ಟೆ, ಫ್ರೂಟ್ಸ್​ ಸಂಜೆ ಕಷಾಯ, ರಾತ್ರಿ ಚಪಾತಿ, ಊಟ ನೀಡಲಾಗುತ್ತಿದೆ.

ಅಲ್ಲದೆ ನಿರಂತರ ಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿಯಾಗಿರುವ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್ ತಿಳಿಸಿದರು.

ಮನೆಗಿಂತ ಕೇರ್ ಸೆಂಟರ್ ಸುರಕ್ಷಿತ : ಮನೆಯಲ್ಲಿ ಕ್ವಾರಂಟೈನ್ ಆದ ಸಂದರ್ಭದಲ್ಲಿ ಮನೆಯ ಇತರ ಸದಸ್ಯರಿಗೆ ರೋಗ ಹರಡುವ ಅಪಾಯಗಳಿವೆ. ಆದರೆ, ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದರೆ ಇತರರಿಗೆ ಹರಡುವ ಅಪಾಯವಿಲ್ಲ.

ಈ ಹಿನ್ನೆಲೆ ಕೋವಿಡ್ ಸೆಂಟರ್ ಸೋಂಕಿತರಿಗೆ ಅತೀ ಸುರಕ್ಷಿತ ಸ್ಥಳವಾಗಿದೆ. ಸರ್ಕಾರದ ಆದೇಶದಂತೆ ಇಲ್ಲಿ ಎಲ್ಲಾ ರೀತಿಯ ಆರೈಕೆಯನ್ನು ಮಾಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್ ಬಗ್ಗೆ ಭಯ, ಆತಂಕ ಬೇಡ, ಕೋವಿಡ್ ಕೇರ್ ಸೆಂಟರ್‌ನ ಬಗ್ಗೆ ನಡೆಸಲಾಗುವ ಅಪಪ್ರಚಾರ, ವದಂತಿಗಳಿಗೆ ಯಾರೂ ಕಿವಿಗೊಡಬಾರದು.

ಕೋವಿಡ್ ಸೋಂಕಿತರು ಇಲ್ಲಿ ದಾಖಲಾಗಿ ಸಂಪೂರ್ಣ ಆರೈಕೆಯೊಂದಿಗೆ ಕೋವಿಡ್ ಮುಕ್ತರಾಗುವುದರ ಜೊತೆಗೆ ತಮ್ಮ ಕುಟುಂಬಗಳಿಗೂ ಈ ರೋಗ ಹರಡದಂತೆ ಸುರಕ್ಷಿತತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ರಮೇಶ್ ಬಾಬು ವಿನಂತಿಸಿದ್ದಾರೆ.

24x7 ವೈದ್ಯಕೀಯ ಸೇವೆ : ಕೋವಿಡ್ ಕೇರ್ ಸೆಂಟರ್‌ನಲ್ಲಿ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುತ್ತಿದೆ. ಬಲ್ನಾಡು ಕೋವಿಡ್ ಕೇರ್ ಸೆಂಟರ್‌ನಲ್ಲಿ ಡಾ. ಶಶಿಕಲಾ, ಡಾ. ವಿದ್ಯಾ ಎಂಬ ಇಬ್ಬರು ವೈದ್ಯರು ಹಾಗೂ ಸ್ಟಾಫ್ ನರ್ಸ್​ಗಳಾದ ಆಶಾ ಜಿ.ಕೆ ಮತ್ತು ಭಾಗ್ಯ ಅವರು ಅಲ್ಲಿಯೇ ಉಳಿದುಕೊಂಡು ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

Last Updated : May 24, 2021, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.